ಕಲಬುರಗಿ,ಜೂ.21:ಚಿಂಚೋಳಿ ತಾಲೂಕಾಡಳಿತ, ತಾಲೂಕ ಕಾನೂನು ಸೇವಾ ಸಮಿತಿ, ತಾಲೂಕ ನ್ಯಾಯವಾದಿಗಳ ಸಂಘ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೂಸೈಟಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ-1098/112, ಸಂಸ್ಕಾರ ಪ್ರತಿμÁ್ಠನ ಸಂಸ್ಥೆ, ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಕಲಬುರಗಿ ಹಾಗೂ ಗ್ರಾಮೀಣ ಶಿಕ್ಷ ಮತ್ತು ಆರೋಗ್ಯ ಸಂಸ್ಥೆ (ಖಐಊP) ಮೈಸೂರು ಇವುಗಳ ಸಂಯುಕ್ತಾಶ್ರಯದಲ್ಲಿ “ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನ” ಅಂಗವಾಗಿ ಬಾಲಕಾರ್ಮಿಕ ನಿರ್ಮೂಲನಾ ಜಾಥಾಕ್ಕೆ ಚಿಂಚೋಳಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕ ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ರವಿಕುಮಾರ ಅವರು ಚಿಂಚೋಳಿಯಲ್ಲಿ ಹಸಿರು ನಿಶಾನೆ ತೋರಿಸುವುದರ ಮೂಲಕ ಬುಧವಾರ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ, “18 ವರ್ಷದೊಳಗಿನ ಮಕ್ಕಳನ್ನು ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಮಕ್ಕಳನ್ನು ದುಡಿಮೆಗೆ ಕಳುಹಿಸದೇ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು. ಮಕ್ಕಳನ್ನು ದುಡಿಸಿಕೊಂಡ ಮಾಲೀಕರುಗಳ ಮೇಲೆ ಪ್ರಕರಣಗಳು ದಾಖಲಿಸುವಂತೆ ಸೂಚಿಸಿದರು.
ತಾಲೂಕ ನ್ಯಾಯಾಲಯದಿಂದ ಆರಂಭಗೊಂಡ ಈ ಜಾಥಾವು ಮುಖ್ಯರಸ್ತೆ, ಬಸ್ ನಿಲ್ದಾಣ ಮೂಲಕ ಸರಕಾರಿ ಕನ್ಯಾ ಪೌಡ ಶಾಲೆಗೆ ಬಂದು ಕೊನೆಗೊಂಡಿತು. ಆಟೋ ದ್ವನಿವರ್ಧಕ ಮೂಲಕ ಬಿತ್ತಿ ಪತ್ರಗಳು ಹಂಚುವುದರ ಮೂಲಕ "ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳನ್ನು ದುಡಿಸಿಕೊಂಡಲ್ಲಿ ಮಾಲೀಕರುಗಳ ಮೇಲೆ 20,000 ರೂ. ರಿಂದ 50,000 ರೂ. ವರೆಗೂ ದಂಡ ಮತ್ತು 6 ತಿಂಗಳಿಂದ 2 ವರ್ಷಗಳ ವರೆಗೆ ಶಿಕ್ಷೆ ವಿಧಿಸಲಾಗುವುದು ಎಂದು ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.
ಚಿಂಚೋಳಿ/ಕಲಬುರಗಿ ಕಾರ್ಮಿಕ ಇಲಾಖೆಯ ಕಾರ್ಮಿಕ ನಿರೀಕ್ಷ ಶಿವರಾಜ್ ಪಾಟೀಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದರು. ಚಿಂಚೋಳಿ ಹೆಚ್ಚುವರಿ ನ್ಯಾಯಾಧೀಶ ದತ್ತುಕುಮಾರ, ಕಲಬುರಗಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೂಸೈಟಿಯ ಯೋಜನಾ ನಿರ್ದೇಶಕ. ಸಂತೋμï ಕುಲಕರ್ಣಿ, ಸಂಸ್ಕಾರ್ ಪ್ರತಿμÁ್ಠನ ಸಂಸ್ಥೆಯ ನಿರ್ದೇಶಕ ಶ್ರೀ. ವಿಠ್ಠಲ್ ಚಿಕಣಿ, ಕಾರ್ಯಕ್ರಮ ಸಂಯೋಜಕ ಸಂಪತ್ ಕಟ್ಟಿ, ಮೈಸೂರಿನ ಗ್ರಾಮೀಣ ಆರೋಗ್ಯ ಮತ್ತು ಶಿಕ್ಷಣ (ಖಐಊP) ಸಂಸ್ಥೆಯ ಸರುಬಾಯಿ ದೊಡ್ಡಿ, ಎಸ್.ಎಸ್.ಎಲ್ ಕಾನೂನು ಮಹಾವಿದ್ಯಾಲಯ ಚೈಲ್ಡ್ ಲೈನ್ ನೂಡಲ್ ಕೇಂದ್ರದ ಜಿಲ್ಲಾ ಸಂಯೋಜಕ ಬಸವರಾಜ್ ತೆಂಗಳಿ ಸೇರಿದಂತೆ ಸರಕಾರಿ ಕನ್ಯಾ ಪ್ರೌಢ ಶಾಲೆ ಮುಖ್ಯಗುರುಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸರಕಾರಿ ಕನ್ಯಾ ಪ್ರೌಢ ಶಾಲೆ ಮಕ್ಕಳು ನ್ಯಾಯಾಧೀಶರಿಗೆ “ಬಾಲಕಾರ್ಮಿಕ ಪದ್ದತಿ ನಿರ್ಮೋಲನೆಗೆ” ಕ್ರಮವಹಿಸಲು ಮನವಿ ಪತ್ರ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಮಾನ್ಯ ನ್ಯಾಯಾಧೀಶರು ಬಹುಮಾನ ವಿತರಿಸಿದರು. ಆರ್.ಎಲ್.ಹೆಚ್.ಪಿ. ಸಂಸ್ಥೆಯ ಜಿಲ್ಲಾ ಸಂಯೋಜಕಿ ಸರುಬಾಯಿ ವಂದಿಸಿದರು. ಕಾರ್ಮಿಕ ನಿರೀಕ್ಷಕರು ಎಲ್ಲರಿಗೂ ಪ್ರತಜ್ಞಾ ವಿಧಿ ಬೋಧಿಸಿದರು.