ಚಿಂಚೋಳಿ:ಬಿಜೆಪಿ ಕಾರ್ಯಕಾರಣಿ ಸಭೆ

ಚಿಂಚೋಳಿ,ಏ.2-ತಾಲೂಕಿನ ಬಿಜೆಪಿ ಪಕ್ಷದ ಕಾರ್ಯಕಾರಣಿ ಸಭೆ ಜರುಗಿತು. ಸಭೆ ಉದ್ದೇಶಿಸಿ ಪಕ್ಷದ ತಾಲೂಕ ಅಧ್ಯಕ್ಷ ಸಂತೋಷ್ ಗಡಂತಿ ಅವರು ಮಾತನಾಡಿ, ತಾಲೂಕಿನಲ್ಲಿ ಪಕ್ಷದ ಕಾರ್ಯಕರ್ತರು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದರ ಜೊತೆಗೆ ಪಕ್ಷವನ್ನು ಬಲಪಡಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಶಾಸಕ ಡಾ.ಅವಿನಾಶ್ ಜಾಧವ, ಪಕ್ಷದ ಜಿಲ್ಲಾ ಕಾರ್ಯದರ್ಶಿ ಅಜೀತ ಪಾಟೀಲ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಜಗದೀಶ ಸಿಂಗ್ ಠಾಕೂರ, ಪಕ್ಷದ ಯುವ ಮೋರ್ಚಾ ತಾಲೂಕ ಅಧ್ಯಕ್ಷ ಸತೀಶರೆಡ್ಡಿ ತಾಜಲಾಪೂರ, ಮಹಿಳಾ ಘಟಕ ಅಧ್ಯಕ್ಷೆ ಉಮಾ ಪಾಟೀಲ. ಮುಖಂಡರಾದ ಲಕ್ಷ್ಮಣ ಅವುಂಟಿ, ಶ್ರೀಮಂತ ಕಟ್ಟಿಮನಿ, ಭೀಮಶೆಟ್ಟಿ ಮುರುಡ, ಅಶೋಕ ಚವ್ಹಾಣ, ರಾಜು ಪವಾರ, ಬಂಡರೆಡ್ಡಿ ಅಡಕಿ ಅಡಿಕಿ ಚಿಮ್ಮಂಚೋಡ, ರಾಜಕುಮಾರ ರಾಜಾಪೂರ, ಪವನ ಕುಮಾರ ಗೋಪನಪಳ್ಳಿ, ಸುಧಾಕರ್ ಚೌಟಿ ಮಿರಿಯಾಣ, ಮಹೇಂದ್ರ ಪೂಜಾರಿ, ಅನೀಲ ಕಂಟ್ಲಿ, ಗೀರಿರಾಜ ನಾಟಿಕರ, ಮಾನಂದ ರೊಟ್ಟಿ, ಮಲ್ಲು ಕೋಡಂಬಲ್ ಚಿಮ್ಮಂಚೋಡ, ಮಹಾನಂದ ರಟಕಲ, ಆಕಾಶ ಕೊಳ್ಳುರ, ವಿನೋದ ದೇಗಲಮಡಿ, ಕಾಶಿನಾಥ ನಾಟಿಕರ, ಮಲ್ಲಿಕಾರ್ಜುನ ಉಡುಪಿ, ಹಣಮಂತ ಗಾರಂಪಳ್ಳಿ ಮತ್ತು ಅನೇಕ ಚಿಂಚೋಳಿ ತಾಲೂಕಿನ ಬಿಜೆಪಿ ಪಕ್ಷದ ಕಾರ್ಯಕರ್ತರು ಸಭೆಯಲ್ಲಿ ಭಾಗಿ ಆಗಿದ್ದರು.