ಚಿಂಚೋಳಿಗೆ ರಾಷ್ಟ್ರೀಯ ಹೆದ್ದಾರಿ:ಸಂತಸ

ಚಿಂಚೋಳಿ ಏ 2: ಮನ್ನಾಯೇಖೆಳ್ಳಿಯಿಂದ ಚಿಂಚೋಳಿ ಮುಖಾಂತರ ಮಹಬೂಬ ನಗರವನ್ನು ಜೋಡಿಸುವ ರಾಷ್ಟ್ರೀಯ ಹೆದ್ದಾರಿ ಯೋಜನೆಯನ್ನು ಕೇಂದ್ರ ಸರಕಾರ ಕೈಗೆತ್ತಿಕೊಂಡಿದ್ದಕ್ಕಾಗಿ ತಾಲೂಕು ಬಿಜೆಪಿ ಅಧ್ಯಕ್ಷ ಸಂತೋಷ ಗಡಂತಿ ಸಂತಸ ವ್ಯಕ್ತ ಪಡಿಸಿದ್ದಾರೆ.
ಚಿಂಚೋಳಿ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯುವಂತಹ ದಿನ ಇದಾಗಿದೆ.ಭಾರತಮಾಲ ಪರಿಯೋಜನ ಅಡಿಯಲ್ಲಿ ದ್ವೀಪದಂತಾಗಿದ್ದ ಚಿಂಚೋಳಿ ಈಗ ಮುಖ್ಯವಾಹಿನಿ ತರುವ ಕೆಲಸ ನಮ್ಮ ಶಾಸಕರು ಹಾಗೂ ಲೋಕಸಭೆ ಸದಸ್ಯರು ಮಾಡಿದ್ದಾರೆ. ಇಂದಿಗೂ ಯಾವುದೇ ರಾಜ್ಯ ಹೆದ್ದಾರಿ,ರಾಷ್ಟ್ರ ಹೆದ್ದಾರಿ ಹಾಗೂ ರೈಲ್ವೆ ಯೋಜನೆ ಇರದೆ ಅಭಿವೃದ್ಧಿ ಕಾಣದೆ ಇದ್ದು ಈಗ ಮುಖ್ಯವಾಹಿನಿ ಬರುವಂತಾಗಿದೆ. ಈ ಮುಖ್ಯವಾದ ಯೋಜನೆ ಜಾರಿಗೆ ತಂದ ಶಾಸಕ ಡಾ ಅವಿನಾಶ್ ಜಾಧವ್ ಹಾಗೂ ಲೋಕಸಭಾ ಸದಸ್ಯರಾದ ಡಾ ಉಮೇಶ್ ಜಾಧವ್ ಹಾಗೂ ಭಗವಂತ ಖೂಬಾ ಹಾಗೂ ಮುಖ್ಯವಾಗಿ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಸಾರಿಗೆ ಮಂತ್ರಿಗಳಾದ ನಿತಿನ್ ಗಡ್ಕರಿ ಯವರಿಗೆ, ಚಿಂಚೋಳಿ ತಾಲೂಕಿನ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು ಎಂದು ಸಂತೋಷ ಗಡಂತಿ ತಿಳಿಸಿದ್ದಾರೆ.