ಚಿಂಚೋಡಿ: ಗೌತಮ್ ಬುದ್ಧರ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮ

ದೇವದುರ್ಗ.ಜು.೧೮-ಇಲ್ಲಿಗೆ ಹತ್ತಿರವಿರುವ ಚಿಂಚೋಡಿ ಗ್ರಾಮದಲ್ಲಿ ನಡೆದ ಭಗವಾನ್ ಗೌತಮ ಬುದ್ಧರ ಮೂರ್ತಿ ಲೋಕಾರ್ಪಣೆ ಸಮಾರಂಭ ರವಿವಾರ ಅದ್ದೂರಿಯಾಗಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬುದ್ಧಘೋಷ್ ದೇವೇಂದ್ರ ಹೆಗ್ಗಡೆ ಮಾತನಾಡಿ ಗ್ರಾಮದಲ್ಲಿ ಶಾಂತಿಪ್ರಿಯ ಗೌತಮ್ ಬುದ್ಧರ ಮೂರ್ತಿ ಲೋಕಾರ್ಪಣೆ ಮಾಡಿದ್ದು ತುಂಬಾ ಹೆಮ್ಮೆಯ,ಸಂತೋಷದ ವಿಷಯ,ಬೌದ್ಧಧರ್ಮದ ಸಂಸ್ಥಾಪಕ ಮಾತ್ರವಲ್ಲ,ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ ಅಲ್ಲದೇ ಭಗವಾನ್ ಗೌತಮ ಬುದ್ಧನು ಕಂಡು ಹಿಡಿದ ವಿಪಶ್ಶನ, ಧ್ಯಾನ ಮಾರ್ಗವು ದುಃಖ ಮತ್ತು ಪಾಪಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ ಎಂದರು.
ಗೌತಮ್ ಬುದ್ಧರ ಬಗ್ಗೆ ವಿದೇಶಿಯರಿಗೆ ಅರ್ಥ ಆಗಿದೆ ಆದರೆ ನಮ್ಮ ದೇಶದ ಜನರು ಮರೆತು ಹೋಗಿದ್ದಾರೆ,ನಮ್ಮ ದೇಶದ ಜನ ಪ್ರತಿನಿಧಿಗಳು ವಿದೇಶಕ್ಕೆ ಹೋದರೆ ಬುದ್ಧನ ಹೆಸರು ಹೇಳಿ ಪರಿಚಯ ಮಾಡಿಕೊಳ್ಳುತ್ತಾರೆ ಆದರೆ ಮತ್ತೆ ನಮ್ಮ ದೇಶಕ್ಕೆ ಬಂದಾಗ ರಾಮನ ಹೆಸರು ಹೇಳುತ್ತಾರೆ ಯಾಕೆ ನೀವು ವಿದೇಶದಲ್ಲಿ ರಾಮನ ಹೆಸರು ಹೇಳಲ್ಲ ಎಂದು ಮಾರ್ಮಿಕವಾಗಿ ಮನುವಾದವನ್ನು ಟೀಕಿಸಿದರು.
ದೇಶದಲ್ಲಿ ಮನುವಾದಿಗಳು ಜನಗಳನ್ನು ಮೌಡ್ಯತೆಯಲ್ಲಿಟ್ಟಿದ್ದಾರೆ. ಬುದ್ದನ ಮಾರ್ಗದಲ್ಲಿ ಜನ ಬದುಕಿದಾಗ ವೈಜ್ಞಾನಿಕ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು. ಪೂಜ್ಯ ಭಂತೆ ಧಮ್ಮಾನಂದ ಥೇರೋ, ಪೂಜ್ಯ ಭಂತೆ ಸಂಘಪಾಲ, ಪೂಜ್ಯ ಭಂತೆ ಸಾರಿಪುತ್ರ,ಶಾಸಕ ಶಿವನಗೌಡ ನಾಯಕ ಅವರ ಮಾತೋಶ್ರೀ ಮಹಾದೇವಮ್ಮ ಅರಕೇರಾ,ಚಿಂಚೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚಂದ್ರಶೇಖರ ಕಂಪೂರು, ಅಭಿವೃದ್ಧಿ ಅಧಿಕಾರಿ ಶಿವರಾಜ್,ಅಮ್ಮ ವಸುಂಧರೆ ರಾಮಚಂದ್ರಜೀ ಗಾಯಕರು ಮೈಸೂರು, ಭೀಮಣ್ಣ ನಾಡಗೌಡ, ವಿ ಎಮ್ ಮೇಟಿ ನ್ಯಾಯವಾದಿಗಳು, ರವಿಕುಮಾರ್ ನ್ಯಾಯವಾದಿಗಳು ರಾಯಚೂರು, ನೀಲಕಂಠ ಬಡಿಗೇರ ಶಹಾಪುರ, ವೆಂಕಟೇಶ್ ಹೊಸಮನಿ,ಬಾಬೂರಾವ ಭೂತಾಳಿ, ಮರಿಲಿಂಗಪ್ಪ ಕೋಳೂರು , ಮಲ್ಲಿಕಾರ್ಜುನ ಮಸರಕಲ್, ಸಿ ದುರಗಪ್ಪ, ನರಸಪ್ಪ ಚಿಂಚೋಡಿ, ಅಮರೇಶ ಚಿಂಚೋಡಿ, ದುರುಗಪ್ಪ ಬಡಿಗೇರ ಚಿಂಚೋಡಿ, ಹುಸೇನಪ್ಪ ಜಾಲಹಳ್ಳಿ, ಯಲ್ಲಪ್ಪ ಗಚ್ಚಿನಮನಿ, ಮಹಾಂತೇಶ ಭವಾನಿ, ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ತಿಮ್ಮಣ್ಣ ಬೊಮ್ಮನಾಳ, ಅಭಿಷೇಕ ಪೂಜಾರಿ, ಶಿವು ಕಂಪೂರು.
ಈ ಸಂದರ್ಭದಲ್ಲಿ ಗೌತಮ್ ಬುದ್ಧರ ಮೂರ್ತಿ ನಿರ್ಮಿಸಿದ ಕಲಾವಿದರಾದ ಹನುಮಂತ ಮುಂಡರಗಿ, ಸುರೇಶ್ ದೊಡ್ಡಮನಿ ಶಿಲ್ಪ ಕಲಾವಿದರಿಗೆ ಸನ್ಮಾನ ಮಾಡಲಾಯಿತು.