ಚಿಂಚಲಿಯಲ್ಲಿ ವಿಶ್ವ ರಂಗಭೂಮಿ ದಿನಾಚರಣೆ

ಗದಗ,ಮಾ27 : ಜಿಲ್ಲೆಯ ಚಿಂಚಲಿ ಗ್ರಾಮದ ಮಣಿಕಂಠ ಸಾಂಸ್ಕøತಿಕ ವಿವಿದ್ದೋದ್ಧೇಶಗಳ ಸಂಘದ ವತಿಯಿಂದ ವಿಶ್ವ ರಂಗಭೂಮಿ ದಿನಾಚರಣೆ ಹಾಗೂ ಮಣಿಕಂಠ ರಂಗಜೋತಿ ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಕಾರ್ಯಕ್ರಮ ಜರುಗುವವು ಎಂದು ಸಂಘದ ಅಧ್ಯಕ್ಷ, ಗ್ರಾಪಂ ಸದಸ್ಯ ನಿಂಗರಡ್ಡಿ ತೇರಿನಗಡ್ಡಿ ಹೇಳಿದರು.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ ಗ್ರಾಮೀಣ ಕಲೆಯನ್ನು ಹಾಗೂ ಬಡ ಕಲಾವಿಧರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸ್ಥಾಪನೆಯಾಗಿರು ಸಂಘದಿಂದ ಮಾ.27 ರಂದು ಸಾಯಂಕಾಲ 5 ಘಂಟೆಗೆ ಚಿಂಚಲಿಯ ಹೊರಪೇಟಿ ದುರ್ಗಾದೇವಿ ದೇವಸ್ಥಾನ ಆವರಣದಲ್ಲಿ ಜರುಗುವ ಕಾರ್ಯಕ್ರಮದ ಸಾನಿಧ್ಯವನ್ನು ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗ ಶ್ರೀಗಳು,ಉದ್ಘಾಟನೆಯನ್ನು ಡಿ.ಎಸ್. ನೀಲಗುಂದ,ಅಧ್ಯಕ್ಷತೆಯನ್ನು ಅಪ್ಪಣ್ಣ ಇನಾಮತಿ ವಹಿಸುವರು. ಕಾರ್ಯಕ್ರಮದಂಗವಾಗಿ ಕೊಡಮಾಡುವ ರಂಗಜೋತಿ ಪ್ರಶಸ್ತಿಯನ್ನು ಕಲಾವಿಧರಾದ ಸುವರ್ಣಾ ಹಿರೇಮಠ,ಕೆ. ಶ್ರೀಲತಾ,ಸುನಂದಾ ಹಿರೇಮಠ,ಅನುಪಮಾ ಹಿರೇಮಠ,ಸುಮಿತ್ರಾ ಹನಮನೇರಿ ವರಿಗೆ ನೀಡಲಗುವುದು.
ಅತಿಥಿಗಳಾಗಿ ಎನ್.ಎಂ. ಅರಮನಿ,ಸಿ.ಎಸ್. ಬಾಲರಡ್ಡಿ,ಎಚ್.ವಾಯ್. ಪೂಜಾರ,ಪ್ರದೀಪ ಲೆಂಕನಗೌಡ್ರ,ನೀರ್ಮಲಾ ನೀಲಣ್ಣವರ,ರೂಪಾ ಕುರುಬರ,ಸಚಿನ ಅಲಮೇಲಕರ,ವಿಜಯಕುಮಾರ ಶೆಟ್ಟಿ ಭಾಗವಹಿಸುವರು.
ಕಾರ್ಯಕ್ರಮದಲ್ಲಿ ಹಲವು ಕಲಾವಿಧರಿಗೆ ಸನ್ಮಾನ ಜರುಗುವುದು ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಜರುಗಯವವು ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ನಾಟಕ ರಚನೆಕಾರರಾದ ಮಂಜುನಾಥ ಹೂಗಾರ,ರಾಜೇಸಾಬ ಕೋಕ್ಕರಗುಂದಿ,ಸದಾನಂರ ಕಮ್ಮಾರ ಉಪಸ್ಥಿತರಿದ್ದರು.