ಚಿಂಚನಸೂರ ಜಿಪಂ ಮತಕ್ಷೇತ್ರ ಮರು ವಿಂಗಡಣೆಗೆ ಆಕ್ಷೇಪ

ಆಳಂದ:ಜ.17: ಕಲಬುರಗಿ ಗ್ರಾಮೀಣ ಮತಕ್ಷೇತ್ರ ವ್ಯಾಪ್ತಿಯ ತಾಲೂಕಿನ ಚಿಂಚನಸೂರ ಜಿಲ್ಲಾ ಪಂಚಾಯತ್ ಮತಕ್ಷೇತ್ರÀವು ಮರುವಿಂಗಡಣೆಯಲ್ಲಿ ಸರ್ಕಾರ ಕೈಬಿಟ್ಟಿರುವುದು ಗಮನಕ್ಕೆ ಬಂದಿದೆ. ಯತಾಸ್ಥಿಯಲ್ಲಿ ಚಿಂಚನಸೂರ ಜಿಪಂ ಕ್ಷೇತ್ರವನ್ನೇ ಮುಂದುವರೆಸಬೇಕು ಎಂದು ಇಂದಿಲ್ಲಿ ಗ್ರಾಮಸ್ಥರ ನಿಯೋಗವು ಒತ್ತಾಯಿಸಿದೆ.

ಪಟ್ಟಣದ ಹೊರವಲಯದ ತಾಲೂಕು ಆಡಳಿತಸೌಧಕ್ಕೆ ಸೋಮವಾರ ಆಗಮಿಸಿದ್ದ ಮುಖಂಡ ಸುಧಾಮ ಧನ್ನಿ ಮತ್ತು ಪಾಂಡರಂಗ ಮಾವೀನಕರ್ ನೇತೃತ್ವದ ಚಿಂಚನಸೂರ ಗ್ರಾಮಸ್ಥರ ನಿಯೋಗವು ಗ್ರೇಡ್-2 ತಹಸೀಲ್ದಾರ ಬಸವರಾಜ ರಕ್ಕಸಗಿ ಅವರನ್ನು ಮನವಿ ಸಲ್ಲಿಸಿ ಚಿಂಚನಸೂರ ಜಿಪಂ ಕ್ಷೇತ್ರವನ್ನು ಮುಂದುವರೆಸಬೇಕು ಎಂದು ಬರೆದ ಮನವಿಗೆ 180ಕ್ಕೂ ಹೆಚ್ಚು ಜನ ಸಹಿ ಮಾಡಿ ಚಿಂಚನಸೂರ ಜಿಪಂ ಕ್ಷೇತ್ರವನ್ನು ಮುಂದುವರೆಸುವಂತೆ ಅವರು ಆಗಮಿಸಿದ್ದರು.

ಮನವಿ ಸ್ವೀಕರಿಸಿದ ತಹಸೀಲ್ದಾರರು ಬೇಡಿಕೆಯ ಮನವಿಯನ್ನು ಮೇಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಮಹಾದೇವ ಜೆ. ಧನ್ನಿ, ಕೃಷ್ಣಪ್ಪ, ಸುಗಂಧ ಪಿ. ಮಾವೀನಕರ್, ಐಶ್ವರ್ಯ ಧನ್ನಿ ಸೇರಿದಂತೆ ಮತ್ತಿತರು ಇದ್ದರು.