ಚಿಂಚನಸೂರ ಗುಣಮುಖವಾಗಲೆಂದು ಪೂಜೆ ಸಲ್ಲಿಕೆ

ಸೈದಾಪುರ:ಎ.17:ಗುರುಮಠಕಲ್ ಮತಕ್ಷೇತ್ರದ ವಿಧಾನ ಸಭಾ ಚುನಾವಣಾ ಕಾಂಗ್ರೆಸ ಪಕ್ಷದ ಅಭ್ಯರ್ಥಿ ಬಾಬುರಾವ ಚಿಂಚನಸೂರ ಕಲಬುರಗಿಯಲ್ಲಿ ಸಂಬಂವಿಸಿದ ಕಾರು ಅಪಘಾತದಲ್ಲಿ ಪ್ರಾಣಾಪಯದಿಂದ ಪಾರಾಗಿದ್ದೂ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಶೀಘ್ರ ಗುಣಮುಖವಾಗಲೆಂದು ಯುವ ಬ್ಲಾಕ ಕಾಂಗ್ರೆಸ್ ಪಕ್ಷ, ಎನ್.ಎಸ್.ಯು.ಐ ಹಾಗೂ ಅವರ ಅಭಿಮಾನಿಗಳಿಂದ ಮೈಲಾಪುರದ ಶ್ರೀ ಮೈಲಾರ ಲಿಂಗೇಶ್ವರರಿಗೆ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಶರಣಿಕುಮಾರ ದೋಖಾ, ಸೈದಾಪುರ ಬ್ಲಾಕ ಕಾಂಗ್ರೆಸ ಪಕ್ಷದ ಅಧ್ಯಕ್ಷ ನಿರಂಜರೆಡ್ಡಿ ಪಾಟೀಲ ಶೆಟ್ಟಹಳ್ಳಿ, ಕೈಲಾಸ್ ಅಸ್ಪಲ್ಲಿ, ಬಸ್ಸುಗೌಡ ಐರೆಡ್ಡಿ, ವಿಜಯ್ ಕಂದಳ್ಳಿ, ತಿಮ್ಮಾರೆಡ್ಡಿ ಬೆಳಗುಂದಿ, ಹೊನ್ನೇಶ್ ದೊಡ್ಡಮನಿ, ರಮೇಶ್ ಭೀಮನಹಳ್ಳಿ, ಮಲ್ಲಿಕಾರ್ಜುನ ಮುನಗಾಲ್, ರಾಮು ಬಳಿಚಕ್ರ, ಇಮಾಮ್ ಹೆಗ್ಗಣಗೇರಾ, ಅನಿಲ್ ನಂದೇಪಲ್ಲಿ, ನರಸಪ್ಪ ಸಂಗ್ವಾರ, ಜಗದೀಶ್ ಸಜ್ಜನ ಸೌರಾಷ್ಟ್ರಹಳ್ಳಿ, ಮಂಜುನಾಥ ಮಲ್ಹಾರ, ಹಣಮಂತ ರಾಠೋಡ್ ಇತರರಿದ್ದರು.