ಚಿಂಚನಸೂರ ಅವಿರೋಧವಾಗಿ ಆಯ್ಕೆ:ಹರ್ಷ

(ಸಂಜೆವಾಣಿ ವಾರ್ತೆ)
ಹುಮನಾಬಾದ್: ಅ.6:ದೇಶದ ಪ್ರಧಾನಿ, ಹಾಗೂ ಗೃಹ ಸಚಿವರಾದ ಶ್ರೀ ಅಮೀತ ಶಾಜೀ ಯವರನ್ನೊಳಗೊಂಡು, ಭಾರತೀಯ ಜನತಾ ಪಕ್ಷದ ರಾಷ್ಟ್ರಿಯ ಅಧ್ಯಕ್ಷರಾದ ಶ್ರೀ ಜೆ.ಪಿ.ನಡ್ಡಾಜೀ,
ರಾಜ್ಯದ ಮುಖ್ಯಮಂತ್ರಿ ಗಳಾದ ಸನ್ಮಾನ್ಯ ಶ್ರೀ ಬಸವರಾಜ ಬೋಮ್ಮಾಯಿಜಿ, ವಿಶೇಷವಾಗಿ ಬೀದರ ಲೋಕ ಸಭಾ ಸದಸ್ಯರು ಮತ್ತು ಕೇಂದ್ರ ಸಚಿವರಾದ ಶ್ರೀ ಭಗವಂತ ಖೂಬಾಜಿ, ಕೇಂದ್ರ ಸಚಿವೆ ಸಾಧ್ವಿನಿರಂಜನ ಜ್ಯೋತಿಜಿ, ಭಾಜಪಾ ರಾಜ್ಯಾಧ್ಯಕ್ಷರಾದ ಶ್ರೀ ನಳೀನಕುಮಾರ ಕಟೀಲಜೀ, ಮಾಜೀ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪಾಜೀ, ಬಿ.ಎಲ್. ಸಂತೋಷ ಜೀ, ಬಹಳ ಮುತುವರ್ಜಿ ವಹಿಸಿದ ಕಲ್ಬುರ್ಗಿ ಲೋಕ ಸಭಾ ಸದಸ್ಯರಾದ ಶ್ರೀ ಉಮೇಶ ಜಾಧವಜೀ, ಸೇಡಂ ಶಾಸಕರಾದ ಶ್ರೀ ರಾಜಕುಮಾರ ಪಾಟೀಲ್ ತೆಲ್ಕೂರಜೀ, ಕಲ್ಬುರ್ಗಿ ದಕ್ಷಿಣ ಶಾಸಕರಾದ ದತ್ತಾತ್ರೇಯ ಪಾಟೀಲ್ ಇವರೆಲ್ಲರ ಸಹಕಾರದೊಂದಿಗೆ ಹಿಂದುಳಿದ ವರ್ಗದ ನಾಯಕರಾದ, ಮಾಜೀ ಸಚಿವರಾದ, ಸಮಾಜದ ಹಿರಿಯನಾಯಕರು, ಸಮಾಜದ ಏಳ್ಗಿಗಾಗಿ ಹಗಲಿರುಳು ಶ್ರಮಿಸಿದ ಬಾಬುರಾವ ಚಿಂಚನಸೂರವರನ್ನು, ಸಿಎಂ.ಇಬ್ರಾಹಿಂ ಅವರ ರಾಜಿನಾಮೆಯಿಂದ ತೆರವಾಗಿದ್ದ ವಿಧಾನ ಪರಿಷತ್ ಸ್ಥಾನಕ್ಕೆ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡುವುದರ ಮೂಲಕ ಎಂಎಲ್ಸಿಯನ್ನಾಗಿ ಆಯ್ಕೆ ಮಾಡಿದರ ಪ್ರಯುಕ್ತ ಬೀದರ ಜಿಲ್ಲಾ ಟೋಕ್ರೆ ಕೋಲಿ, ಹಾಗೂ ತಾಲೂಕೂ ಕೋಲಿ ಸಮಾಜವು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತದೆ.
ಚಿಂಚನಸೂರವರನ್ನು ಎಂಎಲ್ಸಿ ಯನ್ನಾಗಿ ಮಾಡಿದರ ಪ್ರಯುಕ್ತ ನಮ್ಮ ಸಮಾಜಕ್ಕೆ ಮತ್ತೆ ಆನೆ ಬಲ ಬಂದಾಂತಾಗಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಭಾರತೀಯ ಜನತಾ ಪಕ್ಣದ ಅಭ್ಯರ್ಥಿಗಳ ಗೆಲುವಿಗೆ ಹಾಗೂ ಪಕ್ಷವನ್ನ ಬಲಿಷ್ಟ ಮಾಡುವ ನಿಟ್ಟಿನಲ್ಲಿ ಶಕ್ತಿಮೀರಿ ಶ್ರಮ ವಹಿಸಿದ ಚಿಂಚನಸೂರವರನ್ನು ಸೂಕ್ತ ಸ್ಥಾನಮಾನ ನೀಡುವುದಾಗಿ ವರಿಷ್ಠರು ಭರವಸೆ ನೀಡಿದರು, ಅದರಂತೆ ಕೊಟ್ಟ ಮಾತನ್ನು ಉಳಿಸಿಕೊಂಡ ವರಿಷ್ಟರು ಈಗ ಎಂಎಲ್ಸಿಯನ್ನಾಗಿ ಮಾಡಿ ಕೋಲಿ ಸಮಾಜಕ್ಕೆ ಸಾಮಾಜಿಕ ನ್ಯಾಯ ವದಗಿಸಿಕೊಟ್ಟಿದ್ದಾರೆ. ಇವರೆಲ್ಲರಿಗೂಅಧ್ಯಕ್ಷ ನಾಗಭೂಷಣ ಸಂಗಮ, ಕೃತಜ್ಞತೆ ಸಲ್ಲಿಸಿದರು. ವಾಡಿ ಆಶ್ರಮದ ಅಧ್ಯಕ್ಷ ವೀರಣ್ಣಾ ಉಪ್ಪಾರ, ಮುಖಂಡ ಬಾಬುರಾವ ವಳಖಿಂಡಿ, ವಿಜಯಕುಮಾರ್ ಪಾಟೀಲ್ ವಳಖಿಂಡಿ, ಕೆ.ಡಿ.ಪಿ ಸದಸ್ಯ ಬಸವರಾಜ ಸದಲಾಪೂರೆ, ಉಪಾಧ್ಯಕ್ಷ ಅಶೋಕ ಹಣಕುಣಿ, ಶಂಕರ ಡಾಕುಳಗಿ, ಲಖನ ಕೋಲಿವಾಡಾ, ಈಶ್ವರ ಮಾನಕೇರೆ, ಕೀಶೋರ ನಟ್ಟಿ, ನರಸಪ್ಪಾ ಮಲಕಾಪೂರವಾಡಿ, ನರಸಪ್ಪಾ ಚಿಟ್ಟಗುಪ್ಪಾ, ಪರಮೇಶ್ವರ ನಾಯಿಕೊಡೆ, ನರಸಪ್ಪಾ ನರನಾಳ,
ಶಿವಕುಮಾರ ಮೋಳಕೇರಾ, ಶಂಕರ ಚಿತ್ಕೋಟಾ ಉಪಸ್ಥಿತರಿದ್ದರು.