ಚಿಂಚನಸೂರ್ ಅಲ್ಲ ಚಂಚಲಸೂರ :ರವಿಕುಮಾರ

ಕಲಬುರಗಿ.ಮಾ 23: ಬಾಬುರಾವ್ ಚಿಂಚನಸೂರ ಬಿಜೆಪಿ ತೊರೆದದ್ದರಿಂದ ಯಾವುದೇ ಪರಿಣಾಮ ಬೀರುವದಿಲ್ಲ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಹೇಳಿದರು.ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದವರು.ಅವರು ಬಾಬುರಾವ್ ಚಿಂಚನಸೂರ್ ಅಲ್ಲ ಚಂಚಲಸೂರ ಎಂದು ಚಿ0ಚನಸೂರ್ ವಿರುದ್ದ ವಾಗ್ದಾಳಿ ನಡೆಸಿದರು.
ಬಿಜೆಪಿ ಪಕ್ಷ ಅವರಿಗೆ ಎಲ್ಲವನ್ನು ನೀಡಿದೆ.ಎಮ್‍ಎಲ್‍ಸಿ , ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದ್ದೆವು.ಆದರೂ ಅವಮಾನ ಆಗಿದೆ ಅಂತ ಹೋಗಿದ್ದಾರೆ .
ಚುನಾವಣೆ ಬಂದಾಗ ಮಾತ್ರ ಅವರಿಗೆ ಅವಮಾನ ಆಗಿದೆ ಅಂತಿದ್ದಾರೆ
ಇಷ್ಟು ದಿನ ಪಕ್ಷದಲ್ಲಿ ಇದ್ದಾಗ ಅವರಿಗೆ ಏನು ನೆನಪು ಆಗಿಲ್ಲ
ಈಗ ಆ ರೀತಿಯ ಹೇಳಿಕೆ ನೀಡ್ತಾ ಇದ್ದಾರೆ ಎಂದು ಛೇಡಿಸಿದರು.
ಚಿತ್ತಾಪುರ ದಲ್ಲಿ ಬಿಜೆಪಿ ನಿರ್ನಾಮ ಆಗಿದೆ ಎಂಬ ಚಿಂಚನಸೂರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ಚಿತ್ತಾಪುರದಲ್ಲಿ ಬಿಜೆಪಿ ಏನಾಗಿದೆ ಅಂತ ಚುನಾವಣೆಯಲ್ಲಿ ಗೊತ್ತಾಗುತ್ತದೆ ಚುನಾವಣೆ ಬಂದಾಗ ನಾವು ತೋರಿಸುತ್ತೇವೆ ಎಂದರು.