ಚಿಂಚನಸೂರಗೆ ಸಚಿವ ಸ್ಥಾನ ಹಾಗೂ ತಿಪ್ಪಣ್ಣಪ್ಪ ಕಮಕನೂರಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲು ಒತ್ತಾಯ

ಕಲಬುರಗಿ: ಮೇ.20:ಕಲ್ಯಾಣ ಕರ್ನಾಟಕದ ಯುವ ಕೋಲಿ ಸಮಾಜದ ವತಿಯಿಂದ ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಆಯ್ಕೆಯಾಗಿರುವ ಸಿದ್ರಾಮಯ್ಯ ನವರಿಗೆ ಹಾಗೂ ನೂತನ ಉಪ ಮುಖ್ಯಮಂತ್ರಿಗಳಾಗಿ ಆಯ್ಕೆಯಾಗಿರುವ ಡಿ.ಕೆ.ಶಿವಕುಮಾರ ರವರಿಗೆ ಯುವ ಕೋಲಿ ಸಮಾಜದ ವತಿಯಿಂದ ಹಾರ್ದಿಕ ಅಭಿನಂದನೆಯನ್ನು ಕಲ್ಯಾಣ ಕರ್ನಾಟಕ ಕೋಲಿಸ ಮಾಜದ ಯುವ ಘಟಕದ ಅಧ್ಯಕ್ಷ ಅನೀಲಕುಮಾರ ಕೂಡಿ, ಉಪಾಧ್ಯಕ್ಷ ಉಮೇಶ ಹದಗಲ್, ಪ್ರಧಾನ ಕಾರ್ಯದರ್ಶಿಗಳಾದ ಅರುಣಕುಮಾರ ಕೂಡಿ ಅವರು ಸಲಿಸಿದ್ದಾರೆ.

ನಂತರ ಮಾತನಾಡಿದ ಅವರು ಕೋಲಿ ಸಮಾಜದ ಧೀಮಂತ ನಾಯಕ ಮಾಜಿ ಸಪ್ತ ಖಾಥೆಯ ಮಾಜಿ ಸಚಿವ ಬಾಬುರಾವ್ ಚಿಂಚನಸೂರವರು ಚುನಾವಣೆ ಪ್ರಚಾರದ ವೇಳೆ ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡು ನಡೆದಾಡಲು ಆಗದ ಪರಿಸ್ಥಿತಿಯಲ್ಲೂ ಪ್ರಚಾರಕ್ಕೆ ಹೋಗದೆ ಇದ್ದರೂ ಗುರುಮಿಟಕಲ್ ಮತದಾರರ ಆಶಿರ್ವಾದಿಂದ ಪ್ರಯತ್ನಕ್ಕೆ ಮೀರಿ ಮತ ಹಾಕಿದರು. ಸ್ವಲ್ಪವೇ ಅಂತರದಲ್ಲಿ ಸೋಲು ಅನುಭವಿಸಬೇಕಾಯಿತು. ಅದಕ್ಕಾಗಿ ಕರ್ನಾಟಕ ಕೋಲಿ ಸಮಾಜದ ಏಕೈಕ ನಾಯಕ ಬಾಬುರಾವ್ ಚಿಂಚನಸೂರವರನ್ನು ತಮ್ಮ ಘನ ಸರಕಾರದಲ್ಲಿ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಿ ಮುಂದೆ ವಿಧಾನ ಪರಿಷತ್ತಿನ ಸದಸ್ಯರಾಗಿ ನೇಮಕ ಮಾಡಬೇಕೆಂದು ಹಾಗೂ ಇನ್ನೋರ್ವ ಕೋಲಿ ಸಮಾಜದ ನಾಯಕ ಮಾಜಿ ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರವರನ್ನು ಒಂದು ಒಳ್ಳೆ ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಮುಂದೆ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಬೇಕು. ಏಕೆಂದರೆ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ ಕೋಲಿ ಸಮಾಜದ ಮತಗಳು ಕಾಂಗ್ರೇಸ್ ಪಕ್ಷದ ಪರವಾಗಿ ಮತ ಹಾಕಿಸಲು ಅವರ ಶ್ರಮ ಬಹಳವಿದೆ ಮತ್ತು ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೇಸ್ ಪಕ್ಷಕ್ಕೆ ಹೆಚ್ಚಿನ ಲಾಭವಾಗುವದರಿಂದ ಕೋಲಿ ಸಮಾಜದ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರಿಗೆ ಹೆಚ್ಚಿನ ಸ್ಥಾನಮಾನ ನೀಡಬೇಕಾಗಿ ಎ.ಐ.ಸಿ.ಸಿ. ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹಾಗೂ ನೂತನ ಮುಖ್ಯಮಂತ್ರಿಗಳಾದ ಸಿದ್ರಾಮಯ್ಯನವರಲ್ಲಿ, ಕೆ.ಪಿ.ಸಿ.ಸಿ. ಅಧ್ಯಕ್ಷರು ಹಾಗು ನೂತನ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಇವರಲ್ಲಿ ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.