ಚಿಂಚನಸೂರಗೆ ನಿಗಮ ಅಧ್ಯಕ್ಷ ನೀಡುವಂತೆ ಕಾವಲಿ ಆಗ್ರಹ

ಸೈದಾಪುರ:ಅ.31:ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಹಿಂದುಳಿದ ಕೋಲಿ ಸಮಾಜದ ಹಿರಿಯ ಮುಖಂಡ ಮಾಜಿ ಸಚಿವ ಬಾಬುರಾವ ಚಿಂಚನಸೂರಗೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನಮಾನ ನೀಡುವದರ ಮೂಲಕ ಹಿಂದುಳಿದ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಮಾಜಿ ತಾ.ಪಂ ಸದಸ್ಯ ಮತ್ತು ಕೋಲಿ ಸಮಾಜದ ಹಿರಿಯ ಮುಖಂಡ ಚಂದಪ್ಪ ಕಾವಲಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕೆ ಹೇಳಿಕೆ ನೀಡಿದ ಅವರು ಯಾದಗಿರಿ ಜಿಲ್ಲೆಯಲ್ಲಿ ಹಿರಿಯ ಮತ್ತು ಮತ್ಸದಿ ನಾಯಕರಾಗಿರುವ ಚಿಂಚನಸೂರ ಸರ್ವಜನಾಂಗವನ್ನು ಸಮನಾಗಿ ನೊಡುವುದರ ಮೂಲಕ ಸಮಗ್ರ ಅಭಿವೃದ್ಧಿಗೆ ನೆರವಾಗುವ ಜನನಾಯಕರಾಗಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ರಾಜ್ಯ ಮತ್ತು ರಾಷ್ಟ್ರೀಯ ಕಾಂಗ್ರೆಸ್ ನಾಯಕರು ಕೋಲಿ ಸಮಾಜ ಅಭಿವೃದ್ಧಿಗೆ ಒತ್ತು ನೀಡುವ ದೃಷ್ಠಿಯಿಂದ ಈ ಬಾರಿ ಕೋಲಿ ಸಮಾಜದ ಹಿರಿಯ ನಾಯಕನಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ನಿಡುತ್ತಾರೆ ಎಂಬ ಭರವಸೆ ಸಮಾಜದ ಜನರದ್ದಾಗಿದೆ ಎಂದರು.