ಚಿಂಚನಸೂರಗೆ ಖೂಬಾ ಸನ್ಮಾನ

ಬೀದರ್,ಸೆ.3-ವಿಧಾನ ಪರಿಷ್ಯತ ನೂತನ ಸದಸ್ಯ ಹಾಗೂ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಾಬುರಾವ್ ಚಿಂಚನಸೂರ್ ಅವರಿಗೆ ಕೇಂದ್ರ ನೂತನ ಹಾಗೂ ನವಿಕರಿಸಬಹುದಾದ ಇಂಧನ ಮೂಲ ಹಾಗೂ ರಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ತಮ್ಮ ಮನೆಯಲ್ಲಿ ಸನ್ಮಾನಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬಾಬುರಾವ ಚಿಂಚನಸೂರರವರು, ಖೂಬಾ ಅವರಿಗೆ ಹಾಗೂ ಪಕ್ಷದ ಎಲ್ಲಾ ಮುಖಂಡರಿಗೆ ಧನ್ಯವಾದಗಳು ತಿಳಿಸಿದರು, ಖೂಬಾ ಅವರು ಮಾತನಾಡಿ, ನಿಮ್ಮಂತಹ ಹಿರಿಯರು ಪಕ್ಷದಲ್ಲಿರುವುದು ಎಲ್ಲರಿಗೂ ಹರ್ಷ ತರುವ ವಿಷಯವಾಗಿದೆ, ವಿಧಾನಪರಿಷ್ಯತನಲ್ಲಿ ರಾಜ್ಯದ ಅಭಿವೃದ್ದಿಗೆ ಸಂಬಂಧಿಸಿದಂತೆ ನಿಮ್ಮ ಸಲಹೆ, ಮಾರ್ಗದರ್ಶನ ಸರ್ಕಾರದ ಜೊತೆ ಸದಾಕಾಲ ಇರಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷ ಬಾಬುವಾಲಿ, ಬಿಜೆಪಿ ಮುಖಂಡರಾದ ಗುರುನಾಥ್ ಕೊಳ್ಳುರ್, ಅಂಬಿಗರ ಚೌಡಯ್ಯ ನಿಗಮದ ಮಾಜಿ ಅಧ್ಯಕ್ಷ ಜಗನ್ನಾಥ ಜಮದಾರ್, ಕೋಳಿ ಸಮಾಜ ಮುಖಂಡರಾದ ದತ್ತು ಪದಮೇ ಮಂಠಾಳ ಹಾಗೂ ಭಾಲ್ಕಿ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಪಾಟೀಲ್ ಉಪಸ್ಥಿತರಿದ್ದರು.