ಚಾ.ನಗರ ಹರಳುಕೋಟೆ ಅಂಜನೇಯ ಸ್ವಾಮಿ ದೇವಸ್ಥಾನಕ್ಕೆ ಬಸವನಗೌಡ ಪಾಟೀಲ್ ಯತ್ನಾಳ್ ಭೇಟಿ

ಚಾಮರಾಜನಗರ, ಮೇ.19:- ವಿಜಯಪುರ ನೂತನ ಶಾಸಕ ಹಾಗೂ ಬಿಜೆಪಿ ಹಿರಿಯ ಮುಖಂಡ ಬಸವನಗೌಡ ಪಾಟೀಲ್ ಯತ್ನಾಳ್ ಗುರುವಾರ ಚಾಮರಾಜನಗರದ ರಾಮಸಮುದ್ರದಲ್ಲಿರುವ ಶ್ರೀ ಹರಳಕೋಟೆ ಅಂಜನೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಮಹಾಭಾರತದ ಬುಬ್ರವಾಹನ ಮಣಿಪುರದÀ ರಾಜಧಾನಿಯಾಗಿತ್ತು. ಮಣಿಪುರ ಅರಸು ಬ್ರುಬವಾಹನ ಅರ್ಜುನ ವಿರುದ್ದ ಯುದ್ದ ಸಾರಿ ಇದೇ ಪ್ರದೇಶದಲ್ಲಿ ಶ್ರೀ ಅಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಆಶೀರ್ವಾದÀ ಪಡೆದು ಯುದ್ದಕ್ಕೆ ಹೊರಟು ವಿಜಯಶಾಲಿಯಾಗಿದ್ದರು ಎಂಬುವುದು ಬಬ್ರುವಾಹನ ಚರಿತ್ರೆಯಲ್ಲಿ ದಾಖಲಾಗಿದೆ.
ಈ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿರುವ ಹರಳುಕೋಟೆ ಅಂಜನೇಯ ಸ್ವಾಮಿಗೆ ವಿಶೇಷ ಶಕ್ತಿ ಹಾಗೂ ಪ್ರಭಾವ ಇದೆ ಎಂದು ಬಣ್ಣಿಸಲಾಗುತ್ತದೆ. ಅಲ್ಲದೇ ಅಂಜನೇಯ ಸ್ವಾಮಿ ದರ್ಶನ ಮಾಡಿದರೆ ಇಷ್ಠಾರ್ಥ ಸಿದ್ದಿಯಾಗುತ್ತದೆ ಎಂಬ ಪ್ರತೀತಿಯು ಇದೆ. ಹೀಗಾಗಿ ಪ್ರತಿ ಶನಿವಾರ ಹಾಗೂ ಇತರೇ ವಿಶೇಷ ದಿನಗಳಲ್ಲಿ ಇಲ್ಲಿ ಪೂಜೆ ನಡೆಯುತ್ತದೆ
ಯತ್ನಾಳ್ ಎರಡನೇ ಬಾರಿ ಭೇಟಿ : ಈ ಹಿಂದೆಯೂ ಕೂಡ ಹರಳುಕೋಟೆ ಅಂಜನೇಯಸ್ವಾಮಿ ದೇವಸ್ಥಾನಕ್ಕೆ ಶಾಸಕ ಬಸವಗೌಡ ಪಾಟೀಲ್ ಯತ್ನಾಳ್ ಭೇಟಿ ನೀಡಿ ಪೂಜೆ ಸಲ್ಲಿಸಿ, ಈ ಸ್ಥಳ ಮಹಿಮೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಈ ಸಂದರ್ಭದಲ್ಲಿ ದೇವರ ಮುಂದೆ ಸಂಕಲ್ಪ ಮಾಡಿದ್ದರು ಎನ್ನಲಾಗಿದೆ. ಆದೇ ರೀತಿ ವಿಜಯಪುರ ಕ್ಷೇತ್ರದ ಚುನಾವಣೆಯಲ್ಲಿ ಗೆದ್ದು ಐದನೇ ದಿನಕ್ಕೆ ಯಾವುದೇ ಪ್ರಚಾರವಿಲ್ಲದೇ ತಮ್ಮ ಅತ್ಮೀಯ ಬಳಗಕ್ಕೂ ತಿಳಿಸದೇ ಏಕಾಂಗಿಯಾಗಿ ಹರಳುಕೋಟೆ ಅಂಜನೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿ ಹೋಗಿದ್ದಾರೆ.