ಚಾ.ನಗರ: ಪ್ರಾರಂಭವಾದ ಪದವಿ ಕಾಲೇಜುಗಳು: ಮೊದಲ ದಿನ ಮಿಶ್ರ ಪ್ರತಿಕ್ರಿಯೆ

ಚಾಮರಾಜನಗರ,ನ.17: 8 ತಿಂಗಳ ಬಳಿಕ ಪದವಿ ಕಾಲೇಜುಗಳು ಇಂದಿನಿಂದ ಕೊರೊನಾ ಸುರಕ್ಷತಾ ನಿಯಮಗಳೊಂದಿಗೆ ಆರಂಭವಾಗಿದೆ.ಮೊದಲ ದಿನ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳು, ಪಾಲಿಟೆಕ್ನಿಕ್ ಸೇರಿದಂತೆ ಮೊದಲ ದಿನದ ತರಗತಿಗಳಿಗೆ ಹಲವರು ಎಸ್ ಎಂದರೆ ಕೆಲವರು ನೋ ಎಂದು ಮನೆಯಲ್ಲೇ ಉಳಿದಿದ್ದಾರೆ. ಕಾಲೇಜುಗಳ ಪ್ರವೇಶ ಮಾಡುತ್ತಿದ್ದಂತೆ ವಿದ್ಯಾರ್ಥಿಗಳ ಕೋವಿಡ್ ವರದಿ,ಸ್ಕ್ರೀನಿಂಗ್ ನಂತರವೇ ವಿದ್ಯಾರ್ಥಿಗಳಿಗೆ ತರಗತಿಗೆ ಪ್ರವೇಶ ಕಲ್ಪಿಸಲಾಯಿತು.
ಚಾಮರಾಜನಗರ ಜಿಲ್ಲಾದ್ಯಂತ ಸರ್ಕಾರದ ನಿರ್ದೇಶನದಂತೆ ಇಂದು ಪದವಿ ಕಾಲೇಜುಗಳು, ಸ್ನಾತಕೋತ್ತರ ಕಾಲೇಜುಗಳು,ಇಂಜಿನಿಯರಿಂಗ್ ಹಾಗೂ ಡಿಪೆÇ್ಲಮಾ ಕಾಲೇಜುಗಳು ತೆರೆದಿದ್ದು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಖುದ್ದು ಹಾಜರಾತಿಗೆ ತಿಳಿಸಿದೆ.ಇದು ಸಾಧ್ಯವಾಗದವರಿಗೆ ಆನ್ ಲೈನ್ ತರಗತಿಗಳಿಗೂ ಅಹ ಸರ್ಕಾರ ಅವಕಾಶ ಕಲ್ಪಿಸಿದೆ.ಕೋವಿಡ್-19 ವರದಿ ಹಾಗೂ ಪೆÇೀಷಕರ ಅನುಮತಿಯೊಂದಿಗೆ ಹಾಜರಾಗಲು ಸೂಚಿಸಿದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ನಿರ್ದೇಶನದಂತೆ ಕಾಲೇಜುಗಳಿಗೆ ತೆರಳಿದರು.
ಸೇವಾ ಭಾರತಿ ಪ್ರಥಮ ದರ್ಜೆ ಕಾಲೇಜಿನಲ್ಲಿ 42 ವಿದ್ಯಾರ್ಥಿಗಳು ಹಾಜರಿ: ನಗರದ ಶಂಕರಪುರದಲ್ಲಿರುವ ಸೇವಾ ಭಾರತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಅಂತಿಮ ವರ್ಷದ 60 ವಿದ್ಯಾರ್ಥಿಗಳ ಪೈಕಿ ಇಂದು 42 ವಿದ್ಯಾರ್ಥಿಗಳು ಖುದ್ದು ತರಗತಿಗಳಿಗೆ ಹಾಜರಾಗಿದ್ದಾರೆಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ನಿಮರ್ಲಾ ಅವರು ತಿಳಿಸಿದ್ದಾರೆ. ಸರ್ಕಾರದ ನಿರ್ದೇಶನದಂತೆ ತರಗತಿ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗಿದ್ದು ಕೊರೊನಾ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದರು.