ಚಾ.ನಗರ ಪಿಎಲ್‍ಡಿ ಬ್ಯಾಂಕ್: 2.28 ಕೋಟಿ ನಿವ್ವಳ ಲಾಭ

ಚಾಮರಾಜನಗರ, ನ. 15- ಸರ್ಕಾರ ರೈತರ ಸುಸ್ತಿ ಹಾಗೂ ಇತರೇ ಸಾಲಗಳನ್ನು ಪೂರ್ಣ ಮರುಪಾವತಿ ಮಾಡಿದರೆ ಬಡ್ಡಿ ಮನ್ನಾ ಯೋಜನೆಯನ್ನು ಅಸಲು ಮರು ಪಾವತಿ ಮಾಡಿದ ರೈತರು ಹಾಗೂ ಹೊಸ ರೈತರು ಸೇರಿ ಬ್ಯಾಂಕಿನಿಂದ 3.68 ಕೋಟಿ ರು.ಗಳ ಸಾಲ ನೀಡಿದ್ದು, ಪ್ರಸಕ್ತ ವರ್ಗದಲ್ಲಿ ದಾಖಲೆಯ ಕಳೆದ 25 ವರ್ಷಗಳಿಂದಲು ಸಾಧಿಸಲಾಗದ ನಿವ್ವಳ ಲಾಭ 2.28 ಕೋಟಿ ರೂ.ಗಳನ್ನು ಬ್ಯಾಂಕ್ ಪಡೆದುಕೊಂಡಿದೆ ಎಂದು ತಾಲೂಕು ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್‍ನ ಅಧ್ಯಕ್ಷ ಉಡಿಗಾಲ ಪಾಪಣ್ಣ ತಿಳಿಸಿದರು.
ನಗರದ ಜೆ.ಎಸ್‍ಎಸ್. ಸೆÀಮಿನಾರ್ ಹಾಲ್‍ನಲ್ಲಿ ಭಾನುವಾರÀ ತಾಲೂಕು ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್‍ನ ವಾರ್ಷಿಕ ಮಹಾಸಭೆಯನ್ನು ಉದ್ಗಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ವರ್ಷದಲ್ಲಿ ವಿವಿಧ ಯೋಜನೆಗಳಾದ ಕುರಿ ಸಾಕಾಣಿಕೆ, ಭೂ ಅಭಿವೃದ್ದಿ, ತಂತಿ ಬೇಲಿ ಹಾಗು ನೀರಾವರಿಗಾಗಿ 262 ರೈತರಿಗೆ 3 ಕೋಟಿ 68 ಲಕ್ಷ ರೂ.ಗಳ ಸಾಲವನ್ನು ನೀಡಲಾಗಿದೆ. ಎ ತರಗತಿಯ ಷೇರುಗಳನ್ನು 500 ರಿಂದ 1000 ರು.ಗಳಿಗೆ ಏರಿಕೆ ಮಾಡಿದ ಪರಿಣಾಮ ಹೆಚ್ಚು ಮಂದಿ ಸದಸ್ಯರು ಷೇರು ಪಾವತಿ ಮಾಡಿದ್ದರಿಂದ ಬ್ಯಾಂಕ್ ಲಾಭ ಪಡೆದುಕೊಳ್ಳಲು ಸಾಧ್ಯವಾಗಿದೆ ಎಂದರು.
ಕಳೆದ 25 ವರ್ಷಗಳ ತರುವಾಯ 2020-21ನೇ ಸಾಲಿನಲ್ಲಿ ಬ್ಯಾಂಕ್ 2 ಕೋಟಿ 28 ಲಕ್ಷ ರು.ಗಳ ನಿವ್ವಳ ಲಾಭವನ್ನು ಗಳಿಸಿದೆ. ಸಂಘದ ಸದಸ್ಯರು ಸರ್ಕಾರದ ಸಾಲ ಮನ್ನಾ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಅಸಲು ಪಾವತಿ ಮಾಡಿದ ಮತ್ತೇ ಸಾಲ ನವೀಕರಣ ಮಾಡಿದ್ದು, ಹಾಗೂ ರಾಜ್ಯ ಬ್ಯಾಂಕ್‍ಗೂ ಹೆಚ್ಚು ವಸೂಲಾತಿ ಮಾಡಿ ಶೇ. 70 ರಷ್ಟು ರೈತರಿಂದ ಸಾಲ ಮರು ಪಾವತಿ ಮಾಡಿದ ಪರಿಣಾಮ ಬ್ಯಾಂಕ್ ನಿವ್ವಳ ಪಡೆದುಕೊಳ್ಳಲು ಸಾಧ್ಯವಾಯಿತು. ಇದೆಲ್ಲರು ಅಡಳಿತ ಮಂಡಲಿಯ ಸಹಕಾರ ಮತ್ತು ನೌಕರರ ಶ್ರಮದಿಂದಾಗಿ ಆಗಿದೆ ಎಂದರು.
ಈ ವರ್ಷ 2 ಕೋಟಿ ರೂ.ಗಳ ಹೊಸ ಸಾಲವನ್ನು ವಿತರಣೆ ಮಾಡಲಾಗಿದೆ. ಮುಂದೆಯು ಸಹ ಇದೇ ರೀತಿ ಸಾಲದ ಕಂತುಗಳನ್ನು ಮರು ಪಾವತಿ ಮಾಢುವಂತೆ ರೈತರದಲ್ಲಿ ಜಾಗೃತಿ ಮುಡಿಸುವ ಜೊತೆಗೆ ಬ್ಯಾಂಕಿನಿಂದ ನಿರಂತರವಾಗಿ ರೈತರಿಗೆ ಎಲ್ಲಾ ರೀತಿಯ ಸಾಲಗಳು ದೊರೆಯಬೇಕು ಎಂಬ ಉದ್ದೇಶದ ನಮ್ಮದಾಗಿದೆ.
ಅಲ್ಲದೇ, ಪರಿಶಿಷ್ಟ ಜಾತಿ ಹಾಗು ವರ್ಗದ ರೈತರಿಗೆ ಸರ್ಕಾರ ನೀಡಿದ ಸಾಲ ಮೊತ್ತದಲ್ಲಿ ಶೇ. 16.25 ರಷ್ಟು ಸಾಲವನ್ನು ಆ ವರ್ಗಗಳ ರೈತರಿಗೆ ನೀಡಲಾಗುತ್ತಿದೆ. ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಪಿಎಲ್‍ಡಿ ಬ್ಯಾಂಕ್‍ಗಳ ಪೈಕಿ ನಮ್ಮ ಬ್ಯಾಂಕ್ ಎಸ್ಸಿ, ಎಸ್ಟಿ ರೈತರಿಗೆ ಹೆಚ್ಚು ಸಾಲವನ್ನು ನೀಡಿ, ಪ್ರಥಮ ಸ್ಥಾನದಲ್ಲಿದೆ, ನಂಜನಗೂಡು ಹಾಗೂ ಯಳಂದೂರು ಪಿಎಲ್‍ಡಿ ಬ್ಯಾಂಕ್‍ನಲ್ಲಿ ವಿತರಣೆಯಾಗದೇ ಉಳಿದಿದ್ದ 20 ಲಕ್ಷ ರೂ.ಗಳನ್ನು ನಮ್ಮ ಬ್ಯಾಂಕ್‍ಗೆ ವರ್ಗವಣೆ ಮಾಡಿಸಿಕೊಂಡು ಆ ರೈತರಿಗೆ ನೀಡಿದ್ದೇವೆ ಎಂದು ಪಾಪಣ್ಣ ಹೆಮ್ಮೆಯಿಂದ ಹೇಳಿಕೊಂಡರು. ಅಲ್ಲದೇ ಯಾವುದೇ ಕಾರಣಕ್ಕೆ ಪಿಎಲ್‍ಡಿ ಬ್ಯಾಂಕಿನಿಂದ ಪರಿಶಿಷ್ಟ ಜಾತಿ ಹಾಗು ವರ್ಗಗಳ ರೈತರಿಗೆ ಅನ್ಯಾಯವಾಗಲು ಬಿಟ್ಟಿಲ್ಲ ಎಂದು ಸದಸ್ಯರೊಬ್ಬರ ಪ್ರಶ್ನೆಗೆ ಅಂಕಿಅಂಶಗಳ ಸಹಿತ ಮಾಹಿತಿ ನೀಡಿದರು.
ಮುಂದಿನ ದಿನಗಳಲ್ಲಿ ಬ್ಯಾಂಕ್‍ನಿಂದ ಪ್ರತಿ ತಿಂಗಳು ಹೊಸ ಸಾಲಗಳನ್ನು ನಿರಂತರವಾಗಿ ವಿತರಣೆ ಮಾಡುವುದು ಮತ್ತು ಅದೇ ರೀತಿ ಸಾಲ ವಸೂಲಾತಿಯನ್ನು ಶೇ. 100 ರಷ್ಟು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಪ್ರತಿ ವರ್ಷವು ಸಹ ಪಿಎಲ್‍ಡಿ ಬ್ಯಾಂಕ್ ಲಾಭದತ್ತ ಸಾಗಲು ಕಾರ್ಯಯೋಜನೆಯನ್ನು ರೂಪಿಸಲಾಗುತ್ತಿದೆ, ಸದಸ್ಯರ ಸಹಕಾರ ಮುಖ್ಯವಾಗಿರುತ್ತದೆ ಎಂದು ತಿಳಿಸಿದರು.
ಪಿಎಲ್‍ಡಿ ಬ್ಯಾಂಕ್ ರೈತರ ಸಂಸ್ಥೆಯಾಗಿದ್ದು, ರೈತರಿಗೆ ಕೃಷಿ, ಗುಡಿ ಕೈಗಾರಿಕೆ ಹಾಗೂ ಗ್ರಾಮೀಣ ಗೃಹ ನಿರ್ಮಾಣಗಳಿಗೆ, ವಾಹನ ಖರೀದಿಗಾಗಿ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡಲಾಗಿದೆ. ಕಳೆದ ಹಲವಾರು ವರ್ಷಗಳಿಂದ ಬರ ಪರಿಸ್ಥಿತಿ ಹಾಗೂ ಈಗ ಎರಡು ವರ್ಷದಿಂದ ಕೊರೋನಾ ಕಾರಣದಿಂದಾಗಿ ಸಾಲ ವಸೂಲಾತಿ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. 1936ರಲ್ಲಿ ಸ್ಥಾಪನೆಗೊಂಡ ಬ್ಯಾಂಕ್ ರೈತರಿಗೆ ಎಲ್ಲಾ ರೀತಿಯ ನೆರವು ನೀಡಿ 84 ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸುತ್ತಾ ಬಂದಿದೆ. ತಾಲೂಕಿನ ಸಮಗ್ರ ರೈತರ ಅಭಿವೃದ್ದಿ ಮತ್ತು ಧೀರ್ಘಾವಧಿ ಸಾಲ ನೀಡಿಕೆಯಯಲ್ಲಿ ಮಹತ್ವದ ಪಾತ್ರ ವಹಿಸಿ ಪ್ರಗತಿಯತ್ತ ಸಾಗುತ್ತಿದೆ ಎಂರು ಪಾಪಣ್ಣ ತಿಳಿಸಿದರು.
ಬ್ಯಾಂಕಿನ ಅಧ್ಯಕ್ಷರಾದ ಪಾಪಣ್ಣ ಹಾಗೂ ಉಪಾಧ್ಯಕ್ಷ ಎನ್‍ರಿಚ್ ಮಹದೇವಸ್ವಾಮಿ ಅವರನ್ನು ಸದಸ್ಯರ ಪರವಾಗಿ ಸಾಗಡೆ ಲೋಕೇಶ್ ಶಾಲು ಹೊದಿಸಿ ಹಾರ ಹಾಕಿ ಅಭಿನಂದಿಸಿದರು.
ಬ್ಯಾಂಕ್‍ನ ವ್ಯವಸ್ಥಾಪಕ ಸಂತೋಷ್ ಕಂಟ್ಲಿ ವಾರ್ಷಿಕ ವರದಿ ಮಂಡಿಸಿ ಅನುಮೋದನೆ ಪಡೆದುಕೊಂಡರು. ಸಭೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಎನ್‍ರಿಚ್‍ಮಹದೇವಸ್ವಾಮಿ, ನಿರ್ದೇಶಕರಾದ ಎಚ್.ಎಂ. ಬಸವಣ್ಣ, ಬಿ. ಮಹದೇವಪ್ಪ, ದೊರೆಸ್ವಾಮಿ, ಎಸ್.ರಾಜು, ಎಂ. ಬಸವರಾಜು ಶಿವಶಂಕರಪ್ಪ , ಚಿಕ್ಕನಾಗಪ್ಪ, ಮಹದೇವನಾಯಕ, ಕೆ. ಬಾನುಪ್ರಕಾಶ್, ನಾಮನಿರ್ದೇಶಕ ಕಿಲಗೆರೆ ಬೆಳ್ಳಪ್ಪ ಬ್ಯಾಂಕಿನ ನೌಕರರಾದ ನವೀನ್, ದಿನಕರ್ ಹಾಗೂ ಸದಸ್ಯರು ಭಾಗವಹಿಸಿದ್ದರು.