ಚಾ.ನಗರ ದುರ್ಘಟನೆಗೆ ಸರ್ಕಾರವೇ ಹೊಣೆ

ಚಾಮರಾಜನಗರ:ಏ:03: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸಂಭವಿಸಿರುವ ಸಾವುನೋವಿಗೆ ಆಕ್ಸಿಜನ್ ಕೊರತೆಯೂ ಕಾರಣ ಎಂದು ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧ್ಯರಾತ್ರಿಯಿಂದಲೂ ಸರ್ವ ಪ್ರಯತ್ನ ಪಟ್ಟು ಆಕ್ಸಿಜನ್ ತರಿಸಿದ್ದೇವೆ. ಸರ್ಕಾರ ನೇರವಾಗಿ ಚಾಮರಾಜನಗರಕ್ಕೆ ಆಕ್ಸಿಜನ್ ಪೂರೈಸಬೇಕು. ಮೈಸೂರಿನಿಂದ ಏಕೆ ಪೂರೈಸುತ್ತಿದೆ?, ಅಲ್ಲಿನ ಡಿಸಿ ಜಿಲ್ಲೆಗೆ ಹೆಚ್ಚು ಒತ್ತು ಕೊಟ್ಟಾಗ ನಮಗೆಲ್ಲಿ ಆಕ್ಸಿಜನ್ ಸಿಗುತ್ತದೆ ಆಕ್ಸಿಜನ್ ಕೊರತೆ ಇರುವುದು ನಿಜ. ಈ ಘಟನೆಗೆ ಸರ್ಕಾರವೇ ಹೊಣೆ ಎಂದು ಅವರು ಆರೋಪಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್‍ಗೆ ಫೆÇೀನ್ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ.
ಹೀಗಾಗಿ ಅವರಿಗೆ ನಾನು ಫೆÇೀನ್ ಮಾಡುತ್ತಿಲ್ಲ. ಉಸ್ತುವಾರಿ ಹೊತ್ತುಕೊಂಡು ಏನು ಮಾಡುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಆಮ್ಲಜನಕದ ಕೊರತೆ ಬಗ್ಗೆ ಮುಖ್ಯ ಕಾರ್ಯದರ್ಶಿಗೆ ತಿಳಿಸಿದ್ದು, ಹಾಸಿಗೆಗಳ ಸಂಖ್ಯೆ ಹೆಚ್ಚಿಸಬೇಕು, ನೇರವಾಗಿ ಆಮ್ಲಜನಕ ಪೂರೈಸಬೇಕೆಂದು ಒತ್ತಾಯಿಸಿದ್ದೇನೆ ಎಂದು ಅವರು ತಿಳಿಸಿದರು.