ಚಾ.ನಗರ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುವೆ: ಸಿ.ಪುಟ್ಟರಂಗಶೆಟ್ಟಿ

ಚಾಮರಾಜನಗರ, ಜೂ.19:- ಕ್ಷೇತ್ರದ ಮತದಾರರು ನಾಲ್ಕನೆಯ ಬಾರಿಯೂ ನನ್ನ ಮೇಲೆ ನಂಬಿಕೆಯಿಟ್ಟು ನನಗೆ ಅಭೂತಪೂರ್ವ ಗೆಲುವು ತಂದುಕೊಟ್ಟಿದ್ದಾರೆ. ಅವರ ಬಯಕೆಯಂತೆ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುವೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
ನಗರದ ಅನ್ವರ್ ಪಾಷ ಕಲ್ಯಾಣ ಮಂಟಪದಲ್ಲಿ ಎಸ್‍ಪಿಎಸ್ ಗ್ರೂಪ್ ವತಿಯಿಂದ ಮುಸ್ಲಿಂ ಧರ್ಮದ ಗುರುಗಳಿಗೆ ಹಾಗೂ ಮುಖಂಡರಿಗೆ ಹಮ್ಮಿಕೊಂಡಿದ್ದ ಕೃತಜ್ಞತಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕಳೆದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ದಿಗೆ ಬಿಜೆಪಿ ಸರ್ಕಾರ ಅನುದಾನ ನೀಡಲಿಲ್ಲ. ಕ್ಷೇತ್ರದ ಅಭಿವೃದ್ದಿಯಾಗಲಿಲ್ಲ. ಈಗ ರಾಜ್ಯದಲ್ಲಿ ನಮ್ಮದೆ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ನಮ್ಮ ನೆಚ್ಚಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಂದ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಿಸಿ ಕ್ಷೇತ್ರದ, ಪಟ್ಟಣದ ಅಭಿವೃದ್ದಿಗೆ ಶ್ರಮಿಸಲಾಗುವುದು ಎಂದರು.
ಪುಟ್ಟರಂಗಶೆಟ್ಟರ ಗೆಲುವು ಪ್ರಜಾಪ್ರಭುತ್ವದ ಗೆಲುವು: ನಗರಸಭಾ ಮಾಜಿ ಅಧ್ಯಕ್ಷ ಎಸ್.ನಂಜುಂಡಸ್ವಾಮಿ ಮಾತನಾಡಿ, ವಿರೋಧ ಪಕ್ಷದ ಹಣದ ಹೊಳೆಯಲ್ಲೂ ಕೂಡ ಈ ಬಾರಿಕ್ಷೇತ್ರದ ಮತದಾರರು ನಾಲ್ಕನೆಯ ಬಾರಿಯೂ ಶಾಸಕರಾದ ಸಿ.ಪುಟ್ಟರಂಗಶೆಟ್ಟರಿಗೆ ಅಭೂತ ಪೂರ್ವ ಗೆಲುವು ತಂದುಕೊಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಮತದಾರರ ಬಯಕೆಯಂತೆ ಶಾಸಕರುಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಗಳನ್ನು ಮಾಡಿಕೊಡುವ ಮೂಲಕ ಋಣಿಯಾಗಬೇಕಿದೆ ಎಂದರು.
ಸನ್ಮಾನ ಸ್ವೀಕರಿಸಿದ ಮುಸ್ಲಿಂ ಧರ್ಮದ ಗುರುಗಳಾದ ಡಾ.ಜಹೀರ್ ಅಹಮದ್ ಮಾತನಾಡಿ, ಚಾಮರಾಜನಗರ ವಿಧಾನಸಭಾಕ್ಷೇತ್ರದಲ್ಲಿ ನಾಲ್ಲು ಬಾರಿ ಗೆಲುವು ಸಾಧಿಸಿದ್ದೀರಿ. ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು, ಕಾನೂನು ಕಾಲೇಜು ಸೇರಿದಂತೆ ಇನ್ನಿತರ ಅಭಿವೃದ್ದಿ ಕೆಲಸ ಮಾಡಿದ್ದೀರಿ ಅದಕ್ಕಾಗಿ ಜಿಲ್ಲೆಯಜನತೆಯ ಪರವಾಗಿ ಹಾಗೂ ಮುಸ್ಲಿಂ ಸಮುದಾಯ ವತಿಯಿಂದ ನಿಮಗೆ ಅಭಿನಂದನೆ ಸಲ್ಲಿಸಲಾಗುವುದು. ತಮ್ಮ ಅಧಿಕಾರಿಅವಧಿಯಲ್ಲಿ ಜಿಲ್ಲೆಗೆ ಆಗಬೇಕಾಗಿರುವ ಅಭಿವೃದ್ದಿ ಕೆಲಸ ಮಾಡಿಕೊಡಬೇಕು ಹಾಗೂ ಗಾಳೀಪುರ ಬಡಾವಣೆಗೆ ಒಳಚರಂಡಿ ಸೇರಿದಂತೆ ಮೂಲಭೂತ ಸೌಕರ್ಯಗಳಿಲ್ಲದೆ ತುಂಬಾಕಷ್ಟದಲ್ಲಿ ನಿವಾಸಿಗಳು ಜೀವನ ಸಾಗಿಸುತ್ತಿದ್ದಾರೆಅದರಿಂದ ಈ ಬಡಾವಣೆಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದ ಅಯೋಜಕಗಣಿ ಉದ್ಯಮಿ ಫೈಸಲ್‍ಷರೀಫ್‍ಅಧ್ಯಕ್ಷತೆ ವಹಿಸಿದ್ದರು
ಕಾರ್ಯಕ್ರಮದಲ್ಲಿ ಕಾಮಿಲ್ ನಹೀಂ ಮುಲ್ಲಾ ಹಕ್, ಲತೀಫ್‍ವುರ್ ರೆಹಮಾನ್, ಮುಫ್ತಿಜಾಫರ್ ಹುಸೇನ್, ಜಿ.ಪಂ.ಮಾಜಿ ಸದಸ್ಯ ಎಸ್.ಸೋಮನಾಯಕ, ಕನಿಷ್ಟ ವೇತನಾ ಸಲಹಾ ಸಮಿತಿ ಮಾಜಿ ಅಧ್ಯಕ್ಷ ಉಮೇಶ್, ಮರಿಸ್ವಾಮಿಶೆಟ್ಟಿ, ಚೂಡಾ ಮಾಜಿ ಅಧ್ಯಕ್ಷರಾದ ಇμರ್Áದುಲ್ಲಾ, ಸುಹೇಲ್‍ಅಲಿಖಾನ್, ಗಣಿಉದ್ಯಮಿ ಸೈಯದ್ ಹಸ್ಮತ್‍ಉಲ್ಲಾ,ಸೈಯದ್ ಅಮಾನುಲ್ಲಾರಜ್ಕಿಯಾ ಮಿಲ್ಸ್, ನಗರಸಭಾ ಮಾಜಿ ಸದಸ್ಯ ಸೈಯದ್ ಅತೀಕ್, ಕೆಪಿಸಿಸಿ ಸದಸ್ಯ ಸೈಯದ್‍ರಫೀ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಮುಖಂಡ ನಾಗರಾಜಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹಮ್ಮದ್‍ಅಸ್ಗರ್, ಅರಕಲವಾಡಿ ಗುರುಸ್ವಾಮಿ ಇತರರು ಹಾಜರಿದ್ದರು.