ಚಾ.ನಗರದಲ್ಲಿ ಚಿರತೆ ಪ್ರತ್ಯಕ್ಷ; ಜನ ಗಾಬರಿ!

ಚಾಮರಾಜನಗರ:ಜ07: ನಗರದ ಹೊರ ವಲಯದಲ್ಲಿರುವ ಚಾಮರಾಜನಗರ ಮೆಡಿಕಲ್ ಕಾಲೇಜು ಹಾಗೂ ವೈದ್ಯರ ವಸತಿಗೃಹದಲ್ಲಿ ಚಿರತೆ ಓಡಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಬುಧವಾರ ರಾತ್ರಿ ಕಾರಿಡಾರ್‍ನಲ್ಲಿ ಚಿರತೆ ಓಡಾಡುವ ದೃಶ್ಯ ಸೆರೆಯಾಗಿದ್ದು ವೈದ್ಯರು, ವಿದ್ಯಾರ್ಥಿಗಳಲ್ಲಿ ಆತಂಕ ಮನೆ ಮಾಡಿದೆ.
ಕಾಲೇಜು ಸಮೀಪದಲ್ಲೇ ಕುರುಚಲು ಕಾಡಲ್ಲಿ ಚಿರತೆಗಳು ವಾಸಿಸುತ್ತಿವೆ. ಆದರೆ, ಇದೇ ಮೊದಲ ಬಾರಿಗೆ ವಸತಿಗೃಹದ ಆವರಣಕ್ಕೆ ಬಂದಿರುವುದು ಸಿಬ್ಬಂದಿ, ವಿದ್ಯಾರ್ಥಿಗಳ ಭಯಕ್ಕೆ ಕಾರಣವಾಗಿದೆ.