ಚಾ.ನಗರಕ್ಕೆ ಆಕ್ಸಿಜನ್ ಪೂರೈಕೆಗೆ ಕ್ರಮ: ಸಂಸದ

ಮೈಸೂರು:ಏ:03: ಮೈಸೂರಿನಿಂದ ಚಾಮರಾಜ ನಗರಕ್ಕೆ ಆಕ್ಸಿಜನ್ ಪೂರೈಕೆಯಾಗದ ಹಿನ್ನೆಲೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 22 ಮಂದಿ ಸಾವನ್ನಪ್ಪಿದ್ದಾರೆಂಬ ಆರೋಪ ಕೇಳಿ ಬಂದಿರುವ ಹಿನ್ನೆಲೆ, ಈ ಕುರಿತು ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿ ಸಿದ್ದಾರೆ.
ಮೈಸೂರಿನಲ್ಲಿ ಈ ಬಗ್ಗೆ ಮಾತನಾಡಿರುವ ಸಂಸದ ಪ್ರತಾಪ್ ಸಿಂಹ, ಚಾಮರಾಜನಗರದ ಘಟನೆ ದುರದೃಷ್ಟಕರ.ಅವರು ಮತ್ತಷ್ಟು ಜಾಗ್ರತೆ ವಹಿಸಬೇಕಾಗಿತ್ತು. ಈ ಬಗ್ಗೆ ಮೈಸೂರಿನ ಮಾಧ್ಯಮ ದಿಂದ ಮಾಹಿತಿ ಸಿಕ್ಕಿತು. ತಕ್ಷಣ ನಾನು ಆಕ್ಸಿಜನ್ ವ್ಯವಸ್ಥೆ ಮಾಡಿದೆವು.
ಮಧ್ಯರಾತ್ರಿಯಿಂದಲೇ ಆಕ್ಸಿಜನ್ ಪೂರೈಕೆಗೆ ಕ್ರಮವಹಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದರು.
ಮೈಸೂರಿನಲ್ಲೂ ಪರಿಸ್ಥಿತಿ ಅದೇ ರೀತಿ ಇದೆ. ಜಿಲ್ಲಾಧಿಕಾರಿಗೆ ಆಕ್ಸಿಜನ್ ಪ್ಲಾಂಟ್ ನಿಯಂತ್ರಣ ಅಧಿಕಾರ ಇಲ್ಲ. ನಮಗೆ 44 ಎಂಎಲ್ ಟಿ ಬೇಕು, 22 ಎಂ.ಎಲ್.ಟಿ ಬರುತ್ತಿದೆ. ಕೆಆರ್ ಆಸ್ಪತ್ರೆಯಲ್ಲಿ 300 ಜನರಿಗೆ ಆಕ್ಸಿಜನ್ ಅವಶ್ಯಕತೆ ಇದೆ.
ಹೆಚ್ಚು ಕಡಿಮೆಯಾದರೆ ಅವರ ಪ್ರಾಣಕ್ಕೆ ಕುತ್ತು ಬರುತ್ತದೆ.
ಚಾಮರಾಜನಗರ ಇನ್ನಷ್ಟು ಜಾಗ ರೂಕತೆ ಎಚ್ಚರ ವಹಿಸಬೇಕಾಗಿತ್ತು ಎಂದರು.
ಚಾಮರಾಜನಗರ ಜಿಲ್ಲೆಯಲ್ಲಿ ಅಕ್ಸಿಜನ್ ಕೊರತೆ ಹಿನ್ನೆಲೆ ಅಕ್ಸಿಜನ್ ಗಾಗಿ ಮೈಸೂರು ಸಂಸದರಿಗೆ ಚಾಮರಾಜನಗರ ಜಿಲ್ಲಾಧಿಕಾರಿ ರವಿ ಅವರು ಮನವಿ ಮಾಡಿದ್ದರು. ಈ ಹಿನ್ನೆಲೆ ಯಲ್ಲಿ ಸಂಸದ ಪ್ರತಾಪ್ ಸಿಂಹ 50 ಸಿಲಿಂಡರ್ ವ್ಯವಸ್ಥೆ ಮಾಡಿದ್ದರು.
ಈ ಬಗ್ಗೆ ಚಾಮರಾಜನಗರ ಜಿಲ್ಲಾಧಿಕಾರಿ ಹಾಗೂ ಮೈಸೂರು ಅಪರ ಜಿಲ್ಲಾಧಿಕಾರಿ ಜೊತೆ ಪೆÇೀನ್ ನಲ್ಲಿ ಮಾತುಕತೆ ನಡೆಸಿದ್ದು, ಮಾತುಕತೆ ಬಳಿಕ ಸಂಸದ ಪ್ರತಾಪ್ ಸಿಂಹ50 ಸಿಲಿಂಡರ್ ಅಕ್ಸಿಜನ್ ಕಳುಹಿಸಿದ್ದರು.
ಈ ಬಗ್ಗೆ ಕಳೆದ ರಾತ್ರಿ 11 ಗಂಟೆ ಸಂದರ್ಭದಲ್ಲಿ ಪ್ರತಾಪ್ ಸಿಂಹ ಫೇಸ್ ಬುಕ್‍ಪೆÇೀಸ್ಟ್ ಮಾಡಿದ್ದಾರೆ. ಚಾಮರಾಜನಗರದಲ್ಲಿ ರಾತ್ರಿ 2 ಗಂಟೆಗೆ ಮುಗಿದು ಹೋಗುತ್ತಿದ್ದು ಅಕ್ಸಿಜನ್.
ಇದಕ್ಕೆ ತುರ್ತಾಗಿ ಅಕ್ಸಿಜನ್ ಕಳುಹಿಸಿರುವುದಾಗಿ ಪ್ರತಾಪ್ ಸಿಂಹ್ ಫೇಸ್ ಬುಕ್ ಪೆÇೀಸ್ಟ್ ಹಾಕಿದ್ದಾರೆ.