ಚಾಳಿ ಬಿದ್ದ ಕಳ್ಳರ ಪೇರೆಡ್

ತಿ. ನರಸೀಪುರ: 07: ಪೆÇಲೀಸ್ ಇಲಾಖೆ ವತಿಯಿಂದ ಚಾಳಿ ಬಿದ್ದ ಕಳ್ಳರು (ಎಂಒಬಿ) ಪೇರೆಡ್ ಅನ್ನು ತಾಲ್ಲೂಕಿನ ವಿದ್ಯೋದಯ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮೈಸೂರು ಜಿಲ್ಲಾ ಪೆÇಲೀಸ್ ಅಪರ ವರಿಷ್ಠಾಧಿಕಾರಿ ಶಿವಕುಮಾರ್ ಅವರು ನಡೆಸಿದ ಪೆರೆಡ್ ನಲ್ಲಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಪೆÇಲೀಸ್ ದಾಖಲೆಗಳಲ್ಲಿರುವ ವ್ಯಕ್ತಿಗಳನ್ನು ಕರೆಸಿ ಮಾಹಿತಿ ಪಡೆದರು.
ಬಳಿಕ ಮಾತನಾಡಿದ, ತಾಲ್ಲೂಕಿನಲ್ಲಿ ಎಂಒಬಿ ಕಾರ್ಡ್ ದಾಖಲೆಗಳಲ್ಲಿರುವ ವ್ಯಕ್ತಿಗಳು ಬೇರೆ ಬೇರೆ ಕಡೆಗಳಿಗೆ ಹೋಗಿರುತ್ತಾರೆ. ದಾಖಲೆಗಳಲ್ಲಿ ಹಳೆಯ ವಿಳಾಸ ಮಾತ್ರ ಇರುತ್ತದೆ. ಕೆಲವರಿಗೆ ವಯಸ್ಸಾಗಿರುತ್ತದೆ. ಕೆಳವರು ನಡತೆ ಬದಲಾಯಿಸಿಕೊಂಡು ಒಳ್ಳೆಯ ನಡತೆಯುಳ್ಳವರಾಗಿತ್ತಾರೆ. ಅಂತಹವರನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಲಾಗುತ್ತದೆ. ಅವರ ಮಾಹಿತಿಗಳನ್ನು ದಾಖಲೀಕರಿಸುವುದು. ಎಂಒಬಿ ದಾಖಲೆಯಲ್ಲಿದ್ದು ನಿಧನರಾದವರ ಮಾಹಿತಿ ಪಡೆದು ಪ್ರಕರಣ ಮುಕ್ತಾಯಗೊಳಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಪೆರೆಡ್ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಟಿ. ನರಸೀಪುರ, ಬನ್ನೂರು ತಲಕಾಡು ಪೆÇಲೀಸ್ ಠಾಣೆ ವ್ಯಾಪ್ತಿಯ ಅನೇಕರು ಪೇರೆಡ್ನಲ್ಲಿ ಭಾಗವಹಿಸಿದ್ದರು.
ಈ ವೇಳೆ ನಂಜನಗೂಡು ಡಿವೈಎಸ್ಪಿ ಗೋವಿಂದರಾಜ್, ಸಿಪಿಐ ಎನ್. ಜಿ. ಕೃಷ್ಣಪ್ಪ, , ಪಟ್ಟಣ ಠಾಣೆಯ ಪಿಎಸ್‍ಐ ಮಂಜು ಬನ್ನೂರು ಪೆÇಲೀಸ್ ಠಾಣೆಯ ಪಿಎಸ್‍ಐ ಪುನೀತ್, ತಲಕಾಡು ಪೆÇಲೀಸ್ ಠಾಣೆಯ ಪಿಎಸ್‍ಐ ಸಿದ್ದಯ್ಯ, ಪೆÇಲೀಸ್ ಸಿಬ್ಬಂದಿಯವರಾದ ಪಚ್ಚೇಗೌಡ, ನಿಂಗರಾಜು, ಸುನೀತಾ, ಸಂತೋಷ್, ರಮೇಶ್, ಮಹದೇವ್ ದಯಾನಂದ್ ಸೇರಿದಂತೆ ಮತ್ತಿತರು ಹಾಜರಿದ್ದರು.