ಚಾಲ್ತಿ ವರ್ಷದ ಆಸ್ತಿ ತೆರಿಗೆ ಪಾವತಿಸಿದ್ದಲ್ಲಿ ಶೇ. 5 ರಷ್ಟು ರಿಯಾಯಿತಿ

ಕಲಬುರಗಿ,ಮಾ.31:ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಸ್ವತ್ತುಗಳ ಮಾಲೀಕರು/ ಅನುಭೋಗದಾರರು ಕರ್ನಾಟಕ ಮಹಾನಗರ ಪಾಲಿಕೆ ಅಧಿನಿಯಮ 1976 ರ ಕಲಂ 112(ಎ)(1) ರ ಪ್ರಕಾರ, ಪ್ರತಿ ಹಣಕಾಸು ವರ್ಷ ಪ್ರಾರಂಭವಾದ ಮೊದಲ ತಿಂಗಳಿನಲ್ಲಿ ಚಾಲ್ತಿ ವರ್ಷದ ಆಸ್ತಿ ತೆರಿಗೆಯನ್ನು 2023ರ ಏಪ್ರಿಲ್ 30ರೊಳಗಾಗಿ ಪಾವತಿಸಿದ್ದಲ್ಲಿ, ಆಸ್ತಿ ತೆರಿಗೆ ಮೇಲೆ ಶೇ. 5 ರಷ್ಟು ರಿಯಾಯಿತಿ ಕಲ್ಪಿಸಲಾಗುತ್ತಿದೆ.
ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳಬೇಕೆಂದು ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತರಾದ ಭುವನೇಶ ದೇವಿದಾಸ್ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.