ಚಾಲನೆ ಮಾಡುವಾಗ ಅತಿ ವೇಗ ಬೇಡ

ಸೈದಾಪುರ:ಜ.13:ಚಾಲನೆ ಮಾಡುವಾಗ ಅತಿ ವೇಗ ಬೇಡ. ಕೆಲವೊಮ್ಮೆ ಹಕ್ಕಿಗಳು ಕಡಿಮೆ ಎತ್ತರದಲ್ಲಿ ಹಾರುವಾಗ ವಾಹನಗಳಿಗೆ ಅಪ್ಪಳಿಸುತ್ತವೆ. ಇದು ಪಕ್ಷಿ ಸಂಕುಲನಕ್ಕೆ ತೊಂದರೆಯನ್ನುಂಟು ಮಾಡುತ್ತದೆ ಎಂದು 9ನೇ ತರಗತಿ ವಿದ್ಯಾರ್ಥಿನಿ ಚೈತ್ರಾ.ಡಿ ಅಭಿಪ್ರಾಯಪಟ್ಟರು.
ಪಟ್ಟಣದ ವಿದ್ಯಾ ವರ್ಧಕ ಪ್ರೌಢ ಶಾಲೆಯಲ್ಲಿ ಜೀವಿ ಸಂಕುಲ ನಾಶ ಕುರಿತು ಜನ ಜಾಗೃತಿ ಮೂಡಿಸಿ ಮಾತನಾಡಿದರು. ಸಾಕು ಪ್ರಾಣಿಗಳನ್ನು ಸರಿಯಾಗಿ ಇರಿಸಿದರೆ ಪಕ್ಷಿಗಳಿಗೆ ಹಾನಿಯಾಗುವುದಿಲ್ಲ. ನಿಮ್ಮ ಮನೆಯ ಅಲಂಕಾರಕ್ಕಾಗಿ ಪಕ್ಷಿಗಳನ್ನು ಖರೀದಿಸಬೇಡಿ. ಪಕ್ಷಿಗಳಿಗೆ ನಿಮ್ಮ ಹಿತ್ತಲಿನಲ್ಲಿ ನೀರು ಮತ್ತು ಆಹಾರದ ವ್ಯವಸ್ಥೆ ಮಾಡಿ. ಪಕ್ಷಿ ಹುಳಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಲು ಮರೆಯಬೇಡಿ. ರಾಸಾಯನಿಕಗಳು ಮತ್ತು ಕೀಟನಾಶಕಗಳ ಬಳಕೆಯನ್ನು ತಪ್ಪಿಸಿ ಏಕೆಂದರೆ ಕೆಲವೊಮ್ಮೆ ಪಕ್ಷಿಗಳು ಈ ವಿಷವನ್ನು ಆಕಸ್ಮಿಕವಾಗಿ ಸೇವಿಸುತ್ತವೆ ಎಂದು ಸಲಹೆ ನೀಡಿದರು. ಮರಗಳು ಸಾವಿರಾರು ಪಕ್ಷಿ ಪ್ರಭೇದಗಳಿಗೆ ಆವಾಸ ಸ್ಥಾನವನ್ನು ಒದಗಿಸುತ್ತವೆ. ಆದ್ದರಿಂದ ಪಕ್ಷಿಗಳಿಗೆ ಆಶ್ರಯ ನೀಡಲು ನಾವು ಹೆಚ್ಚು ಹೆಚ್ಚು ಮರಗಳನ್ನು ನೆಡಬೇಕು. ಆ ಮೂಲಕ ನೀವು ಪಕ್ಷಿಗಳ ರಕ್ಷಣೆಗಾಗಿ ಕೆಲಸ ಮಾಡುವ ಸಂರಕ್ಷಣಾ ಗುಂಪಿಗೆ ಸೇರಬಹುದು. ಪರಿಸರ ಸಮತೋಲನ ಕಂಡು ಕೊಳ್ಳಲು ಎಲ್ಲರು ಜವಬ್ದಾರಿಯೊಂದಿಗೆ ಕಾರ್ಯ ನಿರ್ವಹಿಸಬೇಕಾಗಿದೆ. ಇದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಕಿವಿ ಮಾತುಗಳನ್ನು ಹೇಳಿದರು. ಮುಖ್ಯಗುರು ಲಿಂಗಾರಡ್ಡಿ ನಾಯಕ, ವಿಜ್ಞಾನ ಶಿಕ್ಷಕ ರಾಚಯ್ಯ ಸ್ವಾಮಿ ಬಾಡಿಯಾಲ, ಸಂಗಾರೆಡ್ಡಿ, ತೋಟೇಂದ್ರ, ವಿದ್ಯಾರ್ಥಿನಿ ಸರ್ವಮಂಗಳ ಸೇರಿದಂತೆ ಇತರರಿದ್ದರು.
ಸೆಲ್ ಪೋನ ಬಳಕೆ ಕಡಿಮೆ ಮಾಡಬೇಕು. ಪ್ರಮುಖ ಕರೆಗಳನ್ನು ಮಾತ್ರ ಮಾಡಲು ಪ್ರಾಮುಖ್ಯತೆ ನೀಡಬೇಕು. ಮಾತನಾಡುವ ಸಮಯವನ್ನು ಕನಿಷ್ಟ ಸಮಯಕ್ಕೆ ಕಡಿತಗೊಳಿಸಿ. ಸಿಗ್ನಲ ದುರ್ಬಲವಾಗಿರುವಾಗ ಮೊಬೈಲ ಪೋನಗಳನ್ನು ಬಳಸದಿರಲು ಆಧ್ಯತೆ ನೀಡಿ. ಏಕೆಂದರೆ ದುರ್ಬಲ ಸಿಗ್ನಲಗಳ ಸಮಯದಲ್ಲಿ ಹತ್ತಿರದ ಮೊಬೈಲ ಟವರನೊಂದಿಗೆ ಸಂಪರ್ಕಿಸಲು ವಿಕಿರಣಗಳು ತುಂಬಾ ಪ್ರಬಲವಾಗುತ್ತದೆ. ಚೈತ್ರಾ ವಿದ್ಯಾರ್ಥಿನಿ