ಚಾಲಕ ಸೋಮನಕಟ್ಟಿಗೆ ಚಿನ್ನದ ಪದಕ


ಸಂಜೆವಾಣಿ ವಾರ್ತೆ
ಹೊಸಪೇಟೆ:ಏ,22- ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹೊಸಪೇಟೆ ವಿಭಾಗದ ಹೂವಿನಹಡಗಲಿ ಘಟಕದ ಚಾಲಕ ಸೋಮನಕಟ್ಟಿ ಅವರು ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಕೊಟ್ರಪ್ಪ ತಿಳಿಸಿದ್ದಾರೆ.
ಅಸೋಶಿಯನ್ ಆಫ್ ಸ್ಟೇಟ್ ರೋಡ್ ಟ್ರಾನ್‍ಪೋರ್ಟ್ ಅಂಡರ್‍ಟೇಕಿಂಗ್ ದೆಹಲಿಯಲ್ಲಿ ಇತ್ತಿಚಿಗೆ ಆಯೋಜಿಸಿದ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ದೇಶಾದಂತ್ಯ 42 ಚಾಲಕರನ್ನು ಗುರುತಿಸಿದ್ದು, ಹಡಗಲಿ ವಿಭಾಗದ ಚಾಲಕ ಸೋಮನಕಟ್ಟಿ ರಾಷ್ಟ್ರೀಯ ಪ್ರಶಸ್ತಿ ಹಾಗೂ ಸನ್ಮಾನವನ್ನು ಸ್ವೀಕರಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಎಂ.ಎಸ್.ಆರ್.ಟಿ.ಸಿ. ವ್ಯವಸ್ಥಾಪಕ ನಿರ್ದೇಶಕ ಶೇಖರ ಚನ್ನೆ, ಎ.ಎಸ್.ಆರ್.ಟಿ.ಯು. ಉಪ ನಿರ್ದೇಶಕ ರಿತೇಶ ಕುಮಾರ ಗೋಯಲ್ ಸೇರಿದಂತೆ ಅಲ್ಕ ಉಪಧ್ಯಾ ಇತರರು ಹಾಜರಿದ್ದರು.