ಚಾಲಕರಿಗೆ ಪರವಾನಿಗೆ ಬಗ್ಗೆ ಅರಿವು ಕಾರ್ಯ ಕ್ರಮ


ಸಂಜೆವಾಣಿ ವಾರ್ತೆ
ಮೊಳಕಾಲ್ಮೂರು,ಜು.28: ತಾಲೂಕಿನ ರಾಂಪುರ ಪೋಲೀಸ್ ಠಾಣೆಯಲ್ಲಿ ಇಂದು ವಾಹನ ಚಾಲಕರಿಗೆ ಚಾಲಕ ಪರವಾನಿಗೆ ಬಗ್ಗೆ ಅರಿವು ಮೂಡಿಸಲಾಯಿತು.
ರಾಂಪುರ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಬಹುತೇಕ ಗ್ರಾಮಗಳಲ್ಲಿ ಆಟೋ, ಟೆಂಪೋಗಳ ಮೂಲಕ ಜನರು ಪ್ರಯಾಣಿಸುತ್ತಿದ್ದು ಅನೇಕ ಬಾರಿ ಅಪಘಾತಗಳು ಸಂಭವಿಸಿದ್ದು ಉಂಟು.
ಇದನ್ನು ಮನಗಂಡ ರಾಂಪುರ ಪೋಲೀಸ್ ಠಾಣೆಯ ಪಿಎಸ್ಐ ಮಹೇಶ್ ಹೊಸಪೇಟೆ ವಾಹನ ಚಾಲಕರಿಗೆ ಜಾಗೃತಿ ಮೂಡಿಸುವಂತಹ  ‘ಚಾಲಕರಿಗೆ ಪರವಾನಿಗೆ (ಡೈವಿಂಗ್ ಲೈಸೆನ್ಸ್) ಮತ್ತು ವಾಹನಕ್ಕೆ ಇನ್ಸೂರೆನ್ಸ್  ಕಡ್ಡಾಯ ‘ ಎಂಬ ಅರಿವು ಕಾರ್ಯ ಕ್ರಮ ನಡೆಸಿದರು. 
ಈ ಕಾರ್ಯಕ್ರಮದಲ್ಲಿ ಸುಮಾರು 50 ಜನ ಆಟೋ ಮತ್ತು ಟೆಂಪೋ ಇನ್ನೀತರ ವಾಹನ ಚಾಲಕರಿಗೆ ವಾಹನ ಪರವಾನಿಗೆ ಮತ್ತು ಚಾಲಕ ಪರವಾನಿಗೆ ಕಡ್ಡಾಯವಾಗಿ ಮಾಡಿಸಲೇಬೇಕು ಮತ್ತು ಆಗುತ್ತಿರುವ ಅಪಘಾತ ಗಳನ್ನು ತಡೆಯಬೇಕು ಆಟೋದಲ್ಲಿ ನಿಗದಿತ ಕ್ಕಿಂತ ಹೆಚ್ಚು ಜನರನ್ನು ಹಾಕಿ ಕೊಳ್ಳಬಾರದು, ಕುಡಿದು ವಾಹನ ಚಾಲನೆ ಮಾಡಬಾರದು ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಕಾನೂನು ಬಾಹಿರ ಕೆಲಸಗಳಿಗೆ ಆಟೋ ಮತ್ತು ವಾಹನಗಳನ್ನು ಬಳಸಬಾರದು ಎಂದು ಕಾರ್ಯ ಕ್ರಮ ತಿಳಿಸಿದರು.
ಈ ಸಂದರ್ಭದಲ್ಲಿ ಪಿಎಸ್ಐ ಮಹೇಶ್ ಹೊಸಪೇಟೆ,( ಕ್ರೈಂ ವಿಭಾಗದ) ಪಿಎಸ್ಐ ಪರಶುರಾಮ್, ಮತ್ತು ಮುಖ್ಯ ಪೆದೆ ಲೋಕೇಶ್ ಹಾಗೂ ಪೋಲೀಸ್ ಸಿಬ್ಬಂದಿ, ವಾಹನ ಚಾಲಕರು ಉಪಸ್ಥಿತರಿದ್ದರು.