ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿ:ಚಾಲಕನಿಗೆ ಗಾಯ

ವಿಜಯಪುರ,ಫೆ.12:ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ವಾಹನವೊಂದು
ವಿಜಯಪುರ ನಗರದ ಬಸವೇಶ್ವರ ವೃತ್ತದ ಬಳಿ ಪಲ್ಟಿಯಾದ ಘಟನೆ
ನಸುಕಿನ ಜಾವ ಸಂಭವಿಸಿದೆ.
ಟ್ಯಾಂಕರ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ರಸ್ತೆಯಲ್ಲಿ ಟ್ಯಾಂಕರ್ ಪಲ್ಟಿಯಾದ ಕಾರಣ ಕೆಲ ಹೊತ್ತು ಸಂಚಾರ ಬಂದ್ ಆಗಿತ್ತು.
ಕ್ರೇನ್ ಸಹಾಯದಿಂದ ಸಂಚಾರಿ ಪೆÇಲೀಸರು ಟ್ಯಾಂಕರ್ ತೆರವುಗೊಳಿಸಿದರು.
ವಿಜಯಪುರ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.