ಚಾಲಕನ ನಿಯಂತ್ರಣ ತಪ್ಪಿ ಅಕ್ಕಿ ಲಾರಿ ಪಲ್ಟಿ

(ಸಂಜೆವಾಣಿ ವಾರ್ತೆ)
ಸಿಂಧನೂರು, ಏ.೧೭-
ಚಾಲಕನ ನಿಯಂತ್ರಣ ತಪ್ಪಿ ಅಕ್ಕಿ ಸಾಗುಸುತ್ತಿದ್ದ ಲಾರಿ ಪಲ್ಟಿ ಹೊಡೆದಿರುವ ಘಟನೆ ಸಿಂಧನೂರು ಹಿರೇಹಳ್ಳದ ಬಳಿ ನಡೆದಿದೆ.
ಸಿಂಧನೂರು ನಗರದಲ್ಲಿ ಬರುವ ಹಿರೇಹಳ್ಳದ ಹೆದ್ದಾರಿಯಲ್ಲಿ ಸಾಗುತ್ತಿದ್ದ ವೇಳೆ ಬೆಳಗಿನ ಜಾವ ೩ ಗಂಟೆ ಸುಮಾರಿಗೆ ರಸ್ತೆ ಮಧ್ಯದಲ್ಲಿ ಲಾರಿ ಪಲ್ಟಿ ಹೊಡೆದಿದೆ. ಹೆದ್ದಾರಿ ಮಧ್ಯದಲ್ಲಿ ಅಪಘಾತ ಜರುಗಿದ್ದರಿಂದ ಸಿಂಧನೂರು ರಾಯಚೂರು ಮುಖ್ಯ ರಸ್ತೆ ಸಂಪೂರ್ಣ ಬಂದಾಗಿ ಕಿಲೋಮಿಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ತದನಂತರ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೊಲೀಸರು
ತೆರವು ಕಾರ್ಯಚರಣೆ ಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸಿಂಧನೂರು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.