ಚಾರ್ಲಿ 777ಗೆ ಪ್ರಾದೇಶಿಕ ಪ್ರಶಸ್ತಿ:ಬಾ ನಾ ಸುಬ್ರಮಣ್ಯಗೂ ಗೌರವ

ನವದೆಹಲಿ,ಆ.24-69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ದೆಹಲಿಯಲ್ಲಿಂದು ಪ್ರಕಟಿಸಲಾಗಿದ್ದು ಕನ್ನಡದ ಚಾರ್ಲಿ-777 ಅತ್ಯುತ್ತಮ ಪ್ರಾದೇಶಿಕ ಪ್ರಶಸ್ತಿ ಗರಿ ಮುಡಿಗೇರಿಸಿಕೊಂಡಿದೆ.

ರಕ್ಷಿತ್ ಶೆಟ್ಟಿ ನಟನೆ ಚಾರ್ಲಿ 777 ಚಿತ್ರವನ್ನು ಕಿರಣ್ ರಾಜ್ ನಿರ್ದೇಶನ ಮಾಡಿದ್ದರು. ನಾಯಿ ಮತ್ತು ಮನುಷ್ಯನ ಸಂಬಂಧದ ಕಥೆಯನ್ನು ಚಿತ್ರ ಒಳಗೊಂಡಿದೆ.

ನಾನ್ ಫೀಚರ್ ಫಿಲ್ಮ್ ಕನ್ನಡದ ಅನಿರುದ್ಧ ಜತ್ಕರ್ ನಿರ್ದೇಶನದ ಬಾಳೆ ಬಂಗಾರ ಪ್ರಶಸ್ತಿ ಪಡೆದಿದೆ ಎನ್ನುವುದನ್ನು ಈ ಬಾರಿಯ ಚಿತ್ರೋತ್ಸವದ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ನಿರ್ದೇಶಕ ಕೇತನ್ ಮೆಹ್ತಾ ಪ್ರಕಟಿಸಿದ್ದಾರೆ

ಬಾನಾ ಸುಬ್ರಮಣ್ಯ ಅವರಿಗೂ ಪ್ರಶಸ್ತಿ


ಸಿನಿಮಾ ಪತ್ರಕರ್ತರಿಗೆ ನೀಡುವ `ಅತ್ಯುತ್ತಮ ಸಿನಿಮಾ ವಿಮರ್ಶಕ ಪ್ರಶಸ್ತಿ ಕನ್ನಡದ ಹಿರಿಯ ಚಲನಚಿತ್ರ ಪತ್ರಕರ್ತರ ಪತ್ರಕರ್ತ ಬಾ ನಾ ಸುಬ್ರಮಣ್ಯಪಾಲಾಗಿದೆ.

ಕಳೆದ 43 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಚಿತ್ರರಂಗದಲ್ಲಿ ಬಾ ನಾ ಸು ಎಂದೇ ಖ್ಯಾತಿ ಪಡೆದಿದ್ಧಾರೆ.