ಚಾರ್ಮಾಡಿ ಘಾಟ್‌ನಲ್ಲಿ ಪ್ರಯಾಣಿಕರ ಪರದಾಟ

ಚಿಕ್ಕಮಗಳೂರು, ಜು.೩- ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ವ್ಯಾಪ್ತಿಗೆ ಬರುವ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಭಾರೀ ಗಾತ್ರದ ವಾಹನಗಳು ಸಂಚಾರ ಮಾಡುತ್ತಿವೆ.
ಹೀಗೆ ಸಂಚರಿಸಿದ ಲಾರಿಯೊಂದು ದಕ್ಷಿಣ ಕನ್ನಡ-ಚಿಕ್ಕಮಗಳೂರು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಹಾದಿಯಲ್ಲಿ ಕೆಟ್ಟು ನಿಂತು ಪ್ರಯಾಣಿಕರು ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ಚಾರ್ಮುಡಿ ಘಾಟ್ ರಸ್ತೆ ಸಂಚಾರ ದಟ್ಟಣೆಯಿಂದ, ವಾಹನ ಸವಾರರ ಪರದಾಟದ ಜೊತೆಗೆ ಸಾಲುಗಟ್ಟಿ ನಿಂತಿರುವ ವಾಹನಗಳಿಂದ ಸಂಕಷ್ಟ ಎದುರಾಗಿತ್ತು.
ಚಾರ್ಮುಡಿ ಘಾಟ್ನ ೬ನೇ ತಿರುವಿನಲ್ಲಿ ಲಾರಿ ಕೆಟ್ಟು ನಿಂತಿದೆ. ಇದರಿಂದ ರಾತ್ರಿ ೧೧ ಗಂಟೆಯಿಂದ ಮುಂಜಾನೆ ನಾಲ್ಕು ಗಂಟೆಯವರೆಗೂ ಸಂಚಾರ ದಟ್ಟಣೆ ಉಂಟಾಗಿದೆ.ಇದರಿಂದ ರಾತ್ರಿಯಿಂದ ಮುಂಜಾನೆಯವರಿಗೂ ವಾಹನ ಸವಾರರು ಪರದಾಡಿದ್ದಾರೆ.
ಜತೆಗೆ ದಟ್ಟ ಮಂಜು ಕವಿದು, ತುಂತುರು ಮಳೆ ಸಹ ಆಗಿದ್ದು ಇದರಿಂದ ಪ್ರಯಾಣಿಕರು ತೀವ್ರ ಚಳಿಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಹರಸಾಹಸ ಪಡಬೇಕಾಯಿತು.