ಚಾರ್‌ಧಾಮ್ ಯಾತ್ರೆ ೧೨ ದಿನದಲ್ಲಿ ೩೧ ಭಕ್ತರ ಸಾವು

ಉತ್ತರಾಖಂಡ.ಮೇ೧೪:ಚಾರ್ ಧಾಮ್ ಯಾತ್ರೆ ಆರಂಭವಾದ ೧೨ ದಿನಗಳಲ್ಲಿ ೩೧ ಭಕ್ತರು ಸಾವನ್ನಪ್ಪಿದ್ದಾರೆ. ಇವರಲ್ಲಿ ಬದರಿನಾಥದ ಸ್ಥಳೀಯ ನಿವಾಸಿಗಳೂ ಸೇರಿದ್ದಾರೆ. ಈ ಎಲ್ಲಾ ಸಾವುಗಳಿಗೆ ಅಧಿಕ ರಕ್ತದೊತ್ತಡ, ಹೃದಯಾಘಾತ ಕಾರಣ ಎಂದು ರಾಜ್ಯ ಆರೋಗ್ಯ ಡಿಜಿ ಡಾ. ಶೈಲ್ಜಾ ಭಟ್ ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.
ಈ ಬಾರಿ ಉತ್ತರಾಖಂಡದಲ್ಲಿ ಆರಂಭವಾಗಿರುವ ಚಾರ್ ಧಾಮ್ ಯಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಯಾತ್ರೆ ಆರಂಭವಾಗಿ ಕೇವಲ ೧೨ ದಿನಗಳು ಕಳೆದಿದ್ದು,ಇದರ ನಡುವೆ ಇಷ್ಟೊಂದು ಸಂಖ್ಯೆಯಲ್ಲಿ ಭಕ್ತರು ಪ್ರಾಣ ಕಳೆದುಕೊಂಡಿರುವುದರಿಂದ ಆರೋಗ್ಯ ಇಲಾಖೆಗೆ ದೂರುಗಳು ಬರುತ್ತಿವೆ. ಹೀಗಾಗಿ ಇಲಾಖೆ ಪ್ರಯಾಣಿಕರ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಹಲವು ಮಾರ್ಗಸೂಚಿಗಳನ್ನು ಹೊರಡಿಸಿದೆ.
ಈ ಮಾರ್ಗಸೂಚಿಗಳ ಪ್ರಕಾರ, ಭಕ್ತರು ಚಾರ್ ಧಾಮ್ ಪ್ರಯಾಣದ ಮೊದಲು ತಮ್ಮ ಆರೋಗ್ಯವನ್ನು ಪರೀಕ್ಷಿಸಬೇಕು. ಜೊತೆಗೆ ಯಾವುದೇ ಕಾಯಿಲೆ ಇದ್ದರೆ, ನಂತರ ವೈದ್ಯರ ಸಮಾಲೋಚನೆ ವರದಿ ಮತ್ತು ಅವರ ಸಂಪರ್ಕ ಸಂಖ್ಯೆಯನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಬೇಕು. ಇದಲ್ಲದೆ, ಹೃದ್ರೋಗಿಗಳು, ಸಕ್ಕರೆ ಮತ್ತು ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳು ಎತ್ತರಕ್ಕೆ ಹೋಗುವಾಗ ವಿಶೇಷ ಕಾಳಜಿ ವಹಿಸುವಂತೆ ಸೂಚಿಸಲಾಗಿದೆ. ಎನ್ನಲಾಗುತ್ತಿದೆ.
ಆರೋಗ್ಯ ಸಂಬಂಧಿತ ಮಾಹಿತಿಗಾಗಿ ಆರೋಗ್ಯ ಇಲಾಖೆಯಿಂದ ೧೦೪ ಸಹಾಯವಾಣಿ ನೀಡಲಾಗಿದೆ. ಇದಲ್ಲದೇ, ಚಾರ್ ಧಾಮ್ ಪ್ರಯಾಣದ ಸಮಯದಲ್ಲಿ ಯಾವುದೇ ಸಮಸ್ಯೆ ಉಂಟಾದರೆ ಆಂಬ್ಯುಲೆನ್ಸ್‌ಗಾಗಿ ೧೦೮ ಸಹಾಯವಾಣಿ ಸಂಖ್ಯೆಯನ್ನು ಸಹ ಸಂಪರ್ಕಿಸಬಹುದು. ಕರೋನಾ ಮುಗಿದ ಎರಡು ವರ್ಷಗಳ ನಂತರ ಚಾರ್ ಧಾಮ್ ಯಾತ್ರೆ ಆರಂಭವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಇದರಿಂದಾಗಿ ಸಾಕಷ್ಟು ಅವ್ಯವಸ್ಥೆ ಉಂಟಾಗಿದೆ ಎನ್ನಲಾಗುತ್ತಿದೆ.