ಚಾರಿತ್ರ್ಯವೇ ಬೆಲೆ ಬಾಳುವ ಆಭರಣ: ನಮೋಶಿ

ಕಲಬುರಗಿ.ಜ.11: ವ್ಯಕ್ತಿಯ ಚಾರಿತ್ರ್ಯವೇ ಅವನಿಗಿರುವ ಬೆಲೆಬಾಳುವ ಆಭರಣ. ನಮ್ಮ ದೇಶದಲ್ಲಿ ನಡತೆಗೆ ಬಹಳ ಮಹತ್ವವಿದೆ. ಏನು ಮಾಡಬೇಕು, ಏನು ಮಾಡಬಾರದು ಎಂಬ ನಿರ್ಧಾರ ತೆಗೆದುಕೊಳ್ಳುವ ಸಾಮಥ್ರ್ಯವನ್ನು ಬೆಳೆಸುವುದೇ ಮೌಲ್ಯಗಳು ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಅವರು ಹೇಳಿದರು.
ಕಲ್ಯಾಣ ಕರ್ನಾಟಕ ಶಿಕ್ಷಣ ಪ್ರತಿಷ್ಠಾನದ ಗುರೂಜಿ ಪದವಿ ಮಹಾವಿದ್ಯಾಲಯದ ವತಿಯಿಂದ ಹೊರತಂದಿರುವ ದಿನದರ್ಶಿಕೆಯನ್ನು ನಗರದ ಸುಲಫಲ ಮಠದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಶಿಕ್ಷಣದ ಉದ್ದೇಶ ಉತ್ತಮ ಜೀವನ ಕಟ್ಟಿಕೊಡುವುದಾಗಿರಬೇಕು. ಕೇವಲ ವೃತ್ತಿ, ಜೀವನೋಪಾಯಕ್ಕಾಗಿ ವಿದ್ಯೆ ಕಲಿಸದೇ, ಮಾನವೀಯ ಮೌಲ್ಯಗಳನ್ನು ಶಿಕ್ಷಣದಲ್ಲಿ ನೀಡಬೇಕು, ಉತ್ತಮ ಮಾನವೀಯ ಮೌಲ್ಯಗಳಿಂದ ಮಾತ್ರ ಉತ್ತಮ ನಾಗರೀಕರಾಗಲು ಸಾಧ್ಯ ಎಂದರು.
ಸಾರಂಗಮಠದ ಜಗದ್ಗುರು ಶ್ರೀ ಡಾ. ಸಾರಂಗಧರ್ ದೇಶಿಕೇಂದ್ರ ಮಹಾಸ್ವಾಮಿಗಳು ಸಮಾರಂಭದ ಸಾನಿಧ್ಯ ವಹಿಸಿದ್ದರು. ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯ ತಿಪ್ಪಣಪ್ಪ ಕಮಕನೂರ್, ಕಾಲೇಜಿನ ಅಧ್ಯಕ್ಷ ಕಲ್ಯಾಣಕುಮಾರ್ ಶೀಲವಂತ್, ಕಾಲೇಜಿನ ಪ್ರಿನ್ಸಿಪಾಲ್ ಡಾ. ಸದಿಯಾ ಹೆಚ್. ಎಸ್, ಪ್ರೊ. ಯಶ್ವಂತರಾಯ್ ಅಷ್ಠಗಿ, ನ್ಯಾಯವಾದಿ ಮಾಲತಿ ರೇಷ್ಮಿ, ವಿಜಯಲಕ್ಷ್ಮೀ ನೆಪೆರಿ ಕೋಡ್ಲಿ, ಶರಣರಾಜ್ ಛಪ್ಪರಬಂದಿ, ವಿಶ್ವನಾಥ್ ತೊಟ್ನಳ್ಳಿ, ಡಾ. ವೆಂಕಟೇಶ್ ಜಾಧವ್, ಮಂಜುಳಾ ಪಾಟೀಲ್ ನಿಂಬಾಳ್, ಶಿವಾನಂದ್ ಮಠಪತಿ, ಸೈಯದ್ ಹಾಜಿಪೀರ್, ಗುರುಶಾಂತ್ ಓಗಿ, ಮಲ್ಲಿಕಾರ್ಜುನ್ ಸಂಗೋಳಗಿ, ಪ್ರಭುಲಿಂಗ್ ಮೂಲಗೆ, ದೇವೇಂದ್ರಪ್ಪ ಗಣಮುಖಿ ಮುಂತಾದವರು ಉಪಸ್ಥಿತರಿದ್ದರು.