ಚಾರಿಟಿಗಾಗಿ ಕಲಾವಿದರ ಸಾಥ್

ರಾಜ್ಯದ ಮೊದಲ ನಿಲುಗಡೆರಹಿತ ’ಲಿವ್ ಫಾರ್ ಕರ್ನಾಟಕ’ ವರ್ಚುಯಲ್ ಚಾರಿಟಿ ಕಾರ್ಯಕ್ರಮಕ್ಕಾಗಿ ಅನೇಕ ನಟ ನಟಿಯರು ಕೈಜೋಡಿಸಿದ್ದಾರೆ. ಕೊರೋನ ಹಾವಳಿಯಿಂದ ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಸಲುವಾಗಿ ’ಪರ್ಪಲ್ ರಾಕ್ ಎಂಟರ್‌ಟೈನರ್ ಸಂಸ್ಥೆ ಮತ್ತು ಮಲ್ಟಿಬಾಕ್ಸ್ ಎಂಟರ್‌ಟೈನ್‌ಮೆಂಟ್’ ಸಂಸ್ಥೆ ಮುಂದಾಗಿದ್ದು ಚಿತ್ರರಂಗದ ಅನೇಕ ಕಲಾವಿದರು ಸಾಥ್ ನೀಡಿದ್ದಾರೆ.

ಕಲಾವಿದರುಗಳಾದ ವಿಜಯರಾಘವೇಂದ್ರ, ಶುಭಾಪೂಂಜಾ, ಕಾವ್ಯಶೆಟ್ಟಿ, ರಘುದೀಕ್ಷಿತ್, ದಿವ್ಯಉರುಡಗ, ಕೆ.ಎಂ.ಚೈತನ್ಯ, ಅನಿರುದ್‌ಶಾಸ್ತ್ರೀ, ಅದ್ವಿತಿಶೆಟ್ಟಿ, ಅದ್ವಿಕ್, ಬೇಡಂತೆ ಅನೇಕ ಕಲಾವಿದರು ಜೋಡಿ ನೆರವಿಗೆ ಮುಂದಾಗಿದ್ದಾರೆ

ನಟ ನಟಿಯರು ಅಲ್ಲದೆ ಸಂಗೀತ ನಿರ್ದೇಶಕರುಗಳು, ಕೊರೋನಾ ವಾರಿಯರ್ಸ್, ನಿರೂಪಕರುಗಳು, ಸ್ಟಾಂಡ್‌ಅಪ್ ಕಾಮಿಡಿಯನ್ಸ್, ಆರ್‌ಜೆಗಳು,ಗಾಯಕರು, ವ್ಲಾಗರ್ ಗಳು ಬಿಗ್‌ಬಾಸ್ ಸೆಲಬ್ರಿಟಿಗಳು ಸೇರಿದಂತೆ ಅರವತ್ತಕ್ಕೂ ಹೆಚ್ಚು ಎಲ್ಲಾ ಕ್ಷೇತ್ರದಲ್ಲಿ ಹೆಸರು ಮಾಡಿದ ಮಂದಿ‌ಪಾಲ್ಗಳ್ಳಲಿದ್ದಾರೆ.

ಕರ್ನಾಟಕದಾದ್ಯಂತ ಅಲ್ಲದೆ ವಿಶ್ವದ ಕನ್ನಡಿಗರು ಗಣ್ಯರುಗಳೊಂದಿಗೆ ಸಂವಾದ ನಡೆಸುವುದು ವಿಶೇಷ ಕಾರ್ಯಕ್ರಮ ಇದಾಗಿ್ದದೆ.ನಾಳೆ ಮಧ್ಯಾಹ್ನ ಜೂನ್-5 12ರಿಂದ ಮಧ್ಯರಾತ್ರಿ 12ರ ವರೆಗೆ ನಿಲುಗಡೆರಹಿತವಾಗಿ ಗಣ್ಯರುಗಳು ಪಾಲ್ಗೊಳ್ಳಲಿದ್ದು ಸದುದ್ದೇಶಕ್ಕಾಗಿ ಎಲ್ಲರೂ ಜೊತೆಗೂಡುತ್ತಿದ್ದಾರೆ.

ಒಳ್ಳೆಯ ಕೆಲಸ

ಕೊರೋನಾ ಸೋಂಕಿನಿಂದ ಸಂಕಷ್ಟದಲ್ಲಿರುವ ಮಂದಿಗೆ ದೇಣಿಗೆ ಸಂಗ್ರಹಿಸುವ ಸಲುವಾಗಿ ಕನ್ನಡ ಚಿತ್ರರಂಗದ ನಟ ನಟಿಯರು ಕಲಾವಿದರು ತಂತ್ರಜ್ಞರು ಒಂದೆಡೆ ಸೇರುವ ಮೂಲಕ ಕಷ್ಟದಲ್ಲಿರುವ ಜನರಿಗೆ ನೆರವಾಗಲು ಮುಂದಾಗಿದ್ದಾರೆ