ಚಾಮುಂಡೇಶ್ವರಿ ದರ್ಶನ ಪಡೆದ ಈಶ್ವರಪ್ಪ

ಮೈಸೂರು, ಡಿ.01:- ಇಂದು ಬೆಳಿಗ್ಗೆ ಮೈಸೂರಿಗೆ ಆಗಮಿಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪನವರು ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರು.
ಅವರೊಂದಿಗೆ ರಾಜ್ಯ ಒ.ಬಿ.ಸಿ.ಅಧ್ಯಕ್ಷರಾದ ನೆ.ಲ.ನರೇಂದ್ರ ಬಾಬು, ನಗರ ಒ.ಬಿ.ಸಿ.ಅಧ್ಯಕ್ಷರಾದ ಜೋಗಿ ಮಂಜು, ಚಾಮುಂಡೇಶ್ವರಿ ನಗರ ಮಂಡಲ ಅಧ್ಯಕ್ಷ ಬಿ.ಎಂ.ರಘು, ನಗರಪಾಲಿಕೆ ಸದಸ್ಯರಾದ ಕೆ.ಜೆ.ರಮೇಶ್, ರವಿತೇಜ, ಸೀಗಳ್ಳಿ ರವಿ ಹಾಗೂ ಸ್ಥಳೀಯ ಮುಖಂಡರುಗಳು ಭಾಗವಹಿಸಿದ್ದರು.