ಚಾಮುಂಡೇಶ್ವರಿ ಗೆಲುವೇ ನನ್ನ ಕೊನೆಯ ಆಸೆ: ಸಿದ್ದು

ಮೈಸೂರು: ಏ.14:- ಕ್ಷೇತ್ರದಲ್ಲಿ ಮಾವೀನಹಳ್ಳಿ ಸಿದ್ದೇಗೌಡ, ಮರಿಗೌಡರನ್ನು ನೋಡದೆ ನನ್ನನ್ನೇ ಅಭ್ಯರ್ಥಿ ಎಂದೂ ನೋಡಿ ಮತಹಾಕಿ. ರಾಜಕೀಯವಾಗಿ ನನಗೆ ಪುನರ್‍ಜನ್ಮ ನೀಡಿದ ಚಾಮುಂಡೇಶ್ವರಿ ಕ್ಷೇತ್ರವನ್ನು ಈ ಚುನಾವಣೆಯಲ್ಲಿ ಗೆಲ್ಲಲೇಬೆಕೆಂಬುದು ನನ್ನ ಕೊನೆಯ ಆಸೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿವತಿಯಿಂದ ಕೂರ್ಗಳ್ಳಿಯಲ್ಲಿ ಆಯೋಜಿಸಿದ್ದ ಚಾಮುಂಡೇಶ್ವರಿ ವಿಧಾನಭಾಕ್ಷೇತ್ರದ ಚುನಾವಣಾ ಪೂರ್ವ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ರಾಜಕೀಯ ಹಿತದೃಷ್ಟಿಯಿಂದ ಈ ಚುನಾವಣೆ ಬಹಳ ಮುಖ್ಯವಾಗಿದ್ದು, ಯಾರು ಕೂಡ ಲಘುವಾಗಿ ಪರಿಗಿಣಸಬೇಡಿ. ಪ್ರತಿಯೊಬ್ಬ ಕಾರ್ಯರ್ತನೂ ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕು. ಮಾವಿನಹಳ್ಳಿ ಸಿದ್ದೇಗೌಡ ಓರ್ವ ಅಭ್ಯರ್ಥಿ ಮಾತ್ರ ನಾನೇ ಚುನಾವಣೆಗೆ ಸ್ಪರ್ಧಿಸಿದ್ದೇನೆಂದು ಭಾವಿಸಿ ಅವರನ್ನು ಗೆಲ್ಲಿಸುವಂತೆ ತಿಳಿಸಿದರು.
ಜೆಡಿಎಸ್ ವಿರುದ್ಧ ಬಂಡಾಯ ಸಾರಿದ ಎಲ್ಲರನ್ನೂ ಕೂರಿಸಿ ಈಗಾಗಲೆ ಸಭೆ ಮಾಡಿದ್ದೇನೆ. 11 ಜನ ಮುಂಖಡರ ಒಮ್ಮತದ ಮೇರೆಗೆ ಮಾವಿನಹಳ್ಳಿ ಸಿದ್ದೇಗೌಡಗೆ ಟಿಕೆಟ್ ನೀಡಿದ್ದೇವೆ. ನಿಮ್ಮಲ್ಲಿ ಭಿನ್ನಾಭಿಪ್ರಾಯಗಳಿದ್ದರೆ ಬದಿಗೊತ್ತಿ ಸಿದ್ದೇಗೌಡರನ್ನು ನಿಮ್ಮ ಸಹೋದರ ಎಂದು ಭಾವಿಸಿ ಈ ಬಾರಿ ಒಗ್ಗಟ್ಟು ಪ್ರದರ್ಶನ ಮಾಡಬೇಕು. ಕಾಂಗ್ರೆಸ್ ಸೇರಿದ ಬಳಿಕ ಮೂಲ, ವಲಸಿಗ ಎಂಬ ಭೇದ ಬಿಟ್ಟುಬಿಡಿ. ಸಿದ್ದೇಗೌಡ, ಮರಿಗೌಡರ ಮುಖ ನೋಡದೆ ಸಿದ್ದರಾಮಯ್ಯನ ಮುಖನೋಡಿ ಕಾಂಗ್ರೆಸ್ ಪಕ್ಷ ಗೆಲುವಿಗಾಗಿ ದುಡಿಯಬೇಕು ಎಂದು ಮನವಿ ಮಾಡಿದರು.
ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸಾಕಷ್ಟು ಅಭಿವೃದ್ಧಿ ಮಾಡಿದೆ. ಅಲ್ಲದೇ ಕಳೆದ ಬಾರಿ ಇಲ್ಲಿಂದಲೇ ಸ್ಪರ್ಧೆ ಮಾಡಿ ರಾಜಕೀಯ ನಿವೃತ್ತಿ ಪಡೆಯಬೇಕು ಎಂದಿದ್ದೆ, ಆದರೂ ಕಳೆದ ಚುನಾವಣೆಯಲ್ಲಿ ನನ್ನನು ಸೋಲಿಸಿ ಜಿ.ಟಿ.ದೇವೆಗೌಡರನ್ನು ಗೆಲ್ಲಿಸಿದರು. ಬಿಜೆಪಿ ಮತ್ತು ಜೆಡಿಎಸ್ ಎರಡು ಪಕ್ಷಗಳೂ ನನ್ನನ್ನೇ ಟಾರ್ಗೆಟ್ ಮಾಡುತ್ತಿವೆ. ಸಿದ್ದರಾಮಯ್ಯನನ್ನು ಮುಗಿಸಬೇಕು ಎಂದು ಬಿಜೆಪಿ ಅವರು ಹೇಳುತ್ತಾರೆ. ಆದರೆ, ರಾಜ್ಯದ ಜನರ ಆಶಿರ್ವಾದ ಇರುವವೆರಗೂ ಯಾರು ಏನು ಮಾಡಲು ಸಾಧ್ಯವಿಲ್ಲ ಎಂದರು.
ಮುಂದಿನ ಚುನಾವಣೆಯಲ್ಲಿ ನೂರಕ್ಕೆ ನೂರು ನಾವು ಅದಿಕಾರಕ್ಕೆ ಬರುತ್ತೇವೆ. 3 ವರ್ಷಕ್ಕೂ ಅಧಿಕ ಕಾಲ ಅಧಿಕಾರ ನಡೆಸಿರುವ ಬಿಜೆಪಿ ಅತ್ಯಂತ ಕೆಟ್ಟ ಆಡಳಿತ ನೀಡಿದೆ. ಪ್ರತಿವರ್ಷ 56 ಸಾವಿರ ಕೋಟಿ ಸಾಲ ಮಾಡಿ ಮೂರು ವರ್ಷದಲ್ಲಿ 3.22 ಲಕ್ಷ ಕೋಟಿಗೂ ಅ„ಕ ಸಾಲ ಮಾಡಿದೆ. ಇದಕ್ಕಾಗಿ ಪ್ರತಿ ವರ್ಷ ಸುಮಾರು 70 ಸಾವಿರ ಕೋಟಿಯಷ್ಟು ಅಸಲು ಬಡ್ಡಿ ಪಾವತಿ ಮಾಡುತ್ತಿದೆ ಇದೆ ಬಿಜೆಪಿಯ ದೊಡ್ಡ ಸಾಧನೆ ಎಂದು ವ್ಯಂಗ್ಯವಾಡಿದರು.
ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ ಮಾತನಾಡಿ, ಯಾವುದೇ ಬೇಡಿಕೆ ಇಲ್ಲದೇ ಕ್ಷೇತ್ರ ಹಾಲಿ ಶಾಸಕರನ್ನು ಸೋಲಿಸುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ. 2023 ಚುನಾವಣೆಯಲ್ಲಿ ಚಾಮುಂಡೇಶ್ವರಿಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಗೆಲುವನ್ನು ಕಣ್ತುಂಬಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲಿ ಕೆಸಲ ಮಾಡುತ್ತೇವೆ. ಒಬ್ಬರ ರೈತ ಮಗನಿಗೆ ಟಿಕೇಟ್ ಕೊಟ್ಟರುವುದು ಸಂತೋಷವಾಗಿದೆ. ಟಿಕೆಟ್ ಸಿಕ್ಕಿರುವುದು ನನಗೆ ಆದರೂ ಗೆಲುವು ಮಾತ್ರ ಸಿದ್ದರಾಮಯ್ಯ ಅವರದ್ದಾಗಿರುತ್ತದೆ. ಈ ಸಂತೋಷ ಬೆಲೆ ಕಟ್ಡಲು ಸಾಧ್ಯವಿಲ್ಲ. 2018 ಸಿದ್ದರಾಮಯ್ಯ ಸೋಲನ್ನು 2023 ಗೆಲ್ಲುವ ಮೂಲಕ ಅವರಿಗೆ ಗೌರವ ತೊಂದು ಕೊಡುತ್ತೇವೆ ಎಂದರು.
ಜಿಟಿಡಿ ಅವಕಾಶವಾದಿ: ಸಿದ್ದು
ಜಿ.ಟಿ.ದೇವೇಗೌಡ ಕಾಂಗ್ರೆಸ್ ಸೇರಲು ಮುಂದಾಗಿದ್ಧ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾತುಕತೆ ನಡೆಸಿದ್ದೇವು. ನನ್ನ ಜೊತೆ ಕೆಲಕಾಲ ಕೆಲಸವನ್ನು ಮಾಡಿದ್ದನು. ಆದರೆ, ಮತ್ತೆ ದೂರಾಗಿ ಅಂತರ ಕಾಯ್ದುಕೊಂಡ,
ಈಗ ಮತ್ತೆ ಜೆಡಿಎಸ್ ಅಭ್ಯರ್ಥಿ ಆಗಿದ್ದಾನೆ. ಜೆಡಿಎಸ್ ಯಾವುದೇ ಕಾರಣಕ್ಕೂ ಸ್ವಂತ ಬಲದಿಂದ ಅಧಿಕಾರಕ್ಕೆ ಬರುವುದಿಲ್ಲ. ಜೆಡಿಎಸ್ ನವರು ನನ್ನನ್ನು ಹೊರ ಹಾಕಿದರು. ಆಗ ಜಿ.ಟಿ.ದೇವೇಗೌಡ ಮಂತ್ರಿಯಾಗುವ ಆಸೆಯಿಂದ ಅಲ್ಲೇ ಉಳಿದುಕೊಂಡ. ಹುಣಸೂರಿನಲ್ಲಿ ಇವರನ್ನು ಗೆಲ್ಲಿಸಿದ್ಧು ಯಾರೆಂದು ಹೇಳಲಿ. ಹೀಗೆ ಜಿ.ಟಿ.ದೇವೇಗೌಡ ಅವಕಾಶವಾದಿ ರಾಜಕಾರಣಿ ಎಂದು ಸಿದ್ದರಾಮಯ್ಯ ಕುಟುಕಿದರು.
ಇದೇ ವೇಳೆ ನೂರಾರು ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು. ವಿಧಾನ ಪರಿಷತ್ ಸದಸ್ಯ ಡಾ.ಡಿ ತಿಮ್ಮಯ್ಯ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕೆ.ಮರಿಗೌಡ, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ್, ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕೆಪಿಸಿಸಿ ಸದಸ್ಯ ನರಸಯ್ಯ, ಜಿಪಂ ಮಾಜಿ ಸದಸ್ಯರಾದ ಬೀರಿಹುಂಡಿ ಬಸವಣ್ಣ, ಮಾದೇಗೌಡ, ಅರುಣ್ ಕುಮಾರ್, ರಾಕೇಶ್ ಪಾಪಣ್ಣ ಮುಖಂಡರಾದ ಶಿವಣ್ಣ, ಕೃಷ್ಣ ಕುಮಾರ್‍ಸಾಗರ್, ಜೆ.ಆನಂದ್, ನರೇಂದ್ರ, ಕಡಕೋಳ ನಾಗರಾಜು, ಟಿ.ಬಿ ಲತಾಚಿಕ್ಕಣ್ಣ, ಮೋದಾಮಣಿ, ಸುಶೀಲಾ ನಂಜಪ್ಪ ಇನ್ನಿತರರು ಇದ್ದರು.