ಚಾಮುಂಡೇಶ್ವರಿಯ ದರ್ಶನ ಪಡೆದ ಸಚಿವ ವಿ.ಸೋಮಣ್ಣ

ಮೈಸೂರು, ನ.13: ವಸತಿ ಸಚಿವ ವಿ.ಸೋಮಣ್ಣ ಇಂದು ಮೈಸೂರು ಜಿಲ್ಲಾ ಪ್ರವಾಸದಲ್ಲಿದ್ದು ಬೆಳ್ಳಂಬೆಳಿಗ್ಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರು.
ಸಚಿವರು ಆಗಮಿಸುತ್ತಿದ್ದಂತೆ ದೇವಸ್ಥಾನದ ಅರ್ಚಕರು ತಾಯಿ ಚಾಮುಂಡೇಶ್ವರಿಗೆ ಆರತಿಗೈದು ಸಚಿವ ಸೋಮಣ್ಣ ಅವರಿಗೆ ಹೂವಿನ ಪ್ರಸಾದ್ ನೀಡಿ ಹಣೆಗೆ ತಿಲಕವಿರಿಸಿದರು. ಪತ್ನಿ ಜೊತೆ ಚಾಮುಂಡಿ ತಾಯಿ ದರ್ಶನ ಪಡೆದ ಸಚಿವರಿಗೆ ಸಾಥ್ ಸ್ಥಳೀಯ ಶಾಸಕ ನಾಗೇಂದ್ರ ಮತ್ತು ಮುಖಂಡರು ಸಾಥ್ ನೀಡಿದರು.
ಕಳೆದ ಹಲವು ದಿನಗಳಿಂದ ಬೆಟ್ಟಕ್ಕೆ ಭೇಟಿ ನೀಡಿರಲಿಲ್ಲ. ಇವತ್ತು ತಾಯಿ ದರ್ಶನಕ್ಕೆ ಬಂದಿದ್ದೇನೆ. ಎಷ್ಟು ಬಾರಿ ತಾಯಿ ದರ್ಶನಕ್ಕೆ ಬಂದರೂ ಸಾಲದು. ನಮ್ಮ ಕುಟುಂಬಸ್ಥರು ತಿಂಗಳಿಗೊಬ್ಬರು ತಾಯಿ ದರ್ಶನ ಮಾಡುತ್ತಲೇ ಇರುತ್ತೇವೆ ಎಂದರು.