ಚಾಮುಂಡಿಬೆಟ್ಟದ ರಸ್ತೆಯಲ್ಲಿ ಮತ್ತೊಂದು ಬಿರುಕು

ಮೈಸೂರು,ಜೂ.23:- ಮೈಸೂರಿನ ಚಾಮುಂಡಿಬೆಟ್ಟದಲ್ಲಿರುವ ನಂದಿಯ ಬಳಿಗೆ ಸಾಗುವ ರಸ್ತೆಯಲ್ಲಿ ಮತ್ತೊಂದು ಬಿರುಕು ಕಾಣಿಸಿಕೊಂಡಿದೆ.
ಕಳೆದ ಅಕ್ಟೋಬರ್ ನಲ್ಲಿ ನಂದಿ ರಸ್ತೆಯಲ್ಲಿ ಬಿರುಕುಕಾಣಿಸಿಕೊಂಡಿತ್ತು. ದಿನಕಳೆದಂತೆ ಬಿರುಕು ದೊಡ್ಡದಾಗಿ ಇಡೀ ರಸ್ತೆಯೇ ಕುಸಿತಗೊಂಡಿತ್ತು. ಪರಿಣಾಮ ನಂದಿಗೆ ತೆರಳುವ ರಸ್ತೆಯನ್ನು ಬಂದ್ ಮಾಡಲಾಗಿತ್ತು. ಆ ಬಳಿಕವೂ ನಂದಿಗೆ ತೆರಳುವ ರಸ್ತೆ ಹಲವು ಕಡೆ ಕುಸಿದಿದೆ. ಈ ಬಾರಿ ಬೇಸಿಗೆ ಕಾಲದಲ್ಲಿ ದುರಸ್ತಿ ಕಾಮಗಾರಿ ನಡೆಸಬೇಕಿತ್ತು. ಆದರೆ ಮುಂಗಾರು ಮಳೆ ಹೆಚ್ಚಾದ ಕಾರಣದಿಂದ ಕಾಮಗಾರಿ ನಡೆಸಲಿಲ್ಲ. ಮಳೆಗಾಲ ಮುಗಿಯುವವರೆಗೆ ರಸ್ತೆ ದುರಸ್ತಿ ನಡೆಸಲು ಸಾಧ್ಯವಿಲ್ಲ. ಇದರ ನಡುವೆಯೇ ರಸ್ತೆ ಕುಸಿದಿದ್ದ ಸ್ಥಳದ ಸಮೀಪ ಹೊಸದಾಗಿ ಬಿರುಕು ಕಾಣಿಸಿಕೊಂಡಿದೆ. ಬಿರುಕು ದೊಡ್ಡದಾಗಿ ಮತ್ತೆ ರಸ್ತೆ ಸಂಪೂರ್ಣ ಕುಸಿಯುವ ಸಾಧ್ಯತೆ ಇದ್ದು, ಕೂಡಲೇ ಸಂಬಂಧಪಟ್ಟವರು ಈ ಕುರಿತುಗಮನ ಹರಿಸಬೇಕಿದೆ.