ಚಾಮುಂಡಿಬೆಟ್ಟದ ನಂದಿಗೆ ಮಹಾಭಿಷೇಕ

ಮೈಸೂರು, ನ.೨೧:ಚಾಮುಂಡಿಬೆಟ್ಟದ ಏಕಶಿಲಾ ನಂದಿ ವಿಗ್ರಹಕ್ಕೆ ಬೆಟ್ಟದ ಬಳಗ ಚಾರಿಟೆಬಲ್ ಟ್ರಸ್ಟ್ ಸದಸ್ಯರು ಭಾನುವಾರ ಮಹಾಭಿಷೇಕ ನೆರವೇರಿಸಿದರು.
ಹೊಸಮಠದ ಚಿದಾನಂದ ಸ್ವಾಮೀಜಿ ಹಾಗೂ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಮೈಸೂರಿನ ಶಾಖಾ ಮಠದ ಸೋಮನಾಥಾನಂದ ಸ್ವಾಮೀಜಿ ಮಹಾಭಿಷೇಕ ನೆರವೇರಿಸಿದರು.
ಇದು ಟ್ರಸ್ಟ್ ನಡೆಸುತ್ತಿರುವ ೧೬ ನೇ ವರ್ಷದ ಮಹಾಭಿಷೇಕವಾಗಿದೆ. ಹಾಲು, ಜೇನುತುಪ್ಪ, ಚಂದನ ಸೇರಿದಂತೆ ವಿವಿಧ ಬಗೆಯ ಅಭಿಷೇಕಗಳು ನಡೆದವು.
ಕೋವಿಡ್‌ಗೂ ಮುಂಚೆ ವಿಗ್ರಹಕ್ಕೆ ಅಟ್ಟಣಿಗೆ ನಿರ್ಮಿಸಿ ವಿಜೃಂಭಣೆಯಿಂದ ಮಹಾಭಿಷೇಕ ನೆರವೇರಿಸಲಾಗುತ್ತಿತ್ತು