ಚಾಮುಂಡಿಬೆಟ್ಟದಲ್ಲಿ ಮತ್ತೆ ಸಪ್ತಪದಿ ಕಾರ್ಯಕ್ರಮ

ಮೈಸೂರು:ಮಾ:26:ಮುಂದಿನ ದಿನಗಳಲ್ಲಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಮತ್ತೆ ಸಪ್ತಪದಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ ಎಂದು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.
ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರು. ಇನ್ನು ಸಪ್ತಪದಿ ವಿವಾಹಗಳ ಕಾರ್ಯಕ್ರಮ ಕುರಿತು ಮಾತನಾಡಿದ ಅವರು, ದೇವಸ್ಥಾನಗಳಲ್ಲಿ ಮಾಡುವ ಸಪ್ತಪದಿ ವಿವಾಹಗಳು ವ್ಯವಸ್ಥಿತವಾಗಿ ಆಗಬೇಕೆಂಬುದು ನಮ್ಮ ಕಲ್ಪನೆ. ಚಾಮುಂಡೇಶ್ವರಿ ದೇವಸ್ಥಾನದಲ್ಲಿ 14, ನಂಜನಗೂಡಿನಲ್ಲಿ 17 ಜೋಡಿಗಳ ವಿವಾಹ ನಡೆದಿದೆ. ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಏಪ್ರಿಲ್ 22ನೇ ತಾರೀಖಿನಂದು ದಿನಾಂಕ ನಿಗದಿ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಮತ್ತೆ ಸಪ್ತಪದಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.
ಹಾಗೆಯೇ ತಲಕಾಡಿನಲ್ಲಿಯೂ ಸೇರಿದಂತೆ ರಾಜ್ಯದ 100 ದೇವಸ್ಥಾನಗಳಲ್ಲಿ ಸಪ್ತಪದಿ ಸಾಮೂ ಹಿಕ ವಿವಾಹವಿವಾಹಗಳು ನಡೆಯಲಿವೆ. ಕೊರೋನಾ ಕಾರಣದಿಂದ ಸೀಮಿತಗೊಳಿಸಿ, ಬೇರೆ ಬೇರೆ ದಿನಾಂಕಗಳನ್ನು ನಿಗದಿಪಡಿಸಿ, ಪ್ರತಿ ತಿಂಗಳೂ ಈ ಕಾರ್ಯಕ್ರಮ ಮಾಡಲಾಗುವುದು. ಸ್ಥಳೀಯವಾಗಿ ಆಯಾ ಸಂಪ್ರದಾಯಗಳಂತೆ ದಿನಾಂಕ ನಿಗದಿಪಡಿಸುವಂತೆ ಮನವಿ ಬಂದಲ್ಲಿ ಅದನ್ನೂ ಕೂಡ ಪರಿಗಣಿಸಲಾಗುವುದು ಎಂದು ಸಚಿವ ಕೊಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.
ಮಾಂಗಲ್ಯಕ್ಕೆ ಟೆಂಡರ್ ಕರೆಯಲು ಸಮಸ್ಯೆಗಳಾದವು. ಆದ್ದರಿಂದ ಕಾವೇರಿ ಎಂಪೆÇೀರಿಯಂ ಮೂಲಕ ರಿಯಾಯಿತಿ ದರದಲ್ಲಿ ಚಿನ್ನ ಖರೀದಿಸಲು ಸೂಚನೆ ನೀಡಲಾಗಿದೆ. ಒಟ್ಟಾರೆಯಾಗಿ ಸಾಮಾನ್ಯ ಜನರಿಗೆ ಸಪ್ತಪದಿ ಕಾರ್ಯಕ್ರಮದಿಂದ ಅನುಕೂಲವಾಗಲಿದೆ ಜೊತೆಗೆ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.