ಚಾಮರಾಜನಗರ ಹುಲಿಗಳ ಸಂರಕ್ಷಣೆಯಲ್ಲಿ ವಿಶ್ವ ವಿಖ್ಯಾತಿಯನ್ನು ಪಡೆಯಲಿ: ಸುರೇಶ್‍ ಋಗ್ವೇದಿ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.31:- ಹುಲಿಗಳ ನಾಡುಎಂದೇ ಪ್ರಸಿದ್ಧವಾಗಿರುವ ಚಾಮರಾಜನಗರ ಹುಲಿಗಳ ಸಂರಕ್ಷಣೆಯಲ್ಲಿ ವಿಶ್ವ ವಿಖ್ಯಾತಿಯನ್ನು ಪಡೆಯಲಿ. ಚಾಮರಾಜನಗರ ಅರಣ್ಯಗಳ ಪ್ರದೇಶವಾಗಿದ್ದು ಹುಲಿಗಳನ್ನು ಸಂರಕ್ಷಿಸುವ ಮೂಲಕ ವಿಶ್ವ ಪ್ರಸಿದ್ಧಿ ಪಡೆಯುವಂತಾಗಲಿ ಎಂದುರಾಷ್ಟ್ರಯುವ ಪ್ರಶಸ್ತಿ ಪುರಸ್ಕøತ ಸುರೇಶ್‍ಎನ್‍ಋಗ್ವೇದಿ ತಿಳಿಸಿದರು.
ಅವರುಜೈ ಹಿಂದ್ ಪ್ರತಿμÁ್ಠನ ಮತ್ತುಋಗ್ವೇದಿ ಯೂತ್‍ಕ್ಲಬ್ ವತಿಯಿಂದಜೈ ಹಿಂದ್‍ಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಹುಲಿಗಳ ದಿನ ಕಾರ್ಯಕ್ರಮದಲ್ಲಿ ವಿವಿಧಕನ್ನಡ ಪತ್ರಿಕೆಗಳಲ್ಲಿ ಪ್ರಕಟಗೊಂಡ ಹುಲಿಗಳ ಲೇಖನಗಳ ಓದುವಿಕೆ ಮೂಲಕ ಉದ್ಘಾಟಿಸಿ ಅರಣ್ಯವನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರಲ್ಲೂಉಂಟಾಗಬೇಕು. ಜುಲೈ 29 ಹುಲಿಗಳ ದಿನವಾಗಿದೆ.
50 ವರ್ಷಗಳ ಹಿಂದೆ ಭಾರತದಲ್ಲಿ ಹುಲಿಗಳ ಸಂರಕ್ಷಣೆಗಾಗಿ ರೂಪಿಸಿದ ಯೋಜನೆ ಸರ್ಕಾರ ಹಾಗೂ ಸಾರ್ವಜನಿಕರು ಹಾಗೂ ಅರಣ್ಯಇಲಾಖೆಯ ವಿಶೇಷಜಾಗೃತಿಯ ಹಿನ್ನೆಲೆಯಲ್ಲಿಇಂದು ಹುಲಿಗಳ ಸಂಖ್ಯೆಗಣನೆಯ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಸಮೀಕ್ಷೆಯ ಪ್ರಕಾರ 4000ಕ್ಕೂ ಹೆಚ್ಚು ಹುಲಿಗಳು ಇರುವುದುಅಲ್ಲದೆಚಾಮರಾಜನಗರದ ಬಂಡೀಪುರ,ಬಿಳಿಗಿರಿರಂಗನ ಬೆಟ್ಟ,ಮಲೆಯ ಮಹದೇಶ್ವರ ಬೆಟ್ಟ ಹುಲಿಯೋಜನೆಗಳು ವಿಶ್ವ ಪ್ರಸಿದ್ಧವಾಗಿರುವುದು ಮತ್ತಷ್ಟು ಹೆಮ್ಮೆಯಾಗಿದೆ.
ಬಂಡಿಪುರ ಹುಲಿ ಯೋಜನೆಯ ಮೂಲಕ ವಿಶ್ವ ವಿಖ್ಯಾತಿಯಾಗಿರುವಚಾಮರಾಜನಗರಜಿಲ್ಲೆ ವಿಶೇಷ ಪ್ರವಾಸೋದ್ಯಮಕೇಂದ್ರವಾಗಲಿ. ಆ ಮೂಲಕ ಜಿಲ್ಲೆ ಉದ್ಯಮಗಳನ್ನು ಸ್ಥಾಪನೆ ಮಾಡುವ ಮೂಲಕ ಉದ್ಯೋಗ ಸೃಷ್ಟಿಯಾಗಲಿ. ಕೇಂದ್ರ ಸರ್ಕಾರಅರಣ್ಯದ ಸಂರಕ್ಷಣೆಗೆ ಮತ್ತಷ್ಟು ವಿಶೇಷ ನೀತಿ ನಿಯಮಗಳನ್ನು ಜಾರಿಗೆತಂದು ಪ್ರಕೃತಿಯನ್ನು ಉಳಿಸುವ ಕೆಲಸ ಮಾಡಲಿ ಎಂದು ತಿಳಿಸುತ್ತಾ ಹುಲಿಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿರುವ ಸರ್ಕಾರಕ್ಕೆ ಸಾರ್ವಜನಿಕರಿಗೆ ವಿಶೇಷವಾಗಿಅರಣ್ಯ ಇಲಾಖೆಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಜೈಹಿಂದ್ ಪ್ರತಿμÁ್ಠನದ ನಿರ್ದೇಶಕ ಶ್ರೀನಿವಾಸ್ ಮಾತನಾಡಿಅರಣ್ಯ ಸಂರಕ್ಷಣೆ ಮತ್ತು ಪ್ರಾಣಿಗಳ ಬಗ್ಗೆ ಅರಿವು ಮೂಡಿಸುವಕಾರ್ಯ ಮಾಡಬೇಕು. ಕಾಡಂಚಿನ ಪ್ರದೇಶಗಳಲ್ಲಿ ಪೂರ್ಣ ವಿಶ್ವಾಸವನ್ನುಜನರಲ್ಲಿತುಂಬಿ ಕಾಡನ್ನು ಸಂರಕ್ಷಿಸುವ ದಿಕ್ಕಿನಲ್ಲಿಅವರ ಸಹಕಾರ ಪಡೆಯಬೇಕು.
ಅರಣ್ಯ ಇಲಾಖೆ ಹಾಗೂ ಪೆÇಲೀಸ್ ಇಲಾಖೆಗೆ ವಿಶೇಷ ಧನ್ಯವಾದಗಳು ಅರ್ಪಿಸೋಣಎಂದರು.
ಝಾನ್ಸಿ ಮಕ್ಕಳ ಪರಿಷತ್ತಿನ ಶ್ರಾವ್ಯಎಸ್‍ಋಗ್ವೇದಿ, ರ, ಕಿಶೋರ್, ಜೈ ಹಿಂದ್ ಪ್ರತಿμÁ್ಠನದರವಿ, ಶ್ರೀನಿವಾಸ್, ಸುಹಾಸ್ ಭಾರದ್ವಾಜ್, ಮಹದೇವ ಮುಂತಾದವರು ಉಪಸ್ಥಿತರಿದ್ದರು.