ಚಾಮರಾಜನಗರ ಪ್ರಕರಣ: ತನಿಖೆಗೆ ಒತ್ತಾಯ

ಮೈಸೂರು,ಮೇ.4: ಚಾಮರಾಜನಗರ ಕೋವಿಡ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷ್ಠಾವಂತ,ಭ್ರಷ್ಟಾಚಾರವಿಲ್ಲದ ನ್ಯಾಯಮೂರ್ತಿಯ ಕೈನಲ್ಲಿ ತನಿಖೆಯನ್ನು ಮಾಡಿಸಿ, ನೊಂದ ಜೀವಕ್ಕೆ ನ್ಯಾಯ ಕೊಡಿಸಿ ಎಂದು ಶಾಸಕ ಸಾ.ರಾ.ಮಹೇಶ್ ಒತ್ತಾಯಿಸಿದರು.
ಮೈಸೂರಿನ ತಮ್ಮ ಕಛೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಜಿಲ್ಲಾಧಿಕಾರಿಗಳು ದಾಖಲಾತಿಯನ್ನು ಯಾಕೆ ಕೊಡಲಿಲ್ಲ 6ತಿಂಗಳಾದರೂ ಯಾಕೆ ಕೊಡಲಿಲ್ಲ. ಕಮಿಟಿಗಳು ಬಂದರೆ ಹೋಗಿ ಭೇಟಿ ಮಾಡಲ್ಲ, ಸರ್ಕಾರದ ಒಂದು ಪಾರ್ಟಿ ಅಧ್ಯಕ್ಷರು ಬರುತ್ತಾರೆ ಅವರನ್ನು 9.30ರಿಂದ 10ವರೆಗೋಗಿ ಭೇಟಿ ಮಾಡುತ್ತಾರೆ. ದಾಖಲಾತಿ ಕೊಡಿ ಎಂದರೆ ಕೊಡಲ್ಲ, ಯಾವ ದಿನಾಂಕ ಯಾರನ್ನು ಭೇಟಿ ಮಾಡಿದ್ದರು. ಅದೂ ಸರ್ಕಾರಿ ಕಾರಿನಲ್ಲಿ, ಇದು ನಮ್ಮ ದುರ್ದೈವ, ದುರಂತ.
ಪ್ರತಿದಿನ ಖರ್ಚಾಗುವಂತಹ ಹಣವನ್ನು ಸಾರ್ವಜನಿಕರ ಗಮನಕ್ಕೆ ತನ್ನಿ, ನಿಮ್ಮ ಜಿಲ್ಲಾಡಳಿತ ಪ್ರಾಮಾಣಿಕವಾಗಿದ್ದರೆ ಪ್ರತಿದಿನ ಮಾಹಿತಿ ಯಾಕೆ ನೀಡಿಲ್ಲ, ನಾವ್ಯಾಕೆ ಆಯೋಗದ ಬಾಗಿಲಿಗೆ ಹೋಗಬೇಕಾಗಿತ್ತು, ಇದೆಲ್ಲವನ್ನೂ ಗಮನಿಸಿ, ಐಎಎಸ್ ಆಫೀಸ್‍ರಿಂದ ಸಿಎಟಿ ಯಂತಹುದೇ ಓರ್ವ ನ್ಯಾಯಮೂರ್ತಿ ಓರ್ವ ನಿವೃತ್ತ ಐಎಎಸ್ ಆಫೀಸರ್ ಅಂತಹವರಿಗೆ ಯಾವ ಯಾವ ಒತ್ತಡ ತಂದು ಇನ್ನೂ ಇಲ್ಲಿ ಉಳಿದುಕೊಂಡಿದ್ದೀರೆನ್ನುವುದು ಗೊತ್ತಿದೆ. ಎಲ್ಲದಕ್ಕೂ ಮಾಹಿತಿ ಕೊಡುತ್ತೇನೆ ಎಂದು ಜಿಲ್ಲಾಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದರು.
ದಾಖಲಾತಿ ಸಹಿತ ಅಡ್ವೋಕೇಟ್ ಜನರಲ್ ನ್ನು ಯಾರ ಜೊತೆ ಮಾತನಾಡಿಸಿದ್ದೀರಿ, ಅವರನ್ನು ಎಷ್ಟು ದಿನ ರಜೆ ಹಾಕಿಸಿದ್ದೀರಿ, ಎಲ್ಲವನ್ನೂ ದಾಖಲೆ ಸಹಿತ ನೀಡುತ್ತೇನೆ. ಆದರೆ ಈಗ ಕೋವಿಡ್ ಸಂದರ್ಭ. ನಮಗೆ ಜನ ಉಳಿಯಬೇಕು.
ಇದನ್ನು ಅರ್ಥ ಮಾಡಿಕೊಳ್ಳಿ. ನಮ್ಮ ಮೈಸೂರು ನಗರದಲ್ಲಿ ಎಷ್ಟೋ ಅಧಿಕಾರಿಗಳು ಬರ್ತಾರೆ, ಎಷ್ಟು ಅಧಿಕಾರಿಗಳು ಹೋಗ್ತಾರೆ ನಾವದರ ಸುದ್ದಿ ಮಾತಾಡಲ್ಲ, ಆದರೆ ಯಾವಾಗ ಈ ರೀತಿ ಉದ್ಧಟತನದ ಅಧಿಕಾರಿ ಅಂತ ಗೊತ್ತಾಯಿತೋ ಆಗ ಇವರಿಂದ ಮೈಸೂರು ನಗರದಲ್ಲಿ ನ್ಯಾಯ ಸಿಗಲ್ಲ ಅಂತ ಹೇಳಿ ಅರಿತುಕೊಂಡೆ, ಜಿಲ್ಲಾಧಿಕಾರಿಗಳೇ ಏನಾದರೂ 150 ಸಿಲಿಂಡರ್ ಮೇಲೆ ಕೊಡಬೇಡ ಅಂತ ಹೇಳಿ ಕಂಟ್ರೋಲರ್ ಗೆ ಹೇಳಿದ್ದರೆ ಇವರ ಮೇಲೆ 302ಕೇಸ್ ಬುಕ್ ಮಾಡಬೇಕು. ನಿಮಗೆ ಅದಕ್ಕೂ ಆಗಲ್ಲ ಅಂತ ಆದರೆ 306 ಬುಕ್ ಮಾಡಬೇಕು.
ದಯವಿಟ್ಟು ಎಚ್ಚೆತ್ತುಕೊಳ್ಳಿ. ಇಲ್ಲಿರುವ ಮಾಹಿತಿ ನಿಮಗೆ ಕೊಟ್ಟಿರತಕ್ಕಂತದ್ದು, ನಾನ್ಯಾವುದೂ ಉತ್ಪ್ರೇಕ್ಷೆಗೆ ಕೊಡುತ್ತಿಲ್ಲ. ಅದಿಕ್ಕೆ ನಿಮಗೆ ಎಲ್ಲ ದಾಖಲಾತಿ ಕೊಡುತ್ತಿದ್ದೇನೆ. ಮೊನ್ನೆ ರಾತ್ರಿ ಕೇಳಿದೆ ಒಂದು ಕೋಟಿ ಬಿಲ್ ಆಗತ್ತಂತೆ, ಎಲ್ಲಿ ಹೋಗುತ್ತಿದೆ. ಯಾರಿಗೆ ಕೊಡುತ್ತಿದ್ದೀರಿ ಮೈಸೂರು ಜಿಲ್ಲೆಯಲ್ಲಿ ಬಹಿರಂಗಪಡಿಸಿ, ಪ್ರತಿ ದಿವಸ ಯಾವು ಯಾವುದಕ್ಕೆ ಎಷ್ಟೆಷ್ಟು ಖರ್ಚಾಗುತ್ತಿದೆ. ಸಾರ್ವಜನಿಕರಿಗೆ ಮಾಹಿತಿ ಕೊಡಿ, ನೀವೆಲ್ಲ ಶುದ್ಧ ಹಸ್ತ ಇದ್ದಿದ್ದರೆ ಇದ್ಯಾಕೆ ಬೇಕಿತ್ತು. ನಿಮ್ಮನ್ನು ಮಾಹಿತಿ ಕೊಟ್ಟಿಲ್ಲ ಅಂತ ನಾವು ಆಯೋಗದ ಮುಂದೆ ಯಾಕೆ ಹೇಳ್ತಿದ್ವಿ? ಈಗ ಕೋವಿಡ್ ಬ್ಯುಸಿನಾ, ಹತ್ತು ತಿಂಗಳಲ್ಲೇ ಕೇಳಿದ್ವಿ, ಈಗ ಕೇಳಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.
ಉಸ್ತುವಾರಿ ಮಾಡುತ್ತಿರುವವರು ಗಮನಿಸಿ, ಸಾರ್ವಜನಿಕರ ಹಣ ಇದು, ಪ್ರತಿಯೊಂದು ಮಾಹಿತಿಯನ್ನು ದಾಖಲೆ ಸಮೇತ ಕೊಟ್ಟಿದ್ದೇನೆ. ನಿಮ್ಮ ಆಸ್ಪತ್ರೆಗೆ ಸರಬರಾಜು ಮಾಡಿಕೊಂಡು ಆಮೇಲೆ ಕೊಟ್ಟಿದ್ದರೆ ಸರಿ, ಅಗ್ರಿಮೆಂಟ್ ಪ್ರಕಾರ ಇದೆ.
ಸದರ್ನ್ ಗ್ಯಾಸ್ ಏಜೆನ್ಸಿ ಮತ್ತು ಚಾಮರಾಜನಗರ ಜಿಲ್ಲಾಸ್ಪತ್ರೆದು, ಅಲ್ಲೇ ಗೊತ್ತಾಗತ್ತೆ ನೀವು ಡ್ರಗ್ ಕಂಟ್ರೋಲ್ ಮೂಲಕ ಮಂಡ್ಯ ಮತ್ತು ಚಾಮರಾಜನಗರಕ್ಕೆ ಕೊಡಬಾರದು ಅಂತ ಕಂಟ್ರೋಲ್ ಮಾಡಿದ್ದೀರಿ, ಯಾವಾಗ ಸೀರಿಯಸ್ ಅಂತ ಗೊತ್ತಾಯ್ತೋ, ಆಗ ನೀವು ಡ್ರಗ್ ಕಂಟ್ರೋಲರ್ ಗೆ ಹೇಳಿದ್ರಿ, ಡ್ರಗ್ ಕಂಟ್ರೋಲರ್ ಸದರ್ನ್ ಗ್ಯಾಸ್ ಏಜೆನ್ಸಿಗೆ ಹೇಳಿದ. ಮೇಲ್ನೋಟಕ್ಕೆ ಗೊತ್ತಾಗ್ತಾ ಇಲ್ವಾ? ಅಗ್ರಿಮೆಂಟ್ ಪ್ರಕಾರ 300ರಿಂದ 350 ಸಿಲಿಂಡರ್ ನ್ನು ಪ್ರತಿದಿನ ಕೊಡಬೇಕು. ಆರು ದಿವಸದಿಂದ 691 ಮಾತ್ರ ಕೊಟ್ಟಿರೋದು, ಬೇಕಾಗಿರತಕ್ಕಂತದ್ದು ಪ್ರತಿದಿನ 300ರಿಂದ 350, ಅಲ್ಲಿಗೆ 250 ಶಾರ್ಟೇಜ್, ಯಾರ ಒತ್ತಡದ ಮೇಲೆ ಕಡಿಮೆ ಮಾಡಿದ್ರಿ ಸ್ಟಾಕ್ ಇಲ್ವಾ? ಅದೇ ಸದರ್ನ್ ಏಜೆನ್ಸಿ ರಾತ್ರಿ 2ಗಂಟೆಯಲ್ಲಿ 200 ಹೇಗೆ ಕಳಿಸಿತು? ಅಲ್ಲಿಯವರೆಗೆ ನಿಮಗೆ ಕಂಟ್ರೋಲ್ ಮಾಡುತ್ತಿದ್ದವರು ಯಾರು, ಬಹಿರಂಗಪಡಿಸಿ, ಡ್ರಗ್ ಕಂಟ್ರೋಲರ್ ನ್ನು ಸಸ್ಪೆಂಡ್ ಮಾಡಿ, ಅರೆಸ್ಟ್ ಮಾಡಿ ಬಾಯಿ ಬಿಡುತ್ತಾರೆ. ಅಥವಾ ಮಂತ್ರಿಗಳಿದ್ದರಲ್ಲ, ಈ ತರ ಕೊಡಕಾಗಲ್ಲ, ನಮಗೆ ಸಪ್ಲೈ ಇಲ್ಲ ಅಂತ ಹೇಳಿ ಉಸ್ತುವಾರಿ ಮಂತ್ರಿ ಸುರೇಶ್ ಕುಮಾರ್ ಅವರಿಗೆ ತಿಳಿಸಬಹುದಿತ್ತಲ್ಲ, ಜನರ ಕಣ್ಣೊರೆಸಬೇಡಿ, ಈಗೊಂದು ವಾರದಲ್ಲಿ ಮೀಟಿಂಗ್ ಮಾಡಿ ಮಂಡ್ಯಕ್ಕೆ 100, ಚಾಮರಾಜ ನಗರಕ್ಕೆ 100ರಿಂದ 150ಕೊಡು ಅಂತ ಡ್ರಗ್ ಕಂಟ್ರೋಲರ್ ಗೆ ಹೇಳಿರುವುದು ಮೈಸೂರು ಜಿಲ್ಲಾಡಳಿತ ಎನ್ನುವುದು ನನಗೆ ಮಾಹಿತಿ ಇದೆ ಎಂದು ಬಾಂಬ್ ಸಿಡಿಸಿದರು.
ಅದು ಆಚೆ ಬರಬೇಕು ಅಂದರೆ ತಕ್ಷಣ ಯಾರು ಡ್ರಗ್ ಕಂಟ್ರೋಲರ್ ಕೆಲಸ ಮಾಡುತ್ತಾರೆ ಸಸ್ಪೆಂಡ್ ಮಾಡಿ. ಇದನ್ನು ಉಸ್ತುವಾರಿ ಮಂತ್ರಿಗಳು ಬಂದು ಸಭೆ ಮಾಡಿ. ಮುಖ್ಯಮಂತ್ರಿಗಳೇ ನಿಮಗೆ ಸತ್ಯಾಸತ್ಯತೆ ಗೊತ್ತಾಗತ್ತೆ ಎಂದು ಸಿಎಂ ಗೆ ಸಲಹೆ ನೀಡಿದರು. ಸರ್ಕಾರದಲ್ಲಿದ್ದು, ಸರ್ಕಾರಿ ವೇತನ ತಿನ್ನೋದು ಜಿಲ್ಲಾಧಿಕಾರಿಗಳು, ನಾವು ಸಾರ್ವಜನಿಕ ಸೇವಕರು, ನೀವು ಸರ್ಕಾರದ ನೌಕರೆ, ನೀವು ಸರ್ಕಾರದಲ್ಲಿದ್ದು ಮಾಡದೇ ಇರೋದಕ್ಕೆ ನಾವು ನಮ್ಮ ಆ್ಯಂಬುಲೆನ್ಸ್ ನಲ್ಲಿ ಕರೆದುಕೊಂಡು ಬಂದು ಸೇರಿಸುತ್ತಿದ್ದೇವೆ. ಯಾರು ಸಾರಾ ಸ್ನೇಹ ಬಳಗಕ್ಕೆ ನೋಟೀಸ ಕೊಡುತ್ತಾರೆ ಅವರನ್ನು ಮೊದಲು ಹುಚ್ಚಾಸ್ಪತ್ರೆಗೆ ಸೇರಿಸಿ ಅಂತ ಹೇಳುತ್ತೇವೆ.
ನಮಗೆ ಇನ್ನೂ ನೋಟೀಸ್ ಬಂದಿಲ್ಲ. ಸಾರಾ ಸ್ನೇಹಬಳಗದ ಸೆಕ್ರೆಟರಿಗೋ ಯಾರಿಗಾದರೂ ಕೊಟ್ಟಲ್ಲಿ ನಾವು ಹುಚ್ಚಾಸ್ಪತ್ರೆಗೆ ಸೇರಿಸಲು ಹೇಳೋದು, ಮೈಸೂರು ನಗರದಲ್ಲಿ ಇರುವ 90% ಅಧಿಕಾರಿಗಳು ಶಕ್ತಿ ಮೀರಿ ಕೆಲಸ ಮಾಡಿದ್ದಾರೆ. ಮೈಸೂರು ಜಿಲ್ಲಾಧಿಕಾರಿ ಅನ್ ಫಿಟ್ ಟುದ ಐಎಎಸ್ ಎಂದು ಕಿಡಿಕಾರಿದರು.