ಚಾಮರಾಜನಗರ ನಗರಸಭೆ ನೂತನ ಅಧ್ಯಕ್ಷರಾಗಿ ಸಿ.ಎಂ. ಆಶಾ ಅಧಿಕಾರ ಸ್ವೀಕಾರ

ಇಂದಿನಿಂದ ನಗರಸಭೆಯಲ್ಲಿ ಮಹಿಳೆಯರ ದರ್ಬಾರ್
ಚಾಮರಾಜನಗರ, ನ.5- ನಗರಸಭೆಯ ನೂತನ ಅಧ್ಯಕ್ಷರಾಗಿ ಸಿ.ಎಂ. ಆಶಾ, ಹಾಗೂ ಉಪಾಧ್ಯಕ್ಷರಾಗಿ ಪಿ.ಸುಧಾ ಬುಧವಾರದಂದು ಅಧಿಕಾರ ಸ್ವೀಕರಿಸಿದರು.
ನಂತರ ನಗರಸಭೆ ನೂತನ ಅಧ್ಯಕ್ಷೆ ಸಿ.ಎಂ. ಆಶಾ ಮಾತನಾಡಿ, ನಗರಸಭಾ ಅಧ್ಯಕ್ಷರಾಗಿ ಪಟ್ಟಣದ 31 ವಾರ್ಡ್ ಗಳ ಸರ್ವತೋಮುಖ ಅಭಿವೃದ್ಧಿಯನ್ನು ಅಲ್ಲಿನ ವಾರ್ಡಿನ ಸದಸ್ಯರ ಹಾಗೂ ನಿವಾಸಿಗಳ ಸಹಕಾರದಿಂದ ಮಾಡುವುದು ನನ್ನ ಆಧ್ಯತೆಯಾಗಿದೆ ಎಂದು ತಿಳಿಸಿದರು. ರಸ್ತೆ,ಚರಂಡಿ, ಬೀದಿ ದೀಪ ,ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಯ್ಕೆಗೊಂಡ ಜನಪ್ರತಿನಿಧಿಗಳು ಜನರ ಆಶಯಕ್ಕೆ ಬದ್ಧತೆಯಿಂದ ಕೆಲಸ ನಿರ್ವಹಿಸುವುದು ಮೊದಲ ಕರ್ತವ್ಯವಾಗಿದೆ ಎಂದು ಅವರ ಹೇಳಿದರು.
ನೂತನ ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಪಿ.ಸುಧಾ ಮಾತನಾಡಿ, ನಿರ್ಮಲ ಚಾಮರಾಜನಗರ ಪಟ್ಟಣವನ್ನು ಎಲ್ಲಾ ಸದಸ್ಯರು ಹಾಗೂ ಅಧಿಕಾರಿಗಳ ಸಹಕಾರದಿಂದ ನಿರ್ಮಿಸುವುದು ನನ್ನ ಮೊದಲ ಗುರಿಯಾಗಿದೆ ಎಂದು ತಿಳಿಸಿದರು. ಅಧ್ಯಕ್ಷರು ಹಾಗೂ ಸದಸ್ಯರ ಜೊತೆಗೂಡಿ ವಾರ್ಡ್‍ಗಳನ್ನು ಅಭಿವೃದ್ಧಿ ಪಡಿಸುವುದು ಸಹ ನನ್ನ ಆದ್ಯತೆಯಾಗಿದೆ ಎಂದು ತಿಳಿಸಿದರು.
ಅಧಿಕಾರ ಸ್ವೀಕಾರಕ್ಕೂ ಮುನ್ನಾ ಪಟ್ಟಣದ ಕೊಳದ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ಪಟ್ಟಣದ ಅಭಿವೃದ್ಧಿಗಾಗಿ ಪ್ರಾರ್ಥಿಸಿದರು.
ನಗರಸಭೆಗೆ ಚುನಾವಣೆ ನಡೆದು 2 ವರ್ಷಗಳ ಬಳಿಕ ಸೋಮವಾರದಂದು ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆದು ಬಿಜೆಪಿ ನಗರಸಭೆ ಗದ್ದುಗೆ ಹಿಡಿದು ವಿಜಯದ ನಗುವನ್ನು 11 ವರ್ಷದ ಬಳಿಕ ಅರಳಿದೆ.
ನೂತನ ನಗರಸಭಾ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಚುಡಾ ಅಧ್ಯಕ್ಷರಾದ ಶಾಂತಮೂರ್ತಿ, ಸದಸ್ಯ ರಂಗಸ್ವಾಮಿ (ಪಾಪು), ಚುಡಾ ಮಾಜಿ ಅಧ್ಯಕ್ಷ ಎಸ್. ಬಾಲಸುಬ್ರಹ್ಮಣ್ಯ, ಜಿ.ಪಂ. ಮಾಜಿ ಅಧ್ಯಕ್ಷರುಗಳಾದ ಎಂ. ರಾಮಚಂದ್ರ, ಅಧ್ಯಕ್ಷೆ ನಾಗಶ್ರೀ ಪ್ರತಾಪ್, ನಗರಸಭೆ ಮಾಜಿ ಅಧ್ಯಕ್ಷರಾದ ಮಹದೇವನಾಯಕ, ಸುರೇಶ್ ನಾಯಕ, ನಗರಸಭಾ ಸದಸ್ಯರಾದ ಸಿ.ಎಂ.ಮಂಜುನಾಥ್, ಚಂದ್ರಶೇಖರ್, ಮನೋಜ್ ಪಟೇಲ್, ರಾಘವೇಂದ್ರ (ಗುಂಡಣ್ಣ), ಮಹದೇವಯ್ಯ, ನೀಲಮ್ಮ, ಲೋಕೇಶ್ವರಿ, ಗೌರಮ್ಮ ಹಾಗೂ ಬಿ.ಎಸ್.ಪಿ. ಸದಸ್ಯ ಪ್ರಕಾಶ್, ವೀರಶೈವ ನೌಕರರ ಸಂಘದ ಅಧ್ಯಕ್ಷ ಡಾ|| ಪರಮೇಶ್ವರಪ್ಪ, ಮುಖಂಡರಾದ ಕೆ.ಎಲ್. ಮಹದೇವಸ್ವಾಮಿ, ಚಿಕ್ಕರಾಜು, ಬಂಗಾರಸ್ವಾಮಿ, ಹೆಚ್.ಜಿ. ಮಹದೇವಪ್ರಸಾದ್, ಶ್ರೀಕಂಠಸ್ವಾಮಿ, ಡಿ.ಎಂ. ಪರಶಿವಮೂರ್ತಿ, ರಾಮಸಮುದ್ರ ಶಿವು ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರುಗಳು ಹಾಗೂ ನಗರಸಭೆ ಪರಿಸರ ಅಭಿಯಂತರೆ ಗಿರಿಜಾ, ಕಚೇರಿ ವ್ಯವಸ್ಥಾಪಕಿ ರೀಟಾ, ಸಮುದಾಯ ಸಂಘಟನಾಧಿಕಾರಿ ವೆಂಕಟನಾಯ್ಕ, ಹಿರಿಯ ಆರೋಗ್ಯ ನಿರೀಕ್ಷಕ ಸರವಣ, ಕಿರಿಯ ಆರೋಗ್ಯ ನಿರೀಕ್ಷಕರಾದ ಮಹದೇವಸ್ವಾಮಿ, ಮಂಜು, ಸಿಬ್ಬಂಧಿಗಳಾದ ಸಂತೋμï, ನವೀನ್ ಇತರರು ಅಭಿನಂದಿಸಿದರು.