ಚಾಮರಾಜನಗರ ತಾಲೂಕು ಪತ್ರಿಕಾ ಪ್ರತಿನಿಧಿಗಳ ಸಂಘ ರಚನೆ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.07:- ಪತ್ರಿಕಾ ಪ್ರತಿನಿಧಿಗಳ ಹಿತರಕ್ಷಣೆ ಹಾಗೂ ಸಂಘಟನೆಯ ದೃಷ್ಠಿಯಿಂದ ನೂತನವಾಗಿ ಚಾಮರಾಜನಗರ ತಾಲೂಕು ಪತ್ರಿಕಾ ಪ್ರತಿನಿಧಿಗಳ ಸಂಘ ರಚನೆ ಮಾಡಲಾಯಿತು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ತಾಲೂಕು ವ್ಯಾಪ್ತಿಯಲ್ಲಿ ವಿವಿಧ ಪತ್ರಿಕೆಗಳಲ್ಲಿ ಪ್ರತಿನಿಧಿಗಳಾಗಿರುವ 50ಕ್ಕು ಹೆಚ್ಚು ಮಂದಿ ಸಂಘಟನೆಗೊಂಡ ಪತ್ರಿಕಾ ಪ್ರತಿನಿಧಿಗಳ ಎರಡನೇ ಸಭೆ ನಡೆಯಿತು. ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ಪ್ರತಿಕಾ ಪ್ರತಿನಿಧಿಗಳುÀ ಸಂಘ ರಚನೆಗೆ ಅನುಮೋದನೆ ನೀಡಿದರು.
ಅಂತಿಮವಾಗಿ ಸಂಘದ ನೂತನ ಅಧ್ಯಕ್ಷರಾಗಿ ದೊಡ್ಡರಾಯಪೇಟೆ ಸಿ. ಪುರುಷೋತ್ತಮ್, ಪ್ರಧಾನ ಕಾರ್ಯದರ್ಶಿಯಾಗಿ ಎನ್. ಅಕ್ಷಯ್ ಹಾಗೂ ಗೌರವ ಅಧ್ಯಕ್ಷರಾಗಿ ಎಚ್.ಎಸ್. ಚಂದ್ರಶೇಖರ್, ಖಜಾಂಚಿಯಾಗಿ ಪ್ರತಾಪ್ ಚಾ.ನಗರ ಅವರನ್ನು ನೇಮಕ ಮಾಡಲಾಯಿತು.
ಉಪಾಧ್ಯಕ್ಷರಾಗಿ ಹೆಗ್ಗವಾಡಿ ಎಸ್. ಮಹದೇವ್, ಉಡಿಗಾಲ ಶೇಖರ್, ದೇಮಹಳ್ಳಿ ಶಿವಕುಮಾರ್, ಕಾರ್ಯದರ್ಶಿಗಳಾಗಿ ನವೀನ್‍ಕುಮಾರ್ ರಾಮಸಮುದ್ರ, ಸಹ ಕಾರ್ಯದರ್ಶಿಯಾಗಿ ಎಲ್. ಶಿವಲಿಂಗಮೂರ್ತಿ, ಕಾನೂನು ಸಲಹೆಗಾರರಾಗಿ ಚಂದ್ರು ಪತ್ರಿಕಾ ಕಾರ್ಯದರ್ಶಿಯಾಗಿ ಹರವೆ ಮಹೇಶ್ ಅವರು ಆಯ್ಕೆಯಾದರು.
ಸಂಘದ ನಿರ್ದೇಶಕರಾಗಿ ಪತ್ರಿಕಾ ಪ್ರತಿನಿಧಿಗಳಾದ ಪ್ರಕಾಶ್ ಬೆಲ್ಲದ್, ಆರ್.ಎನ್. ಸಿದ್ದಲಿಂಗಸ್ವಾಮಿ, ಎಂ. ರೇಣುಕೇಶ್, ಎಂ. ಲಿಂಗಪ್ಪ, ಶ್ರೀನಿವಾಸನಾಯಕ, ಮಂಜುನಾಥ ಆರಾಧ್ಯ, ಎಸ್. ಸಾಗರ್, ಸಂತೇಮರಹಳ್ಳಿ, ಎಂ.ಆರ್.ಪ್ರಕಾಶ್ ಚಾ.ನಗರ, ಚಾ.ನಗರ ಸಿದ್ದಾಪ್ಪಾಜಿ, ರಾಮಸಮುದ್ರ ಸಿದ್ದರಾಜು, ಬದನಗುಪ್ಪೆ ಮಲ್ಲಣ್ಣ, ಆಲೂರು ನಾಗೇಂದ್ರಸ್ವಾಮಿ, ಹರವೆ ಪರಶಿವಪ್ಪ, ಹರದನಹಳ್ಳಿ ಗಿರೀಶ್, ಜ್ಯೋತಿಗೌಡನಪುರ ಸಿದ್ದರಾಜು, ತೆಳ್ಳನೂರು ಕೆಕೆ ಮಹದೇವಯ್ಯ, ಸಿದ್ದು ರಾಮಸಮುದ್ರ ಮಹದೇವಸ್ವಾಮಿ ಬಸವಟ್ಟಿ, ಅವರನ್ನು ನೇಮಕ ಮಾಡಲಾಯಿತು.
ನೂತನ ಅಧ್ಯಕ್ಷ ದೊಡ್ಡರಾಯಪೇಟೆ ಪುರುಷೋತ್ತಮ್ ಮಾತನಾಡಿ, ತಾಲೂಕು ಕೇಂದ್ರದಲ್ಲಿ ಪತ್ರಿಕಾ ಪ್ರತಿನಿಧಿಗಳ ಸಂಘ ರಚನೆ ಮಾಡುವ ಜೊತೆಗೆ ಪ್ರತಿನಿಧಿಗಳ ಕುಂದು ಕೊರತೆಗಳು ಹಾಗೂ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳಿಂದ ಪ್ರತಿನಿಧಿಗಳಿಗೆ ದೊರೆಯುವ ಸವಲತ್ತುಗಳನ್ನು ತಲುಪಿಸುವುದು, ಕಳೆದ 30-40 ವರ್ಷಗಳಿಂದ ಇದೇ ವೃತ್ತಿಯನ್ನು ಅವಲಂಬಿಸಿಕೊಂಡು ಜೀವನ ನಡೆಸುತ್ತಿರುವ ಹಿರಿಯರನ್ನು ಗೌರವಿಸುವುದು. ಅಪಘಾತ ವಿಮೆ, ಆರೋಗ್ಯ ವಿಮೆ ಸೇರಿದಂತೆ ಪ್ರತಿನಿಧಿಗಳ ಹಿತ ರಕ್ಷಣೆಗೆ ಬದ್ದವಾಗಿ ಸಂಘಟನೆ ಬಲಗೊಳಿಸುವ ಉದ್ದೇಶ ನಮ್ಮದಾಗಿದೆ. ಎಲ್ಲರು ಸಹ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಪ್ರದಾನ ಕಾರ್ಯದರ್ಶಿ ಅಕ್ಷಯ್ ಸ್ವಾಗತಿಸಿ ವಂದಿಸಿದರು.