ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಆಂಬುಲೆನ್ಸ್ ಕೊಡುಗೆ

ಚಾಮರಾಜನಗರ, ಮೇ.21- ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಕೊಳ್ಳೇಗಾಲದ ಚಿಲಕವಾಡಿ ಗ್ರಾಮದ ಬಸವೇಶ್ವರ ಸ್ವೀಟ್ಸ್‍ನ ಮಾಲೀಕರಾದ ನವೀನ್ ರವರ ಸಹಾಯದಿಂದ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆಯ ಜಿಲ್ಲಾ ಅಧ್ಯಕ್ಷ ಮೂಡ್ಲುಪುರ ನಂದೀಶ್ ರವರ ನೇತೃತ್ವದಲ್ಲಿ ಮತ್ತೊಂದು ಉಚಿತಆಂಬುಲೆನ್ಸ್‍ನ್ನು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆಯ ಸದಸ್ಯರು ಹಾಗೂ ಸ್ನೇಹಿತರ ಜೊತೆಗೂಡಿ ಜಿಲ್ಲಾ ಸರ್ಜನ್ ಡಾ.ಶ್ರೀನಿವಾಸ್, ಡಾ.ಕೃಷ್ಣ ಪ್ರಸಾದ್, ಡಾ.ಮುರುಗೇಶ್ ರವರಿಗೆ ಕೀ ಕೊಡುವ ಮುಖಾಂತರ ಜಿಲ್ಲಾ ಆಸ್ಪತ್ರೆಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಇನ್ಸ್ಪೆಕ್ಟರ್ ಮಹೇಶ್, ಮುಖಂಡರಾದ ಮಲ್ಲಗಳ್ಳಿ ನವೀನ್, ತಾಲ್ಲೂಕು ಪಂಚಾಯತಿ ಮಾಜಿ ಉಪಾಧ್ಯಕ್ಷ ದಯಾನಿಧಿ, ಮಾಜಿ ಚುಡಾ ಅಧ್ಯಕ್ಷ ಬಾಲಸುಬ್ರಹ್ಮಣ್ಯ, ಮಹಾದೇವಸ್ವಾಮಿ (ಗುಂಡ), ನಿರಂಜನ್, ರವೀಶ್ ಮಲ್ಲಗಳ್ಳಿ, ಸೇರಿದಂತೆ ಹಲವಾರು ಮುಖಂಡರು ಹಾಗೂ ಕೊರೊನೊ ವಾರಿಯರ್ಸ್‍ಗಳು ಇದ್ದರು.