ಚಾಮರಾಜನಗರ ಜನತೆಗೆ ನನ್ನ ಮೇಲೆ ಅಪಾರವಾದ ಪ್ರೀತಿ, ಗೌರವ ಇದೆ: ವಾಟಾಳ್

ಚಾಮರಾಜನಗರ, ಏ.30:- ಚಾಮರಾಜನಗರ ಜನತೆಗೆ ನನ್ನ ಮೇಲೆ ಅಪಾರವಾದ ಪ್ರೀತಿ, ಅಭಿಮಾನ ಗೌರವ ಇದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಭ್ಯರ್ಥಿ ವಾಟಾಳ್ ನಾಗರಾಜ್ ಅಭಿಪ್ರಾಯಪಟ್ಟರು.
ಅವರು ಇಂದು ನಗರಕ್ಕೆ ಆಗಮಿಸಿ, ತೆರೆದ ವಾಹನದಲ್ಲಿ ಪ್ರಮುಖ ಬೀದಿಗಳಲ್ಲಿ ಪ್ರವಾಸ ಮಾಡಿ ಮತಯಾಚನೆ ಮಾಡಿದರು. ಈ ವೇಳೆ ಮಾತನಾಡಿದಅವರು, ಚಾಮರಾಜನಗರ ಕ್ಷೇತ್ರದ ಜನರು ನನ್ನನ್ನು ಮೂರು ಬಾರಿ ಶಾಸಕನನ್ನಾಗಿ ಆಯ್ಕೆ ಮಾಡಿರುತ್ತಾರೆ. ಇದಕ್ಕಾಗಿ ಅವರಿಗೆ ನಾನು ಚಿರಋಣಿ. ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಚಾಮರಾಜನಗರಕ್ಕೆಕಾವೇರಿ ನೀರನ್ನುತಂದು ನಗರದಜನತೆಗೆ ಅನುಕೂಲ ಕಲ್ಪಿಸಿದ್ದೇನೆ. ಹಳ್ಳಿಹಳ್ಳಿಗಳಿಗೂ ನೀರು ಒದಗಿಸಿದ್ದೇನೆ, ಮನೆಗಳನ್ನು ನಿರ್ಮಿಸಿಕೊಟ್ಟಿರುತ್ತೇನೆ. ನಾನು ಮೂರು ಬಾರಿ ಸೋತಿದ್ದೇನೆ. ಆರು ದಶಕಗಳ ಕಾಲ ಸೇವೆ ಸಲ್ಲಿಸಿರುತ್ತೇನೆ. ಚಾಮರಾಜನಗರ ಜನತೆಯು ನೀರಿನ ಋಣಕ್ಕಾದರೂ ನನಗೆ ಮತ ನೀಡಿಗೆಲ್ಲಿಸಬೇಕುಎಂದು ತಿಳಿಸಿದರು. ಒಂದು ವೇಳೆ ಆಯ್ಕೆ ಮಾಡದಿದ್ದಲ್ಲಿ ಚಾಮರಾಜನಗರದಲ್ಲಿ ಇದೇ ಕೊನೆ ಚುನಾವಣೆ, ಚಾಮರಾಜನಗರದೊಂದಿನ ಸಂಬಂಧವು ಸಹ ಈ ಮೂಲಕ ಕೊನೆಯಾಗಲಿದೆ ಎಂದು ಅವರು ಭಾವನಾತ್ಮಕವಾಗಿ ನುಡಿದರು.
ಜಾತಿಯಡಿ ಮತ ನೀಡದೆ ಅಭಿವೃದ್ಧಿಗಾಗಿ ನನಗೆ ಮತ ನೀಡಿ ನನ್ನನ್ನುಆಯ್ಕೆ ಮಾಡಿದರೆ ಚಾಮರಾಜನಗರವನ್ನು ಆದರ್ಶನಗರವನ್ನಾಗಿ ಮಾಡುತ್ತೇನೆ. ಚಾಮರಾಜನಗರಕ್ಕೆ ಕಾವೇರಿ 2ನೇ ಹಂತಯೋಜನೆ ಜಾರಿ ಮಾಡುತ್ತೇನೆ. 5000 ಕೋಟಿರೂ. ಪ್ಯಾಕೇಜ್ ಘೋಷಣೆ ಮಾಡಿಸುತ್ತೇನೆ. ಚಂದಕವಾಡಿ, ಬದನಗುಪ್ಪೆ ಪ್ರದೇಶಗಳನ್ನು ಉಪನಗರಗಳನ್ನಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಚುನಾವಣಾ ಆಯೋಗ ಚಾಮರಾಜನಗರವನ್ನು ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಬೇಕು. ಇಲ್ಲಿ ಹಣದ ಹೊಳೆ ಹರಿಯತ್ತಿದೆ. ಇಲ್ಲಿ ಪ್ರತಿ ಹಂತ ಹಂತಕ್ಕೂ ವೀಕ್ಷಕರನ್ನು ನೇಮಕ ಮಾಡಬೇಕು. ಅದಕ್ಕಾಗಿ ಚುನಾವಣೆಯಲ್ಲಿ ಅನ್ಯಾಯ ಅಕ್ರಮ ನಡೆಯುತ್ತಿರುವ ಬಗ್ಗೆ ಬೆಂಗಳೂರಿನ ಚುನಾವಣಾ ಆಯೋಗದ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದುಎಂದುಅವರು ತಿಳಿಸಿದರು.
ಮಾಧ್ಯಮದವರ ವಿರುದ್ಧ ಬೇಸರ:
ಕೆಲವು ಮಾಧ್ಯಮಗಳು ಕೇವಲ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಬಗ್ಗೆ ಮಾತ್ರ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ನಾನು ಒಬ್ಬ ಪ್ರಬಲ ಅಭ್ಯರ್ಥಿ, ಮೂರು ಬಾರಿ ಶಾಸಕನಾಗಿದ್ದವನು ನನ್ನನ್ನು ಕಡೆಗಣಿಸುತ್ತಿರುವುದು ಬೇಸರವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ನಾನೊಬ್ಬ ಜಾತ್ಯತೀತ:
ನಾನೊಬ್ಬ ಜಾತ್ಯತೀತ ವ್ಯಕ್ತಿಯಾಗಿದ್ದು, ಎಂದೂ ನಾನು ಜಾತಿಯ ಮೂಲಕ ಮತಯಾಚನೆ ಮಾಡಿಲ್ಲ. ನಾನು ಮತದಾರರಿಗೆ ಹಣ ಹಂಚಿಲ್ಲ.
ಇದೇ ನನ್ನ ಕೊನೆಯ ಚುನಾವಣೆ :
ಈ ಬಾರಿಯ ಚುನಾವಣೆಯಲ್ಲಿ ಜನರು ನನ್ನನ್ನು ಆಯ್ಕೆ ಮಾಡಿದರೆ ಚಾಮರಾಜನಗರವನ್ನು ಐತಿಹಾಸಿಕ ನಗರವನ್ನಾಗಿ ಮಾಡುತ್ತೇನೆ ಹಾಗೂ ನಿರಂತರವಾಗಿ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುತ್ತೇನೆ. ನನ್ನನ್ನು ಉಳಿಸಿಕೊಳ್ಳುವ ಶಕ್ತಿ ನಿಮಗೆ ಬಿಟ್ಟಿದ್ದು, ನೀವು ನನ್ನ ಉಳಿಸಿಕೊಳ್ಳುತ್ತೀರಿ ಎಂಬ ಭರವಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಶಿವಲಿಂಗಮೂರ್ತಿ, ವಡ್ಡರಹಳ್ಳಿ ಮಹೇಶ್ ಸೇರಿದಂತೆ ಅನೇಕರು ಹಾಜರಿದ್ದರು.