ಚಾಮರಾಜನಗರದಲ್ಲಿ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಕೈಗಾರಿಕೆ ಸ್ಥಾಪನೆ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.17:- ಶ್ರೀಲಂಕಾದ ವಿಶ್ವ ವಿಖ್ಯಾತ ಕ್ರಿಕೆಟಿಗ, ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಕೈಗಾರಿಕೋದ್ಯಮಿಯಾಗುತ್ತಿದ್ದಾರೆ. ತಮ್ಮ ಉದ್ಯಮವನ್ನು ಕರ್ನಾಟದ ಚಾಮರಾಜನಗರದಲ್ಲಿ ಕಾರ್ಖಾನೆ ಸ್ಥಾಪನೆ ಆರಂಭಿಸಲು ಮುಂದಾಗಿದ್ದಾರೆ ಲಂಕಾ ಕ್ರಿಕೆಟಿಗ.
ಗಡಿ ಜಿಲ್ಲೆ ಚಾಮರಾಜನಗರದ ಬದನಗುಪ್ಪೆ- ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸಾಫ್ಟ್ ಡ್ರಿಂಕ್ ಕಾರ್ಖಾನೆಯನ್ನು ಆರಂಭಿಸುತ್ತಿದ್ದು, 46 ಎಕರೆ ಪ್ರದೇಶವನ್ನು ಖರೀದಿಸಿದ್ದಾರೆ. ಈಗಾಗಲೇ ಸರ್ಕಾರದಿಂದ ಪಡೆಯಬೇಕಾದ ಆಡಳಿತಾತ್ಮಕವಾದ ಎಲ್ಲಾ ಹಂತಗಳನ್ನೂ ಮುಗಿಸಿ ಕಾರ್ಖಾನೆಯ ನಿರ್ಮಾಣದಕಾರ್ಯ ಆರಂಭಿಸಿದ್ದಾರೆ.
ಮುತ್ತಯ್ಯ ಬೆವರೇಜಸ್ ಹೆಸರಿನಲ್ಲಿ ಸಾಫ್ಟ್ ಕೂಲ್ ಡ್ರಿಂಕ್, ಸುವಾಸಿತ ಹಾಲನ್ನು ಕ್ಯಾನ್‍ಗಳಲ್ಲಿ ಮಾರಾಟ ಮಾಡಲಿದ್ದು ಚಾಮರಾಜನಗರದಲ್ಲಿ ಸಾಫ್ಟ್‍ಡ್ರಿಂಕ್ ಹಾಗೂ ನಾನ್ ಆಲೊಹಾಲಿಕ್ ಡ್ರಿಂಕ್‍ಗಳು ತಯಾರಾಗಲಿದೆ ಎಂದು ತಿಳಿದು ಬಂದಿದೆ.
250 ಕೋಟಿಗೂ ಅಧಿಕ ಮೊತ್ತದ ಹಣವನ್ನು ಚಾಮರಾಜನಗರದಲ್ಲಿ ಹೂಡಿಕೆ ಮಾಡುತ್ತಿದ್ದು ಸ್ಥಳೀಯವಾಗಿ 500 – 800 ನೌಕರಿ ಸಿಗಲಿದೆ, ಪರೋಕ್ಷವಾಗಿ ಮಂದಿಗೆ ನೂರಾರು ಮಂದಿ ಕಾರ್ಖಾನೆಯಿಂದ ಸಹಾಯವಾಗಾಲಿದೆ.
ಖ್ಯಾತಕ್ರಿಕೆಟಿಗ ಚಾಮರಾಜನಗರದಲ್ಲಿ ಕಾರ್ಖಾನೆ ಆರಂಭಿಸುವುದರಿಂದ ಮತ್ತಷ್ಟು ಕೈಗಾರಿಕೆಗಳನ್ನು ಸೆಳೆಯಲು ಅನುಕೂಲವಾಗಲಿದೆ. ಈಗಾಗಲೇ ಬಿರ್ಲಾ ಗ್ರೂಪಿನಿಂದ ಪರಿಸರಸ್ನೇಹಿ ಬಣ್ಣದ ಕಾರ್ಖಾನೆ ಕೂಡ ನಿರ್ಮಾಣವಾಗುತ್ತಿದ್ದು, ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಗುಂಡ್ಲುಪೇಟೆಯಲ್ಲಿ ಭೂಮಿ ಖರೀದಿಸಿ ಕೃಷಿ ಚಟುವಟಿಕೆ ನಡೆಸುತ್ತಿದ್ದರೇ ಮುತ್ತಯ್ಯ ಕೈಗಾರಿಕೋದ್ಯಮಿಯಾಗಿ ಚಾಮರಾಜನಗರಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ಒಟ್ಟಿನಲ್ಲಿ ಖ್ಯಾತ ಕ್ರಿಕೆಟಿಗರು ಕರ್ನಾಟಕದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದಾಗಿರುವುದು ಹೆಮ್ಮೆಯ ವಿಷಯವಾಗಿದೆ.