ಚಾಮರಾಜನಗರದಲ್ಲಿ ವಿಶ್ವ ಪರಿಸರ ದಿನ ಆಚರಣೆ

ಚಾಮರಾಜನಗರ,ಜೂ.05-ನಗರದ ತಾಲ್ಲೂಕು ಪಂಚಾಯತ್ ಆವರಣದಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ಅರಣ್ಯ ಇಲಾಖೆಯ ವತಿಯಿಂದ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ನಗರದ ಆರ್.ಎಫ್.ಓ ಅಮೃತ ಅವರು ಗಿಡ ನೆಟ್ಟು ನೀರೆರೆಯುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಇವರು ಇಂದು ಕೊರೋನಾ ದೇಶವ್ಯಾಪಿ ಪಸರಿಸಿದ್ದು ಅದನ್ನು ದೂರ ಮಾಡಲು ಗಿಡಗಳು ಆಮ್ಲಜನಕದ ನೀಡುವುದೇ ಆಗಿದೆ ಎಂದು ಅಭಿಪ್ರಾಯ ಪಟ್ಟರು.
ಇಂದು ನಾವು ಪ್ರತಿಯೊಬ್ಬರೂ ಗಿಡ ನೆಟ್ಟು ಅವುಗಳನ್ನು ಕಾಪಾಡಬೇಕಾಗಿದೆ. ಸುಗಮವಾದ ಆಮ್ಲಜನಕ ಕೊಡುವಲ್ಲಿ ಗಿಡಗಳು ಸಹಕಾರಿಯಾಗಲಿದ್ದು ಇಂದು ನಾವು ಗಿಡಗಳನ್ನು ಕಾಪಾಡಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಡಿ.ಆರ್.ಎಫ್.ಓ ಗಜೇಂದ್ರ, ಗವಿರಾಜು, ಸಿಬ್ಬಂದಿಗಳಾದ ಬಸವಣ್ಣ, ತಾಲ್ಲೂಕು ಪಂಚಾಯತ್ ನೌಕರರಾದ ರವಿ, ಮಹೇಶ್ ಇದ್ದರು.