ಚಾಮರಾಜನಗರಕ್ಕೆ ರೇಡಿಯೋ ಕೇಂದ್ರ ಮಂಜೂರು ಮಾಡಿ: ಸುರೇಶ್ ಋಗ್ವೇದಿ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಫೆ.14:-ಚಾಮರಾಜನಗರಕ್ಕೆ ರೇಡಿಯೋ ಕೇಂದ್ರ ಮಂಜೂರು ಮಾಡಿಕೊಡಬೇಕು ಎಂದು ಜೈ ಹಿಂದ್ ಪ್ರತಿμÁ್ಠನದ ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ಒತ್ತಾಯಿಸಿದರು.
ಅವರುಜೈ ಹಿಂದ್ ಪ್ರತಿμÁ್ಠನ ಮತ್ತು ಋಗ್ವೇದಿ ಯೂತ್ ಕ್ಲಬ್ ವತಿಯಿಂದ ಜೈ ಹಿಂದ್ ಕಟ್ಟೆಯಲ್ಲಿ ವಿಶ್ವರೇಡಿಯೋ ದಿನ ಕಾರ್ಯಕ್ರಮದಲ್ಲಿ ಮಾತನಾಡಿ ಚಾಮರಾಜನಗರಕ್ಕೆ ರೇಡಿಯೋ ಕೇಂದ್ರ ಮಂಜೂರು ಮಾಡಿಕೊಡಬೇಕು. ಯುವಕರಿಗೆ ಮತ್ತು ವಿದ್ಯಾರ್ಥಿಗಳಿಗೆ ರೇಡಿಯೋದ ಮಹತ್ವವನ್ನು ಅರಿಯುವಂತಹಕಾರ್ಯವನ್ನು ಮಾಡೋಣ. ಸಾಮಾಜಿಕ, ಧಾರ್ಮಿಕ, ಆರ್ಥಿಕ, ಸಾಂಸ್ಕøತಿಕ, ರಾಜಕೀಯ, ಕ್ರೀಡೆ ಪ್ರಕೃತಿಯ ವಿಕೋಪಗಳು, ಸಂಗೀತ, ನೂರಾರು ಕ್ಷೇತ್ರಗಳ ಚಿಂತನೆಗಳು, ಕೃಷಿ ಸಾಧಕ ಅಂಶಗಳನ್ನು ತಿಳಿಯಲು ರೇಡಿಯೋ ಮಹತ್ತರವಾದ ಕಾರ್ಯವನ್ನು ತಿಳಿಯಲು ಸಹಕಾರಿ. ಶತಮಾನಗಳಿಂದಲೂ ಕೂಡ ಪ್ರಪಂಚದ ಜ್ಞಾನವನ್ನು ನೀಡಿದೆ. ರೇಡಿಯೋ ಕೇಂದ್ರಗಳಿಂದ ಯಾವುದೇ ಆರೋಗ್ಯ ಸಮಸ್ಯೆಗಳು ಉಂಟಾಗುವುದಿಲ್ಲ. ಬಹಳ ಸರಳ ಖರ್ಚಿನಲ್ಲಿಎಲ್ಲಾ ಮಾಹಿತಿಗಳನ್ನು ತಿಳಿಯಬಹುದು ಎಂದು ಅವರು ತಿಳಿಸಿದರು.
ವಿಶ್ವಸಂಸ್ಥೆಯಯುನೆಸ್ಕೋ ವಿಶ್ವರೇಡಿಯೋ ದಿನವನ್ನು ಫೆಬ್ರವರಿ 13 ಎಂದು ಘೋಷಿಸಿದೆ. ಅನುಭವ ಸಾಮಥ್ರ್ಯ, ಸುದ್ದಿ, ನಾಟಕ, ಸಂಗೀತ,ಕ್ರೀಡೆ, ಸಿನಿಮಾ, ಅಪಘಾತ, ಯುದ್ಧಎಲ್ಲಾ ಕ್ಷೇತ್ರಗಳ ವಿಚಾರವನ್ನು ತಿಳಿಯುವ ನಿರಂತರ ಸಾಮಥ್ರ್ಯ ಸ್ಮರಿಸಬೇಕಾಗಿದೆ. ಮಾರ್ಕೊನಿ ಪ್ರಥಮರೇಡಿಯೋ ಪ್ರಸರಣವನ್ನು ಮಾಡಿದ ವಿಶ್ವದ ಮೊದಲ ವ್ಯಕ್ತಿ. ಆಕಾಶವಾಣಿ ಧ್ವನಿ ದೂರ ಸಂವೇದೀಯ ತರಂಗಗಳ ಮೂಲಕ ಪ್ರತಿಯೊಬ್ಬರ ಹೃದಯ ಮತ್ತು ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವ ಸಾಮಥ್ರ್ಯವಿರುವುದು. ಆಕಾಶವಾಣಿಯರೇಡಿಯೋದ ಮೂಲಕ ಎಂದು ಅನೇಕ ಸುದ್ದಿ ವಾಚಕರು ವಿಶ್ವದಲ್ಲಿ ತಮ್ಮಧ್ವನಿ ಮತ್ತು ಹಾವಭಾವ ಹಾಗೂ ಶಬ್ದಗಳ ಏರಿಳಿತಗಳ ಮೂಲಕ ಮನೆ ಮಾತಾಗಿರುವುದನ್ನುಕಾಣಬಹುದು. ಯುವಕರು ಮತ್ತು ವಿದ್ಯಾರ್ಥಿಗಳು ಹಿರಿಯರು ವಿಶೇಷವಾಗಿರೇಡಿಯೋ ಕೇಳುವ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು. ಹವ್ಯಾಸವನ್ನಾಗಿ ಮಾಡಿಕೊಳ್ಳಬೇಕಾಗಿ ಮನವಿ ಮಾಡಿದರು .
ಹಿರಿಯ ನಾಗರೀಕರು, ಜೈ ಹಿಂದ್ ಪ್ರತಿμÁ್ಠನದ ಮಾರ್ಗದರ್ಶಕರಾದಸರೋಜಮ್ಮಅವರುರೇಡಿಯೋ ಬ್ಯಾಂಡ್‍ತಿರುಗಿಸುವ ಮೂಲಕ ಉದ್ಘಾಟಿಸಿದರು.
ಸಮಾಜ ಸೇವಕ ಸುರೇಶ್‍ಗೌಡ ಮಾತನಾಡಿ ವಿಶ್ವರೇಡಿಯೋ ದಿನವನ್ನುಆಚರಿಸುವ ಮೂಲಕ ಯುವಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅದರ ಮಹತ್ವವನ್ನು ಸಾರುತ್ತಿರುವ ಬಹಳ ಅಗತ್ಯವಿದೆಎಂದರು. ಯುವಕರಾದ ಶಶಾಂಕ್, ಗಿರೀಶ್ ಮಹೇಶ್, ರವಿ ಇದ್ದರು.