ಚಾಮರಾಜನಗರಕ್ಕೆ ಚಾಮರಾಜೇಶ್ವರ ರಥ ಆಗಮನ

ಚಾಮರಾಜನಗರ, ಮೇ.13:- ಚಾಮರಾಜೇಶ್ವರ ದೇವಸ್ಥಾನಕ್ಕೆ ಚಾಮರಾಜೇಶ್ವರ ರಥ ಆಗಮನ ಬಹಳ ವಿಜೃಂಭಣೆಯಿಂದ ಚಾಮರಾಜನಗರದ ಜನತೆ ಕಲಾತಂಡಗಳ ಪ್ರಕಾರವಾಗಿ ರಥಕ್ಕೆ ಪೂಜೆಯನ್ನು ಸಲ್ಲಿಸಿ ಪುಟ್ಟರಂಗಶೆಟ್ಟಿ ರವರು ರಥವನ್ನು ಬರಮಾಡಿಕೊಂಡರು.
ಆದಿಶಕ್ತಿ ದೇವಸ್ಥಾನದ ರಥವನ್ನು ಮರಳಿ ಸರ್ಕಲ್ ಪಚ್ಚಪ್ಪ ಸರ್ಕಲ್ ಬಸ್ ನಿಲ್ದಾಣ ರಸ್ತೆ, ಗುಂಡ್ಲುಪೇಟೆ ವೃತ್ತ, ಶರೀಫ್ ಸರ್ಕಲ್, ದೊಡ್ಡ ಅಂಗಡಿ ಬೀದಿ ಮತ್ತು ಚಿಕ್ಕ ಅಂಗಡಿ ಬೀದಿ, ರಥದ ಬೀದಿ, ಅಗ್ರಹಾರ ಬೀದಿ, ಮುಂತಾದ ರಾಜಬೀದಿಗಳಲ್ಲಿ ಅರ್ಥವನ್ನು ಮೆರವಣಿಗೆ ಮೂಲಕ ಚಾಮರಾಜೇಶ್ವರ ದೇವಸ್ಥಾನವನ್ನು ತಲುಪಿತು. ದೇವಾಲಯದ ಸುತ್ತಲು ಪ್ರದಕ್ಷಿಣೆ ಹಾಕಿದ ನಂತರ ದೇವಸ್ಥಾನದ ಆವರಣದಲ್ಲಿ ರಥವನ್ನು ನಿಲ್ಲಿಸಲಾಯಿತು.
ಸುಮಾರು 1.20 ಕೋಟಿರೂ. ವೆಚ್ಚದಲ್ಲಿ ಅನುದಾನ ಬಿಡುಗಡೆಗೊಂಡು ಹೊಸ ರಥವನ್ನು ನಿರ್ಮಿಸಲಾಗಿದೆ. ಶ್ರೀ ಚಾಮರಾಜೇಶ್ವರದೇವಾಲಯದ ನೂತನ ಬ್ರಹ್ಮರಥ ನಿರ್ಮಾಣ ಕಾರ್ಯವು ಪೂರ್ಣಗೊಂಡು ಬೆಂಗಳೂರಿನ ಕಾಮಾಕ್ಷಿ ಪಾಳ್ಯದಿಂದ ನಿನ್ನೆ ಲಾರಿ ಮೂಲಕ ಬ್ರಹ್ಮರಥವು ಚಾಮರಾಜನಗರಕ್ಕೆ ಆಗಮಿಸಿದೆ.