ಚಾನಾಳ್ ಸೊಸೈಟಿ ಅಧ್ಯಕ್ಷರಾಗಿರಾಮಕೃಷ್ಣರೆಡ್ಡಿ ಆಯ್ಕೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.28: ತಾಲೂಕಿನ ಚಾನಾಳ್ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 5 ವರ್ಷಗಳ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ  ಸ್ಥಾನಕ್ಕೆ ನಡೆದ  ಚುನಾವಣೆಯಲ್ಲಿ ಸಿ. ಆರ್. ರಾಮಕೃಷ್ಣ ರೆಡ್ಡಿ ಅದ್ಯಕ್ಷರಾಗಿ ಹಾಗೂ  ಅಜಯ ಸ್ವಾಮಿಯವರು ಡಿ ಕಗ್ಗಲ್ಲು ಗ್ರಾಮ ಇವರು ಮೊನ್ನೆ ಅವಿರೋಧವಾಗಿ  ಆಯ್ಕೆಯಾಗಿದ್ದಾರೆ.
ಚುನಾವಣೆ ಅಧಿಕಾರಿಯಾಗಿ ಕೆ. ಚಂದ್ರಮೌಳಿ ಆಗಮಿಸಿದ್ದರು.  ಆಡಳಿತ ಮಂಡಳಿ ನಿರ್ದೇಶಕರುಗಳಾದ  ಸತ್ಯನಾರಾಯಣರೆಡ್ಡಿ,  ಬನ್ನಮ್ಮ,  ಸಾವಿತ್ರಮ್ಮ . ಹೊನ್ನೂರವಲಿ, ಕೆ. ಸಿದ್ದಯ್ಯ, ಪಿ. ಫಕೀರ್ ಸಾಬ್, ಗೋವಿಂದ ರೆಡ್ಡಿ, ಎಚ್. ವೆಂಕಟೇಶಪ್ಪ. ಬಂಡಿ ಈರಣ್ಣ,  ದೊಡ್ಡ ಅಂಬಣ್ಣ ಹಾಗೂ ಮುಖ್ಯ ಕಾರ್ಯನಿರ್ವಕ ಅಕ್ಕಿ ಬಸವರಾಜ್ ಮತ್ತು  ಅಕೌಂಟೆಂಟ್ ಭಾಸ್ಕರ್ ರೆಡ್ಡಿ ಹಾಜರಿದ್ದರು