ಚಾತುರ್ಮಾಸಾರಂಭ : ಗುರುನಮನದೊಂದಿಗೆ ವೃತಾಚರಣೆ ಆರಂಭಿಸಿದ ಚಿಂತಾಮಣಿ ಶ್ರೀಗಳು


ಸಂಜೆವಾಣಿ ವಾರ್ತೆ
ಹೊಸಪೇಟೆ ಜು4: ಗುರು ಪೂರ್ಣಿಮೆಯಿಂದ ಆರಂಭವಾಗುವ ಚಾತುರ್ಮಾಸದ ವೃತಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳು ವೇದವ್ಯಾಸರಾಧಿಯಾಗಿ ಗುರುಗಳ ವಂದನೆಯೊಂದಿಗೆ ಅಣಿಯಾದರು.
ಅಮರಾವತಿಯ ಶ್ರೀ ಚಿಂತಾಮಣಿ ಮಠದಲ್ಲಿ ಸೋಮವಾರ ದಿಂದ ಮೂರು ತಿಂಗಳುಗಳ ಕಾಲ ನಡೆಯುವ ವೃತಾಚರಣೆಯ ಪ್ರಯುಕ್ತ ಪ್ರತಿನಿಧಿವೂ ಗುರುಪಾದ ಪೂಜೆ, ಗೋ-ಪೂಜೆ, ಗುರುಭೀಕ್ಷೆ ವಿವಿಧ ಪೂಜಾ ಕೈಂಕರ್ಯಗಳು, ಸತ್ತಸ್ಸಂಗ , ಧಾರ್ಮಿಕ ಚಿಂತನಾಗೋಷ್ಠಿಗಳನ್ನು ಮಾಡುವ ಮೂಲಕ ಧರ್ಮಜಾಗೃತಿ ಹಾಗೂ ಧರ್ಮ ಕಾರ್ಯಗಳನ್ನು ಕೈಗೊಳ್ಳಲಾಗುವುದು ಆಸಕ್ತರು ದಿನದ ಆಯಾವುದ ಸಮಯದಲ್ಲಿ ಬಂದು ಕಾರ್ಯಗಳಲ್ಲಿ ಪಾಲ್ಗೊಳ್ಳಬಹುದು ಎಂದು ಶ್ರೀಮಠದ ಪೀಠಾಧಿಪತಿ ಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳು ಭಕ್ತರಿಗೆ ತಿಳಿಸಿದರು.
ವಿವಿಧಡೆ ಗುರುಪೂರ್ಣಿಮೆ ಆಚರಣೆ
ಸ್ಥಳೀಯ ಹಿಂದೂ ಜಾಗರಣಾ ಸಮಿತಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ, ವಿವಿಧ ಶಾಲಾ ಕಾಲೇಜುಗಳಲ್ಲಿಯೂ ಗುರುಪೂರ್ಣಿಮೆಯ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗುರುಗಳಿಗೆ ತಮ್ಮ ಭಕ್ತಪೂರ್ವಕ ನಮನಗಳನ್ನು ತಿಳಿಸುವ ಮೂಲಕ ಗುರುವಂದನೆ ಸಲ್ಲಿಸಿವೆ. ತಮ್ಮ ತಮ್ಮ ಗುರುಗಳನ್ನು ಕಾಣುವುದು ಭಕ್ತಿಯ ನಮನ ಸಲ್ಲಿಸುವುದು ಅವರ ಆರ್ಶಿವಾದ ಪಡೆಯುವುದು ಎಲ್ಲಡೆ ಕಂಡುಬಂತು.