ಚಾಗಭಾವಿ ರಸಗೊಬ್ಬರ ಅಂಗಡಿ ಕಳ್ಳತನ- ಡಾಗ್ ಸ್ಪೇಷಲ್ ತಪಾಸಣೆ

ಸಿರವಾರ.ಸೆ.೨೬-ರಸಗೊಬ್ಬರದ ಅಂಗಡಿಯ ಬೀಗ ಮುರಿದು ಕಳ್ಳರು ತಮ್ಮ ಕೈಚಳಕ ತೊರಿಸಿದ್ದಾರೆ.
ತಾಲೂಕಿನ ಚಾಗಭಾವಿ ಗ್ರಾಮದ ನಿಹಾರಿಕ ಟ್ರೇಡರ್ಸ(ರಸಗೊಬ್ಬರ) ಅಂಗಡಿಯ ಕೀಲಿ ಮುರಿದು ಬಾಗಿಲು ತೆಗೆದು ಅಂಗಡಿಯಲ್ಲಿದ ಕಂಪ್ಯೂಟರ್, ಪ್ರೀಂಟರ್, ಡಿವಿಆರ್ ಸೇರಿ ಇನ್ನಿತರ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಕ್ರೀಮಿನಾಶಕದ ಬಾಕ್ಸ್‌ಗಳನ್ನು ಹೋಗಿರುವ ಬಗ್ಗೆ ಅಂಗಡಿ ಮಾಲಿಕ ತಿಳಿಸಿದ್ದಾರೆ.
ಭೇಟಿ :- ಕಳ್ಳತನವಾಗಿರುವ ಸುದ್ದಿ ತಿಳಿದು ಸಿರವಾರ ಸಿಪಿಐ ಗುರುರಾಜ ಕಟ್ಟಿಮನೆ, ಪಿಎಸ್‌ಐ ಗೀತಾಂಜಲಿ ಶಿಂಧೆ, ಶ್ವಾನದಳದವರು ಆಗಮಿಸಿ ತಪಾಸಣೆ ಮಾಡುತ್ತಿದ್ದಾರೆ.